ವಿಷಾನಿಲ ದುರಂತ : ಎಲ್‍ಜಿ ಪಾಲಿಮರ್ಸ್ ಕಂಪನಿಗೆ 50 ಕೋಟಿ ರೂ. ದಂಡ ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 8- ನಿರ್ಲಕ್ಷ್ಯದಿಂದಾಗಿ ವಿಷಾನಿಲ ಸೋರಿಕೆಯಾಗಿ 11 ಜನರ ಸಾವು ಮತ್ತು ಅನೇಕ ಮಂದಿಯ ಅಸ್ವಸ್ಥತೆಗೆ ಕಾರಣವಾದ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಎಲ್‍ಜಿ ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‍ಜಿಟಿ) 50 ಕೋಟಿ ರೂ. ದಂಡವನ್ನು ಪರಿಹಾರ ಮೊತ್ತವಾಗಿ ವಿಧಿಸಿದೆ.

ಅಲ್ಲದೇ ಈ ಪ್ರಕರಣದ ಸಂಬಂಧ ಎನ್‍ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಸ್ ಕುಮಾರ್ ಗೊಯೆಲ್ ನೇತೃತ್ವದ ನ್ಯಾಯಪೀಠವು ಕೇಂದ್ರ, ರಾಜ್ಯ ಸರ್ಕಾರ, ಎಲ್‍ಜಿ ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಇತರರಿಗೆ ನೋಟಿಸ್ ಜಾರಿಗೊಳಿಸಿದೆ.

ಈ ದುರಂತದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಬಿ. ಶೇಷಶಯನ ರೆಡ್ಡಿ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯೊಂದನ್ನು ರಚಿಸಿರುವ ಎನ್‍ಜಿಟಿ ಮೇ 18ರೊಳಗೆ ವರದಿ ನೀಡುವಂತೆ ಸೂಚಿಸಿದೆ.

ಪರಿಹಾರ ಮತ್ತು ನಷ್ಟ ಮೊತ್ತವಾಗಿ ಕಂಪನಿಯು 50 ಕೋಟಿ ರೂ.ಗಳ ದಂಡ ಪಾವತಿಸಬೇಕು ಹಾಗೂ ಈ ಮೊತ್ತವನ್ನು ವಿಶಾಖಪಟ್ಟಣಂ ಜಿಲ್ಲಾ ದಂಡಾಧಿಕಾರಿ ಅವರ ಬಳಿ ಇರಿಸಬೇಕು ಎಂದು ನಿರ್ದೇಶನ ನೀಡಿದೆ.

Facebook Comments

Sri Raghav

Admin