ಲಂಡನ್ ಕೋರ್ಟ್‍ನಲ್ಲಿ ಇನ್ನು ನಿರ್ಧಾರವಾಗಲಿದೆ ವಂಚಕ ನೀರವ್ ಹಣೆಬರಹ

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ಜೂ.12- ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ)ಗೆ 13,000 ಕೋಟಿ ರೂ.ಗಳನ್ನು ವಂಚಿಸಿ ಇಂಗ್ಲೆಂಡಿನಲ್ಲಿ ಆಶ್ರಯ ಪಡೆದಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಹಸ್ತಾಂತರ ಪ್ರಕರಣದ ವಿಚಾರಣೆ ಅಂತ್ಯಗೊಂಡಿದ್ದು ಇಂದು ಮಧ್ಯಾಹ್ನ 3ರ ನಂತರ ತೀರ್ಪು ಹೊರ ಬೀಳಲಿದೆ.

ಇದರೊಂದಿಗೆ ದೇಶಭ್ರಷ್ಟ ಆರ್ಥಿಕ ಅಪರಾಧಿ ನೀರವ್ ಮೋದಿ ಹಣೆಬರಹ ನಿರ್ಧಾರವಾಗಲಿದೆ.ರಾಯಲ್ ಕೋರ್ಟ್ ಆಫ್ ಜಸ್ಟಿಸ್(ಆರ್‍ಸಿಜೆ) ನ್ಯಾಯಮೂರ್ತಿ ಇಂಗ್ರಿಡ್ ಸಿಮ್ಲರ್ ಬೆಳಿಗ್ಗೆ 10.30ಕ್ಕೆ (ಭಾರತೀಯ ಕಾಲಮಾನ 3ಗಂಟೆ)ತೀರ್ಪು ನೀಡಲಿದ್ದಾರೆ.

ಬಹುಕೋಟಿ ರೂ.ಗಳ ವಂಚನೆ ಪ್ರಕರಣದ ಸಂಬಂಧ ಮಾರ್ಚ್ 19ರಂದು ನೀರವ್ ಮೋದಿಯನ್ನು ಲಂಡನ್ ಪೊಲೀಸರು ಬಂಧಿಸಿದ್ದರು. ನೀರವ್ ಭಾರತ ಹಸ್ತಾಂತರಕ್ಕೆ ದಿನಗಣನೆ ಆರಂಭವಾಗಿದ್ದು,

ಮತ್ತೊಬ್ಬ ಆರ್ಥಿಕ ಅಪರಾಧಿ ಮದ್ಯದೊರೆ ವಿಜಯಮಲ್ಯ ಅವರೊಂದಿಗೆ ಕಾರಾಗೃಹದ ಒಂದೇ ಕೊಠಡಿಯಲ್ಲಿ ನೀರವ್‍ನನ್ನು ಇರಿಸಲು ಈಗಾಗಲೇ ಬಂದೀಖಾನೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin