ನೈಟ್‍ಕಫ್ರ್ಯೂ ಉಲ್ಲಂಘನೆ: 120 ವಾಹನಗಳು ಪೊಲೀಸರ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.29- ನಗರದಲ್ಲಿ ನೈಟ್ ಕಫ್ರ್ಯೂ ನಿಯಮ ಉಲ್ಲಂಘಿಸಿದ 120 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಿನ್ನೆ ರಾತ್ರಿ ನೈಟ್ ಕಫ್ರ್ಯೂ ಇದುದ್ದರಿಂದ ಹೊಯ್ಸಳ ಪೊಲೀಸರು ಮೈಕ್ ಮೂಲಕ ಅಂಗಡಿ, ಹೋಟೆಲ್‍ಗಳನ್ನು ಮುಚ್ಚುವಂತೆ ಹಾಗೂ ಸಾರ್ವಜನಿಕರು ಬೇಗ ಮನೆ ಸೇರಿಕೊಳ್ಳುವಂತೆ ಸೂಚಿಸಿದರು.

ರಾತ್ರಿ 10 ಗಂಟೆಯಾಗುತ್ತಿದ್ದಂತೆ ಪ್ರಮುಖ ಸ್ಥಳಗಳು, ಆಯಾಕಟ್ಟಿನ ಜಾಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ತಪಾಸಣೆ ನಡೆಸಿದರು.
ಅನಾವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.

ನಿನ್ನೆ ಮೊದಲ ದಿನವಾದ್ದರಿಂದ ಕಠಿಣ ಕ್ರಮ ಕೈಗೊಳ್ಳದೆ ಕೊಂಚ ಸಡಿಲಿಕೆ ನೀಡಲಾಗಿತ್ತು. ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಮುಂದಾಗಿದ್ದು, ನಿನ್ನೆ ರಾತ್ರಿಯಿಂದ 10 ದಿನಗಳ ಕಾಲ ನೈಟ್ ಕಫ್ರ್ಯೂ ಜಾರಿಯಲ್ಲಿರುತ್ತದೆ. ಇಂದಿನಿಂದ ಕಟ್ಟುನಿಟ್ಟಾಗಿ ನೈಟ್ ಕಫ್ರ್ಯೂ ನಿಯಮ ಪಾಲನೆಯಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

Facebook Comments