ನಿರ್ಭಯಾ ಪ್ರಕರಣ : ಕ್ಷಮಾದಾನ ತಿರಸ್ಕಾರ ವಿರುದ್ಧದ ವಿನಯ್ ಅರ್ಜಿ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.13-ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಯಿಂದ ಕ್ಷಮಾದಾನ ನೀಡಲು ರಾಷ್ಟ್ರಪತಿ ಅವರು ನಿರಾಕರಿಸಿದ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಲು ಶಿಫಾರಸು ಮಾಡುವಂತೆ ಕೋರಿ ದೋಷಿಗಳಲ್ಲಿ ಒಬ್ಬನಾದ ವಿನಯ್ ಶರ್ಮ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇದು ವಜಾಗೊಳೀಸಿದೆ.

ಮರಣದಂಡನೆ ಶಿಕ್ಷೆ ಗುರಿಯಾಗಿರುವ ವಿನಯ್ ಪರ ವಕೀಲ ಎ.ಪಿ.ಸಿಂಗ್ ಈ ಸಂಬಂಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್. ಭಾನುಮತಿ, ಅಶೋಕ್ ಭೂಷಣ್ ಮತ್ತು ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ಪೀಠವು ಅರ್ಜಿಯ ಕೂಲಂಷಕ ಪರಿಶೀಲನೆಗೆ ಶಿಪಾರಸು ಮಾಡಲು ನಿರಾಕರಿಸಿತು. ದೆಹಲಿ ಲೆಫ್ಟಿನೆಂಟ್ ಗೌರ್ನರ್ ಮತ್ತು ಗೃಹ ಸಚಿವರು ತನ್ನ ಕ್ಷಮಾದಾನ ಅರ್ಜಿ ನಿರಾಕರಣೆಗಾಗಿ ಶಿಫಾರಸು ಮಾಡಲಾದ ಪತ್ರಕ್ಕೆ ಸಹಿ ಹಾಕಿಲ್ಲ ಎಂದು ವಿನಯ್ ಶರ್ಮ ವಕೀಲ ಮೂಲಕ ವಾದಿಸಿದ್ದ.

ಆದರೆ, ಈ ಅರ್ಜಿಯನ್ನು ತಳ್ಳಿ ಹಾಕಿದ ತ್ರಿಸದಸ್ಯ ನ್ಯಾಯಮೂರ್ತಿಗಳ ಪೀಠವು ಲೆಫ್ಟಿನೆಂಟ್ ಗೌರ್ನರ್ ಮತ್ತು ಗೃಹಮಂತ್ರಿ ಅವರು ಆತನ ಕ್ಷಮಾದಾನ ಅರ್ಜಿ ನಿರಾಕರಣೆ ಶಿಫಾರಸಿಗೆ ಸಹಿ ಮಾಡಿದಾರೆ ಎಂದು ಸ್ಪಷ್ಟಪಡಿಸಿತು.

Facebook Comments