ನೈಜೀರಿಯಾ ಪ್ರಜೆ ಬಂಧನ: 2.40 ಲಕ್ಷ ಮೌಲ್ಯದ ಹೆರಾಯಿನ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.20- ಸರ್ವೀಸ್ ರಸ್ತೆಯೊಂದರಲ್ಲಿ ಮಾದಕ ವಸ್ತು ಹೆರಾಯಿನ್ ಮತ್ತು ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಗೋವಿಂದಪುರ ಠಾಣೆ ಪೊಲೀಸರು ಬಂಸಿ 2.40 ಲಕ್ಷ ರೂ. ಮೌಲ್ಯದ 10 ಗ್ರಾಂ ಹೆರಾಯಿನ್ ಮತ್ತು ಕೊಕೈನ್ ವಶಪಡಿಸಿಕೊಂಡಿದ್ದಾರೆ.
ಫೆÇಫಾನಾ ಜೈಕ್ನಾ ಅಲಿಯಾಸ್ ಜೇಮ್ಸ್ (27) ಬಂತ ನೈಜೀರಿಯಾ ಪ್ರಜೆ.

ಈತ ಜಯಂತಿನಗರದ 4ನೆ ಕ್ರಾಸ್ ಈಸ್ಟರ್ ಎನ್‍ಕ್ಲೈವ್‍ನಲ್ಲಿ ನೆಲೆಸಿದ್ದನು. ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುವ ಪೆಡ್ಲರ್‍ಗಳನ್ನು ಹತ್ಯೆ ಮಾಡಲು ಹಿರಿಯ vಲೀಸ್ ಅಕಾರಿಗಳು ಸೂಚನೆ ನೀಡಿದ್ದರು. ಅದರಂತೆ ಗೋವಿಂದಪುರ ಠಾಣೆ ಪೊಲೀಸರು ತಂಡಗಳನ್ನು ಮಾಡಿಕೊಂಡು ಪತ್ತೆಕಾರ್ಯದಲ್ಲಿ ತೊಡಗಿದ್ದಾಗ ಎಚ್‍ಬಿಆರ್ ಲೇಔಟ್, 5ನೆ ಬ್ಲಾಕ್, ಅಂಬೇಡ್ಕರ್ ಮೈದಾನದ ಸರ್ವೀಸ್ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಬಂಸಿ ಮಾದಕ ವಸ್ತುಗಳು, 500ರೂ. ಹಣ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಮಾಲೀಕರ ವಿಚಾರಣೆ: ನೈಜೀರಿಯಾ ದೇಶದ ಪ್ರಜೆಯಾದ ಈತನ ವೀಸಾ ದಾಖಲಾತಿಗಳನ್ನು ಪರಿಶೀಲಿಸದೆ ವಾಸಿಸಲು ಮನೆ ಬಾಡಿಗೆಗೆ ನೀಡಿದ್ದ ಮಾಲೀಕರುಗಳನ್ನು ಸಹ ವಿಚಾರಣೆ ನಡೆಸಿದ್ದು, ಅವರ ವಿರುದ್ಧವೂ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ.

ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಶರಣಪ್ಪ ನಿರ್ದೇಶನದಲ್ಲಿ ಕೆಜಿ ಹಳ್ಳಿ ಉಪವಿಭಾಗದ ಎಸಿಪಿ ಜಗದೀಶ್ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಪ್ರಕಾಶ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.

Facebook Comments