ಎನ್‍ಐಎ ಬಲೆಗೆ ಬಿದ್ದ ಪಾಕ್ ಸ್ಪೈ, ಐಎಸ್‍ಐ ಆಪ್ತ ಸಹಚರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.15- ಆಂಧ್ರಪ್ರದೇಶದ ಕರಾವಳಿ ಜಿಲ್ಲೆ ವಿಶಾಖಪಟ್ಟಣಂನಲ್ಲಿ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ವ್ಯಕ್ತಿಯೊಬ್ಬನನ್ನು ರಾಷ್ಟ್ರೀಯ ತನಿಖೆ ಸಂಸ್ಥೆ(ಎನ್‍ಐಎ) ಅಕಾರಿಗಳು ಬಂಸಿದ್ದಾರೆ.

ಈತನ ಬಂಧನದಿಂದಾಗಿ ಭಾರತದ ಕೆಲವೆಡೆ ಪಾಕಿಸ್ತಾನದ ಪರ ನಡೆಯುತ್ತಿದ್ದ ಗೂಢಾಚಾರಿಕೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಮತ್ತಷ್ಟು ಮಂದಿ ಬಂತರಾಗುವ ಸಾಧ್ಯತೆ ಇದೆ.

ಗುಜರಾತ್‍ನ ಗೋದ್ರಾದ ನಿವಾಸಿ ಗುಟೇಲಿ ಇಮ್ರಾನ್(37) ಬಂತ ವ್ಯಕ್ತಿ. ಈತ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಇಂಟರ್ ಸರ್ವೀಸ್ ಇಂಟಲಿಜೆನ್ಸ್(ಐಎಸ್‍ಐ) ಜೊತೆ ನಿಕಟ ಸಂಪರ್ಕ ಹೊಂದಿದ್ದು, ವಿಶಾಖಪಟ್ಟಣಂನ ಭಾರತೀಯ ನೌಕಾ ನೆಲೆಗೆ ಸಂಬಂಸಿದ ರಹಸ್ಯ ಮಾಹಿತಿಗಳನ್ನು ಪಾಕ್‍ಗೆ ವರ್ಗಾಯಿಸುತ್ತಿದ್ದ ಎಂದು ಎನ್‍ಐಎ ಉನ್ನತಾಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಐಎಸ್‍ಐನ ಅತ್ಯಂತ ವ್ಯವಸ್ಥಿತ ಬೇಹುಗಾರಿಕೆ ಜಾಲವಾಗಿದ್ದು, ಭಾರತದ ವಿವಿಧೆಡೆ ಇರುವ ನೌಕಾನೆಲೆಗಳು ಮತ್ತು ರಕ್ಷಣಾ ಇಲಾಖೆಯ ಕೇಂದ್ರಗಳಿಗೆ ಸಂಬಂಧಪಟ್ಟ ಸೂಕ್ಷ್ಮ ಮತ್ತು ವರ್ಗೀಕೃತ ಮಾಹಿತಿಗಳನ್ನು ರಹಸ್ಯವಾಗಿ ಪಾಕಿಸ್ತಾನಕ್ಕೆ ನೀಡಲು ಐಎಸ್‍ಐ ಗೂಢಾಚಾರರಿಂದ ಭಾರತದಲ್ಲಿ ಕೆಲವು ಸ್ಥಳೀಯ ಬೇಹುಗಾರರನ್ನು ನಿಯೋಜಿಸಲಾಗಿತ್ತು.

ಇವರು ಭಾರತ ನೌಕಾಪಡೆಯ ನೌಕೆಗಳು ಮತ್ತು ಸಬ್‍ಮೆರಿನ್‍ಗಳು ಇರುವ ಸ್ಥಳ , ಅವುಗಳು ಚಲಿಸುವ ಮಾರ್ಗ ಮತ್ತು ನೌಕಾಪಡೆಯ ಚಲನವಲನಗಳ ಬಗ್ಗೆ ನಿಗಾವಹಿಸಿ ಐಎಸ್‍ಐಎಗೆ ರಹಸ್ಯ ಮಾಹಿತಿ ರವಾನಿಸುತ್ತಿದ್ದರು.

ಈ ಬೇಹುಗಾರಿಕೆ ಜಾಲದಲ್ಲಿ ನೌಕಾಪಡೆಯ ಕೆಲವು ಸಿಬ್ಬಂದಿಗಳು ಶಾಮೀಲಾಗಿರುವ ಬಗ್ಗೆ ಮಾಹಿತಿ ನಡೆಸಿದ್ದು, ತನಿಖೆ ತೀವ್ರಗೊಳಿಸಲಾಗಿದೆ ಎಂದು ತನಿಖಾಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin