ಸಿಡಿ ಪ್ರಕರಣ ಕುರಿತು ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯವೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ, ಮಾ.26- ಸಿಡಿ ಪ್ರಕರಣ ನನಗೆ ಬೇಕಾಗಿರೋ ವಿಚಾರವಲ್ಲ. ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಕೊರೊನಾ ಬಂದ ನಂತರ ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಮಾತನಾಡಲು ಬಹಳ ವಿಚಾರಗಳಿವೆ. ಈ ರೀತಿ ವೈಯಕ್ತಿಯ ವಿಚಾರ ತೆಗೆದು ಟೀಕೆ ಟಿಪ್ಪಣಿ ಮಾಡಲು ನಾನು ಸಿದ್ಧನಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದಲ್ಲಿ ಕೊರೊನಾ ಎರಡನೆ ಅಲೆ ಶುರುವಾಗಿದೆ. ನಾವೆಲ್ಲೇ ಮಾಸ್ಕ ಧರಿಸಬೇಕು, ಸಾಮಾಜಿಕ ಅಂತರ ಪಾಲಿಸಬೇಕಾಗುತ್ತದೆ. ಆದರೆ, ರಾಜಕೀಯ ಕಾರ್ಯಕ್ರಮಗಳಲ್ಲಿ ನಾವೆಲ್ಲೇ ಸಹಜವಾಗಿ ಎಡವುತ್ತಿದ್ದೇವೆ.ಇದರಲ್ಲಿ ಬದಲಾವಣೆ ಆಗಬೇಕು ನಮ್ಮನ್ನು ನಾವು ಎಚ್ಚರಿಸಿಕೊಳ್ಳಬೇಕು ಎಂದರು.

ಸರ್ಕಾರವನ್ನೂ ನಾವು ದೂರಲು ಆಗಲ್ಲ, ಅವರಿಗೂ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಜನರ ಆರೋಗ್ಯ ಬಹಳ ಮುಖ್ಯ. ಅದರ ಜತೆ ಜೊತೆಗೆ ನಿರ್ಮಾಪಕರು ನೂರಾರು ಕೋಟಿ ಹಣ ಹಾಕಿ ಸಿನಿಮಾ ಮಾಡುತ್ತಾರೆ. ಅವರ ಹಣವೂ ರಿಕವರಿ ಆಗಬೇಕಾಗುತ್ತದೆ. ನಿರ್ಮಾಪಕರಿಗೆ ಹಾಕಿರೋ ಬಂಡವಾಳ ನಿರ್ಮಾಪಕರಿಗೆ ಬರಬೇಕಲ್ವಾ ಎಂದು ಪ್ರಶ್ನಿಸಿದರು.

Facebook Comments