ನಿಮ್ಹಾನ್ಸ್ ಗೂ ಕಾಲಿಟ್ಟ ಕೊರೊನಾ, ಆ್ಯಂಬುಲೆನ್ಸ್ ಡ್ರೈವರ್ ಹಾಗೂ 30 ಸಿಬ್ಬಂದಿಗೆ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.6-ನಿಮ್ಹಾನ್ಸ್ ಆಸ್ಪತ್ರೆಯ ಆ್ಯಂಬುಲೆನ್ಸ್ ಡ್ರೈವರ್ ಹಾಗೂ 30 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು, ಸ್ಟಾಫ್ ನರ್ಸ್, ಚಾಲಕ ಹಾಗೂ ಸಿಬ್ಬಂದಿಗೆ ಕೊರೊನಾ ವೈರಸ್ ತಗುಲಿದೆ. ಸುಮಾರು 30 ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಇಲ್ಲಿ ಆತಂಕ ಹೆಚ್ಚಾಗಿದೆ.

ಕೊರೊನಾ ಪಾಸಿಟಿವ್ ಆಗಿದ್ದ ವ್ಯಕ್ತಿಗಳನ್ನು ಕೆಲ ಸಿಬ್ಬಂದಿ ಐಸೊಲೇಷನ್ ಮಾಡಿದ್ದರು. ಹೀಗಾಗಿ ಅವರಿಗೂ ಸೋಂಕು ತಗುಲಿದೆ.  ಆ್ಯಂಬುಲೆನ್ಸ್ ಡ್ರೈವರ್ ಮತ್ತು ಸಿಬ್ಬಂದಿ ಭೈರಸಂದ್ರದಲ್ಲಿರುವ ಕ್ವಾಟ್ರರ್ಸ್‍ನಲ್ಲಿ ವಾಸವಾಗಿದ್ದು, ಇದೀಗ ಕ್ವಾಟ್ರರ್ಸ್ ನಿವಾಸಿಗಳಿಗೂ ಆತಂಕ ಎದುರಾಗಿದೆ. ಆ್ಯಂಬುಲೆನ್ಸ್ ಚಾಲಕ, ಮತ್ತೊಬ್ಬರಿಗೆ ಸೋಂಕು ತಗುಲಿದ್ದರೂ ಕ್ವಾಟ್ರರ್ಸ್ ಸೀಲ್‍ಡೌನ್ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments