ಬಿಗ್ ಬ್ರೇಕಿಂಗ್ : ನಿರ್ಭಯಾ ‘ಹತ್ಯಾ’ಚಾರಿಗಳ ಕ್ಯುರೇಟಿವ್ ಅರ್ಜಿ ವಜಾ, ಗಲ್ಲು ಫಿಕ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.14- ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಅರೆ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಮೇಲಿನ ಪೈಶಾಚಿಕ ಅತ್ಯಾಚಾರ ಮತ್ತು ಭೀಕರ ಕಗ್ಗೊಲೆ ಪ್ರಕರಣದಲ್ಲಿ ಅಪರಾಧಿಗಳಿಬ್ಬರು ಸಲಿಸಿದ್ದ ಕ್ಯುರೇಟಿವ್(ಪರಿಹಾರರಾತ್ಮಕ) ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ನೇಣು ಕುಣಿಕೆಯಿಂದ ಪಾರಾಗುವ ಕಟ್ಟಕಡೆ ಯತ್ನ ವಿಫಲಗೊಂಡಿದ್ದು, ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆಗೆ ದಿನಗಣನೆ ಆರಂಭವಾಗಿದೆ. ನಾಲ್ವರ ಅಪರಾಧಿಗಳಲ್ಲಿ ಮುಖೇಶ್ ಸಿಂಗ್ ಮತ್ತು ವಿನಯ್‍ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ಸಾರಾಸಗಾಟಾಗಿ ತಳ್ಳಿ ಹಾಕಿ ದೆಹಲಿಯ ಪಟಿಯಾಲ ಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿಯಿತು.

ಇದರಿಂದಾಗಿ ಮುಖೇಶ್, ವಿನಯ್, ಅಕ್ಷಯ್ ಮತ್ತು ಪವನ್ ಈ ನಾಲ್ವರು ಆಪಾದಿತರಿಗೆ ದೆಹಲಿಯ ತಿಹಾರ್ ಜೈಲಿನಲ್ಲಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಿಸಲಾಗುತ್ತದೆ. ಅತ್ಯಾಚಾರಿ ಹಂತಕರನ್ನು ನೇಣುಗಂಬಕ್ಕೇರಿಸಲು ಅಗತ್ಯವಾದ ಎಲ್ಲ ಪೂರ್ವ ತಯಾರಿಗಳು ನಡೆಯುತ್ತಿದೆ. ಈಗಾಗಲೇ ಮೀರತ್‍ನಿಂದ ಬಂದಿರುವ ಹ್ಯಾಂಗ್ ಮ್ಯಾನ್ ವಧಾಸ್ಥಳದಲ್ಲಿ ಹಂತಕರನ್ನು ನೇಣಿಗೇರಿಸಲು ಪೂರ್ವಭಾವಿ ಸಿದ್ದತೆ ನಡೆಸಿದ್ದಾರೆ.

ಡಿಸೆಂಬರ್ 16ರಂದು 2012ರಂದು ರಾತ್ರಿ ನಿರ್ಭಯಾ ಮೇಲೆ ಚಲಿಸುವ ಬಸ್‍ನಲ್ಲಿ ಒಟ್ಟು ಐವರು ವಿಕೃತ ಕಾಮುಕರು ಪೈಶಾಚಿಕ ಹತ್ಯೆ ನಡೆಸಿ ಹಲ್ಲೆ ನಡೆಸಿದ್ದರು. ತೀವ್ರ ಅಸ್ವಸ್ಥರಾಗಿದ್ದ ನಿರ್ಭಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರದ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಯಿತಾದರೂ ಫಲಕಾರಿಯಾಗಲಿಲ್ಲ.

ದೀರ್ಘ ಕಾಲದ ಕಾನೂನು ಸಮರದ ನಂತರ ಏಳು ವರ್ಷಗಳ ಬಳಿಕ ಈ ಆರೋಪಿಗಳಿಗೆ ನೇಣುಗಂಬಕ್ಕೇರಿಸಲಾಗುತ್ತಿದೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ರಾಮ್‍ಸಿಂಗ್ ಮೂರು ವರ್ಷಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ.

Facebook Comments

Sri Raghav

Admin