‘ನೋ ಟೆನ್ಷನ್, ನಾನೇ ಗೆಲ್ಲೋದು’ : ನಿಖಿಲ್ ವಿಶ್ವಾಸ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ನಾಳೆಯ ಫಲಿತಾಂಶದ ಬಗ್ಗೆ ನನಗೆ ಯಾವುದೇ ಆತಂಕವಾಗಲೀ, ಭಯವಾಗಲೀ ಇಲ್ಲ. ಮಂಡ್ಯದ ಜನತೆ ನನ್ನನ್ನು ಬೆಂಬಲಿಸೋದು ನಿಶ್ಚಿತ‌ ಎಂದು ಮಂಡ್ಯ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ ಕುಮಾರಸ್ವಾಮಿ ವಿಶ್ವಾಸದ ನುಡಿಗಳನ್ನಾಡಿದ್ದಾರೆ.

ಇಂದು ಬೆಳಿಗ್ಗೆ ಶೃಂಗೇರಿ ಶಾರದಾಂಬೆ ದರ್ಶನಕ್ಕೆ ತೆರಳಿ ಪೂಜೆ ಸಲ್ಲಿಸಿ ಶ್ರೀಗಳ ಆಶೀರ್ವಾದ ಪಡೆದ ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಮಧ್ಯಾಹ್ನ ಹೆಲಿಕಾಪ್ಟರ್ ಮೂಲಕ ಹೊಳೆನರಸೀಪುರದ ಹೆಲಿಪ್ಯಾಡ್ ಗೆ ಆಗಮಿಸಿ ದೇವೇಗೌಡರ ಮಾರ್ಗದರ್ಶನದಂತೆ ಮನೆ ದೇವರಾದ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ ಮತ್ತು ಹುಟ್ಟೂರು ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ನಾನು ಸೋಲುವ ಪ್ರಶ್ನೆಯೇ ಇಲ್ಲ. ಮಾಧ್ಯಮಗಳು ನನ್ನ ಪರವಾಗಿ ಆರು ಮತ್ತು ನನ್ನ ಎದುರಾಳಿ‌‌ ಸುಮಲತ‌‌ ಅವರ ಪರವಾಗಿ ನಾಲ್ಕು ಸಮೀಕ್ಷೆಗಳ ವರದಿ ಬಂದಿವೆ. ನಾನು ಗೆಲ್ಲುವು ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ‌ ನಡುವೆ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ ಮಂಡ್ಯದಲ್ಲಿ ನಿಖಿಲ್ ಗೆಲ್ಲುವುದು ನೂರಕ್ಕೆ ನೂರು ಖಚಿತ‌ ಅಲ್ಲದೇ ಹಾಸನ, ತುಮಕೂರಿನಲ್ಲೂ ನಮ್ಮ ಕುಟುಂಬದವರೇ ಗೆಲ್ಲುತ್ತಾರೆ. ಮಂಡ್ಯ ಚುನಾವಣೆ ಸೋತರೆ ಸರ್ಕಾರ‌ ಬೀಳುತ್ತೆ ಎನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ.

ಕುಮಾರಸ್ವಾಮಿ ‌ಮುಖ್ಯಮಂತ್ರಿಯಾಗಿ‌ ಐದು ವರ್ಷ ಪೂರ್ಣಗೊಳಿಸುತ್ತಾರೆ. ಮಾಧ್ಯಮ ದವರು ನಿಮಗೆ ಇಷ್ಟ ಬಂದಹಾಗೆ ವರದಿ ಮಾಡುತ್ತೀರಿ ಎಂದು‌ ಅಸಮಾಧಾನ ವ್ಯಕ್ತಪಡಿಸಿದ‌ ಅವರು ಸತ್ಯಾಸತ್ಯತೆ‌‌ ಬಗ್ಗೆ ಪರಾಮರ್ಶಿಸಿ ವರದಿ‌ ಮಾಡಬೇಕು ಎಂದರು.

ಯಡಿಯೂರಪ್ಪ ಸರ್ಕಾರ ಬೀಳಿಸುವುದಾಗಿ ಹಗಲುಗನಸು ಕಾಣುತ್ತಿದ್ದಾರೆ. ಅವರ ಪ್ರಯತ್ನ ವ್ಯರ್ಥ ವಾಗಲಿದೆ. ಯಾವುದೇ ಕಾರಣಕ್ಕೂ ಸರ್ಕಾರವನ್ನು ಯಾರು ಬೀಳಿಸಲು ಸಾಧ್ಯವಿಲ್ಲ‌ ಎಂದು ಅನಿತಾ‌ ಕುಮಾರಸ್ವಾಮಿ ವಿಶ್ವಾಸದಿಂದ ನುಡಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin