ಮದುವೆ ನಂತರ ಮಧುಚಂದ್ರಕ್ಕೆ ತೆರಳಬೇಕಿದ್ದ ಜೋಡಿ ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.22- ಪಾಪ ಬೆಳಗ್ಗೆ ಮದುವೆಯಾದ ಈ ಜೋಡಿ ಸಂಜೆ ವೇಳೆಗೆ ಕ್ವಾರಂಟೈನ್ ಆಗಬೇಕಾಯಿತು. ಕೊರೊನಾದ ಅಟ್ಟಹಾಸಕ್ಕೆ ನವ ವಿವಾಹಿತರು ಮದುವೆಯಾದ ದಿನದಂದೇ ಕ್ವಾರಂಟೈನ್‍ಗೆ ಒಳಗಾದರು.

ಇದು ಇವರ ತಪ್ಪಿನಿಂದಲ್ಲ. ಮದುವೆ ಮನೆ ಅಡುಗೆ ಭಟ್ಟನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಮದುವೆಗೆ ಬಂದವರನ್ನೆಲ್ಲಾ ಕ್ವಾರಂಟೈನ್ ಮಾಡಲಾಯಿತು. ಬೆಳಗ್ಗೆತಾನೆ ಮದುವೆಯಾದ ನವ ಜೋಡಿ ಸಂಜೆ ವೇಳೆಗೆ ಕ್ವಾರಂಟೈನ್‍ನಲ್ಲಿ ಬಂಯಾದರು.

ತುಮಕೂರು ಜಿಲ್ಲೆ ಗುಬ್ಬಿಯ ಹೆರೂರಿನಲ್ಲಿ ಮದುವೆಯೊಂದು ನಡೆಯಿತು. ಹುಡುಗನ ಮನೆ ಆವರಣದಲ್ಲೇ ಸರಳವಾಗಿ ವಿವಾಹ ನಡೆದಿದೆ. ಈ ಮದುವೆಗೆ ಅಡುಗೆ ಮಾಡಲು ಬಂದಿದ್ದ 55 ವರ್ಷದ ಭಟ್ಟನಿಗೆ ಸೋಂಕು ದೃಢಪಟ್ಟಿದೆ.

ಜೂ.14ರಂದು ಈತನ ಗಂಟಲ ದ್ರವ ಪರೀಕ್ಷೆಗೆ ಕೊಟ್ಟು ಬಂದಿದ್ದ. ಫಲಿತಾಂಶ ಬರುವವರೆಗೂ ಆತನನ್ನು ಕ್ವಾರಂಟೈನಲ್ಲಿ ಇಡಬೇಕಾಗಿತ್ತು. ಆದರೆ, ಈತ ಎಲ್ಲಾ ಕಡೆ ಓಡಾಡಿಕೊಂಡು ಅಡುಗೆ ಕೆಲಸ ಮಾಡಿಕೊಂಡಿದ್ದ.

ಜೂ.18ರಂದು ಈತನಿಗೆ ಪಾಸಿಟಿವ್ ರಿಪೋರ್ಟ್ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಅಕಾರಿಗಳು ಅಡುಗೆ ಭಟ್ಟ ಇದ್ದ ಮದುವೆ ಮನೆ ಮೇಲೆ ದಾಳಿ ಮಾಡಿದ್ದಾರೆ. ಅಡುಗೆ ಭಟ್ಟ, ವಧು-ವರರು, ಕ್ಯಾಮರಾ ಮನ್, ವಧು ಮತ್ತು ವರನ ಸಂಪರ್ಕ ಇದ್ದವರೂ ಸೇರಿ ಒಟ್ಟಾರೆ 56 ಮಂದಿಯನ್ನು ಕ್ವಾರಂಟೈನ್ ಮಾಡಿದ್ದಾರೆ.

ಕೊರೊನಾ ಸೋಂಕಿತ ಅಡುಗೆ ಭಟ್ಟನಿಗೆ ಟ್ರಾವಲ್ ಇಸ್ಟ್ರಿ ಏನೂ ಇಲ್ಲ. ಈತನಿಗೆ ಟಿಬಿ ಹಾಗೂ ಹೃದಯ ಸಂಬಂ ಕಾಯಿಲೆ ಇದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಂದ ಸೋಂಕು ತಗುಲಿರಬಹುದೆಂದು ಹೇಳಲಾಗುತ್ತಿದೆ.

Facebook Comments

Sri Raghav

Admin