ನಿಖಿಲ್ ಕುಮಾರಸ್ವಾಮಿಗೆ 30ನೆ ಹುಟ್ಟುಹಬ್ಬದ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.22- ರಾಜಕೀಯ ಹಾಗೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿಗೆ ಇಂದು 30ನೆ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅನಿತಾಕುಮಾರಸ್ವಾಮಿ ನಿರ್ಮಿಸಿದ ಜಾಗ್ವಾರ್ ಚಿತ್ರದಿಂದ ಚಿತ್ರನಟನಾದ ನಿಖಿಲ್‍ಗೆ ಅಪಾರ ಅಭಿಮಾನಿಗಳ ಬಳಗವೇ ಇದ್ದು ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ನಿಖಿಲ್ ಮನೆ ಮುಂದೆ ಜಮಾಯಿಸಿದ್ದರು.

ತಮ್ಮ ಅಭಿಮಾನಿಗಳು ತಂದಿದ್ದ ಕೇಕ್ ಅನ್ನು ಕತ್ತರಿಸುವ ಮೂಲಕ ಜನ್ಮದಿನವನ್ನು ಆಚರಿಸಿಕೊಂಡ ನಿಖಿಲ್‍ಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.ಲೋ ಕಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಚಿತ್ರರಂಗದಿಂದ ದೂರ ಉಳಿದಿದ್ದ ನಿಖಿಲ್ ಕುಮಾರಸ್ವಾಮಿ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದು 4 ಚಿತ್ರಗಳಲ್ಲಿ ನಟಿಸುವ ಮೂಲಕ ಅವರ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಜಾಗ್ವಾರ್, ಸೀತಾರಾಮ ಕಲ್ಯಾಣ, ಮುನಿರತ್ನ ಕುರುಕ್ಷೇತ್ರ ಚಿತ್ರಗಳಲ್ಲಿ ನಟಿಸಿದ್ದ ನಿಖಿಲ್ ಕುಮಾರಸ್ವಾಮಿ ಈಗ ಮತ್ತೆ ಮುನಿರತ್ನರ ವೃಷಾಭಾದ್ರಿ ಪ್ರೊಡಕ್ಷನ್ಸ್ ಅಡಿಯಲ್ಲಿ ತಯಾರಾಗುತ್ತಿರುವ ಧನುಷ್ ಐಪಿಎಸ್ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಅಂಬಾರಿ, ಅದ್ಧೂರಿ ಚಿತ್ರಗಳ ನಿರ್ದೇಶಕ ಎ.ಪಿ. ಅರ್ಜುನ್ ನಿರ್ದೇಶನದ ಚಿತ್ರದಲ್ಲೂ ಬಣ್ಣ ಹಚ್ಚಲಿರುವ ನಿಖಿಲ್, ಲೈಕಾ ಪ್ರೊಡಕ್ಷನ್ ಮತ್ತು ವಿಜಯಕುಮಾರ್ ನಿರ್ಮಾಣದ ಚಿತ್ರಗಳೂ ನಿಖಿಲ್ ಕೈಯಲ್ಲಿವೆ.

ನಿಖಿಲ್‍ಕುಮಾರಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಹೊರ ಬಂದ ಈ 4 ನಾಲ್ಕು ಚಿತ್ರಗಳ ಪೋಸ್ಟರ್‍ಗಳು ಕೂಡ ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿದ್ದು 2020ರಲ್ಲಿ ನಿಖಿಲ್ ಬ್ಯುಸಿನಟನಾಗಿ ಹೊರಹೊಮ್ಮಲಿದ್ದಾರೆ.

Facebook Comments