ಶ್ರೀಶೈಲಂನಲ್ಲಿರುವ ಜಲವಿದ್ಯುತ್ ಘಟಕದಲ್ಲಿ ಅಗ್ನಿದುರಂತ, 9 ಜನರ ರಕ್ಷಣೆಗೆ ಹರಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀಶೈಲಂ, ಆ.21-ತೆಲಂಗಾಣದ ಶ್ರೀಶೈಲಂನಲ್ಲಿರುವ ಜಲವಿದ್ಯುತ್‍ಘಟಕದಲ್ಲಿ ನಿನ್ನೆತಡರಾತ್ರಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಅಪಾಯದಲ್ಲಿ ಸಿಲುಕಿರುವ ಒಂಭತ್ತುಜನರರಕ್ಷಣೆಗಾಗಿ ಹರಸಾಹಸ ನಡೆಸಲಾಗಿದೆ.

ಈ ದುರ್ಘಟನೆಯಲ್ಲಿ 10 ಮಂದಿಯನ್ನುರಕ್ಷಿಸಲಾಗಿದ್ದು, ಆಸ್ಪತ್ರೆಯಲ್ಲಿಚಿಕಿತ್ಸೆ ಮುಂದುವರಿಸಲಾಗಿದೆ. ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯಲ್ಲಿರುವ ಶ್ರೀಶೈಲಂ ಡ್ಯಾಂಕಾಲುವೆಯಲ್ಲಿನ ಜಲವಿದ್ಯುತ್ ಘಟಕದಲ್ಲಿ ಬೆಂಕಿ ಕಾಣಿಕೊಂಡು ವ್ಯಾಪಿಸಿತು.

ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ಕಾರ್ಯಕರ್ತರು 10 ಮಂದಿಯನ್ನು ರಕ್ಷಿಸಿದರು. ಗಾಯಗೊಂಡ ಮತ್ತು ಆಸ್ವಸ್ಥರಾದ ಆರು ಜನರನ್ನುಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.

ದುರಂತ ಸಂಭವಿಸಿದ ಸ್ಥಳದಲ್ಲಿ ಐವರು ಎಂಜಿನಿಯರ್‍ಗಳು, ಇಬ್ಬರು ತಂತ್ರಜ್ಞರು ಸೇರಿದಂತೆ ಒಟ್ಟು ಒಂಭತ್ತು ಮಂದಿ ಬೆಂಕಿಯ ಬಲೆಯಲ್ಲಿ ಸಿಲುಕಿದ್ದು ಅವರ ರಕ್ಷಣೆಗಾಗಿ ಹರಸಾಹಸ ನಡೆಸಲಾಯಿತು.

ವಿದ್ಯುತ್ ಪ್ಯಾನಲ್ ಬೋರ್ಡ್‍ನಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿ ತಗುಲಿ ನಂತರ ಅಗ್ನಿ ಜ್ವಾಲೆಗಳು ಸುತ್ತುಮುತ್ತಲ ಸ್ಥಳಗಳಿಗೂ ವ್ಯಾಪಿಸಿತು. ಈ ದುರ್ಘಟನೆ ವೇಳೆ ಕಾಲುವೆಯಲಿ ಕಾರ್ಯ ನಿರ್ವಹಿಸುತ್ತಿದ್ದ ಕೆಲವು ಉದ್ಯೋಗಿಗಳು ಹೊರಗೆ ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ.

ಈ ಘಟನೆ ಸಂಭವಿಸಿದಾಗ ಹೈಡ್ರೋ ಎಲೆಕ್ಟ್ರಿಕ್ ಯೂನಿಟ್‍ನಲ್ಲಿ 20ಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಿದ್ದರು. ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ನಂತರ ಧಗಧಗಿಸಿ ದಟ್ಟ ಹೊಗೆ ಚಿಮ್ಮಿದ ದೃಶ್ಯಗಳನ್ನು ವಿದ್ಯುನ್ಮಾನ ಮಾಧ್ಯಮಗಳು ಬಿತ್ತರಿಸಿವೆ. ಘಟನಾ ಸ್ಥಳದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.

Facebook Comments

Sri Raghav

Admin