‘ನಿಖಿಲ್ ಎಲ್ಲಿದ್ದೀಯಪ್ಪ’ ಸಿನಿಮಾ ಟೈಟಲ್‍ಗೆ ಭಾರೀ ಬೇಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.8-ಲೋಕಸಭಾ ಚುನಾ ವಣಾ ಕಣದಲ್ಲಿ ಟ್ರೋಲ್ ಆಗಿರುವ ನಿಖಿಲ್ ಎಲ್ಲಿದ್ದೀಯಪ್ಪ…, ಜೋಡೆತ್ತು, ಕಳ್ಳೆತ್ತು ಎಂಬ ಹೆಸರಿಗೆ ಚಿತ್ರದ ಟೈಟಲ್‍ಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಬಹುತೇಕ ಹೊಸ ಹೊಸ ನಿರ್ಮಾಪಕರು ತಮ್ಮ ಚಿತ್ರಕ್ಕೆ ಟೈಟಲ್ ನೀಡುವಂತೆ ವಾಣಿಜ್ಯ ಮಂಡಳಿ ಮೊರೆ ಹೋಗಿದ್ದಾರೆ.

ನಿಖಿಲ್ ಎಲ್ಲಿದ್ದೀಯಪ್ಪ, ಕಳ್ಳೆತ್ತು, ಜೋಡೆತ್ತು, ಮಂಡ್ಯದ ಹೆಣ್ಣು, ಸುಮಲತಾ ಎಂಬ ಶೀರ್ಷಿಕೆಯನ್ನು ಬಹುತೇಕರು ಕೇಳಿದ್ದಾರೆ. ಆದರೆ ವಿವಾದ ಸೃಷ್ಟಿಸುತ್ತಿರುವ ಇಂತಹ ಶೀರ್ಷಿಕೆ ನೀಡಲು ವಾಣಿಜ್ಯ ಮಂಡಳಿ ಹಿಂದೇಟು ಹಾಕಿದೆ.

ನಿಖಿಲ್ ಎಲ್ಲಿದ್ದೀಯಪ್ಪ ಟೈಟಲ್ ನಲ್ಲಿ ಸಿನಿಮಾ ಮಾಡಲು ಹಲವರು ಪ್ಲಾನ್ ಮಾಡಿದ್ದಾರೆ. ಒಟ್ಟು 7 ರಿಂದ 8 ಚಿತ್ರತಂಡಗಳು ಟೈಟಲ್ ಕೊಡುವಂತೆ ಫಿಲಂ ಚೇಂಬರ್ ಗೆ ಮನವಿ ಮಾಡಿದೆ.

ಈಗಾಗಲೇ ಸಾಕಷ್ಟು ವಿವಾದ ಹುಟ್ಟು ಹಾಕಿರುವ ಈ ಟೈಟಲ್‍ಗಳ ಚಿತ್ರಕ್ಕೆ ಅನುಮತಿ ನೀಡಿದರೆ ಬೇರೆ ಬೇರೆ ತೊಂದರೆ ಎದುರಾಗಬಹುದು ಎಂಬ ಕಾರಣಕ್ಕೆ ವಾಣಿಜ್ಯ ಮಂಡಳಿ ಈ ಶೀರ್ಷಿಕೆ ನೀಡಲು ನಿರಾಕರಿಸಿದೆ.

ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಉಲ್ಲೇಖಿಸಿ `ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಹೇಳಿದ್ದರು. ಆ ಬಳಿಕ ಈ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೂಪಗಳಲ್ಲಿ ಹರಿದಾಡುತ್ತಿದೆ.

Facebook Comments