ಲಂಡನ್ ಜೈಲಿನಿಂದಲೇ ದೇಶ ಭ್ರಷ್ಟ ನೀರವ್ ವಿಚಾರಣೆ ನಡೆಸಿದ ವೆಸ್ಟ್ ಮಿನಿಸ್ಟರ್ ನ್ಯಾಯಾಲಯ

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ಜೂ.27- ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ (ಪಿಎನ್‍ಬಿ) 12,400 ಕೋಟಿ ರೂ.ಗಳನ್ನು ವಂಚಿಸಿ ಪ್ರಸ್ತುತ ಲಂಡನ್ ಜೈಲಿನಲ್ಲಿರುವ ದೇಶ ಭ್ರಷ್ಟ ಆರ್ಥಿಕ ಅಪರಾಧಿ ಮತ್ತು ಕಳಂಕ ವಜ್ರೋದ್ಯಮಿ ನೀರವ್ ಮೋದಿಯನ್ನು ಇಂದು ವೆಸ್ಟ್ ಮಿನಿಸ್ಟರ್ ನ್ಯಾಯಾಲಯವು ಕಾರಾಗೃಹದ ವಿಡಿಯೋ ಲಿಂಕ್ ಮೂಲಕ ವಿಚಾರಣೆಗೊಳಪಡಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ಮಾರ್ಚ್‍ನಿಂದಲೂ ವಾಯುವ್ಯ ಲಂಡನ್‍ನ ವ್ಯಾಂಡ್ಸ್ ವರ್ಥ್ ಜೈಲಿನಲ್ಲಿರುವ ನೀರವ್ ಮೋದಿಯನ್ನು ಇಂದು ಹೆಚ್ಚಿನ ವಿಚಾರಣೆಗೊಳಪಡಿಸಿ ಕೆಲವು ಮಾಹಿತಿಗಳನ್ನು ಪಡೆಯಲಾಯಿತು.

ಯುನೈಟೆಡ್ ಕಿಂಗ್‍ಡಮ್‍ನ ಹೈಕೋರ್ಟ್ ಈ ತಿಂಗಳ ಆರಂಭದಲ್ಲಿ ನೀರವ್ ಜಾಮೀನು ಅರ್ಜಿ ನಿರಾಕರಿಸಿದ ನಂತರ ಇದೇ ಮೊದಲ ಬಾರಿಗೆ ಕಳಂಕಿತ ಉದ್ಯಮಿಯನ್ನು ವಿಡಿಯೋ ಲಿಂಕ್ ಮೂಲಕ ಬಂಧೀಖಾನೆಯಿಂದಲೇ ವಿಚಾರಣೆಗೊಳಪಡಿಸಲಾಗಿದೆ. ನೀರವ್ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ಸತತ ನಾಲ್ಕನೆ ಬಾರಿ ನ್ಯಾಯಾಲಯದಿಂದ ತಿರಸ್ಕರಿಸಲ್ಪಟ್ಟಿದ್ದು , ಆರ್ಥಿಕ ಅಪರಾಧಿಯ ವಿರುದ್ಧ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗುತ್ತಿದೆ.

ಕಳೆದ ತಿಂಗಳು ಕಳಂಕಿತ ವಜ್ರೋದ್ಯಮಿಯನ್ನು ವಿಚಾರಣೆಗೊಳಪಡಿಸಿದ್ದ ಇಂಗ್ಲೆಂಡ್‍ನ ರಾಯಲ್ ಕೋರ್ಟ್ ಆಫ್ ಜಸ್ಟೀಸ್‍ನ ನ್ಯಾಯಮೂರ್ತಿ ಇಂಗ್ರೆಡ್ ಸಿಮ್ಲೆರ್ ನಿಮ್ಮ ವಿರುದ್ಧದ ಬ್ಯಾಂಕ್ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ಆಪಾದನೆಗಳು ಸಾಬೀತಾಗಿವೆ. ನಿಮಗೆ ಜಾಮೀನು ನೀಡಲು ಸಾಧ್ಯವಿಲ್ಲ. ವಿಚಾರಣೆ ಪೂರ್ಣಗೊಳ್ಳುವ ತನಕ ಜೈಲು ವಾಸ ಮುಂದುವರೆಯುತ್ತದೆ ಎಂದು ಹೇಳಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರ ಪಡೆಯುವ ಯತ್ನವನ್ನು ಮತ್ತಷ್ಟು ತೀವ್ರಗೊಳಿಸಿದ್ದು ಮಹಾ ವಂಚಕನಿಗೆ ಭಾರತದಲ್ಲಿ ಶಿಕ್ಷೆ ವಿಧಿಸುವ ಕಾಲ ಸನ್ನಿಹಿತವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ