ನಡಿಗೆಯ ಮೂಲಕ ತಿರುಪತಿ ತಲುಪಿದ ಶಾಸಕಿ ನಿಂಬಾಳ್ಕರ್ ದಂಪತಿ!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಜ.20-ರಾಜ್ಯದ ಇತಿಹಾಸದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಮತ್ತು ಶಾಸಕರಾದ ಅವರ ಪತ್ನಿ 9 ದಿನಗಳ ಪಾದಯಾತ್ರೆ ಮೂಲಕ ತೀರ್ಥಯಾತ್ರೆ ಮುಗಿಸಿ ಗಮನ ಸೆಳೆದಿದ್ದಾರೆ. ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತರಾದ (ಆಡಳಿತ) ಹೇಮಂತ ನಿಂಬಾಳ್ಕರ್ ಮತ್ತು ಅವರ ಪತ್ನಿ ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಕಳೆದ ಜ. 11ರಂದು ಬೆಂಗಳೂರಿಂದ ಪಾದಯಾತ್ರೆ ಹೊರಟು ಸುದೀರ್ಘ 263 ಕಿಮೀ ನಡಿಗೆಯ 9 ದಿನಗಳ ನಂತರ ಇಂದು ತಿರುಪತಿ ತಿರುಮಲ ದೇವಸ್ಥಾನಕ್ಕೆ ಬೆಳಿಗ್ಗೆ ತಲುಪಿದರು.

ಪ್ರಾರ್ಥನಾ ಪಾದಯಾತ್ರೆ ಮೂಲಕ ತಿರುಮಲ ಸನ್ನಿಧಿ ತಲುಪಿದ ನಿಂಬಾಳ್ಕರ್ ದಂಪತಿ ಶ್ರೀನಿವಾಸನ ದರ್ಶನಾಶೀರ್ವಾದ ಪಡೆದರು. ತಿರುಪತಿಯಿಂದ ತಿರುಮಲದವರೆಗಿನ 2500 ಮೇಲ್ಪಟ್ಟು ಮೇಲಗಪಂಕ್ತಿ ಹತ್ತುವುದು ಸಹ ಒಂದು ಸವಾಲಿನ ಭಕ್ತಿಯೇ ಸರಿ. ದೈವಿಯಾತ್ರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚಿಸಿದೆ ಎಂದು ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಈ ಸಂದರ್ಭದಲ್ಲಿ ಹೇಳಿದರು.

Facebook Comments