3 ಬಾರಿ ಎಫ್-1 ವಿಶ್ವಚಾಂಪಿಯನ್ ಆಗಿದ್ದ ನಿಕ್ಕಿ ಲೌಡಾ ಇನ್ನಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ವಿಯೆನ್ನಾ(ಆಸ್ಟ್ರಿಯಾ), ಮೇ 21-ಪ್ರಸಿದ್ಧ ರೇಸ್ ಕಾರ್ ಚಾಲಕ ಮತ್ತು ಮೂರು ಬಾರಿ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ನಿಕ್ಕಿ ಲೌಡಾ(70) ಇನ್ನಿಲ್ಲ. ಶ್ವಾಸಕೋಸ ಕಸಿ ಚಿಕಿತ್ಸೆಗೆ ಒಳಗಾಗಿ ಐದು ತಿಂಗಳಿನಿಂದ ಚೇತರಿಸಿಕೊಳ್ಳಲು ಹೆಣಗುತ್ತಿದ್ದ ನಿಕ್ಕಿ ನಿನ್ನೆ ರಾತ್ರಿ ತಮ್ಮ ಕುಟುಂಬ ಸದಸ್ಯರು ಮತ್ತು ಬಂದು-ಮಿತ್ರರು ಸನಿಹದಲ್ಲಿದ್ದಾಗಲೇ ಕೊನೆಯುಸಿರೆಳೆದರು.

ಆಂಡ್ರಿಯಾಸ್ ನಿಕೋಲಾಸ್ ನಿಕ್ಕಿ ಲೌಡಾ 1975, 1977 ಮತ್ತು 1984ರಲ್ಲಿ ಮೂರು ಬಾರಿ ಎಫ್-1 ಚಾಂಪಿಯನ್ ಆಗಿದ್ದರು. ಮರ್ಸಿಡಿಸ್ ಮತ್ತು ಫೆರಾರಿ ರೇಸ್ ಕಾರುಗಳಿಗೆ ಚಾಲಕರಾಗಿ ಪ್ರತಿನಿಧಿಸುತ್ತಿದ್ದ ನಿಕ್ಕಿ ಅದ್ಭುತ ಚಾಲನಾ ಕೌಶಲ್ಯ ಹೊಂದಿದ್ದರು.

1976ರಲ್ಲಿ ನಿಕ್ಕಿ ಎಫ್-1 ಚಾಂಪಿಯನ್‍ಶಿಪ್‍ನಲ್ಲಿ ಗೆಲುವು ಸಾಧಿಸುವ ನೆಚ್ಚಿನ ರೇಸ್ ಡ್ರೈವರ್ ಆಗಿದ್ದರು. ಆದರೆ ಅವರಿಗೆ ಗಂಭೀರ ಅಪಘಾತವಾಯಿತು. ಆದಾಗ್ಯೂ ಮರು ವರ್ಷ ಅಂದರೆ 1977ರಲ್ಲಿ ವಿಶ್ವಚಾಂಪಿಯನ್ ಆದರು.

ಕ್ರೀಡೋತ್ಸಾಹ ಮತ್ತು ಸ್ಫೂರ್ತಿಗೆ ಅನ್ವರ್ಥನಾಮದಂತಿದ್ದ ನಿಕ್ಕಿಗೆ 42ನೇ ವಯಸ್ಸಿನಲ್ಲಿ ಬೆಂಕಿಚೆಂಡಿನಿಂದ ಗಾಯಗಳಾಗಿದ್ದವು. ಎರಡು ಬಾರಿ ಮೂತ್ರಪಿಂಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin