ರೈತರು-ಕಾರ್ಮಿಕರು-ಸಣ್ಣ ವ್ಯಾಪಾರಿಗಳಿಗೆ ಪ್ಯಾಕೇಜ್ ಹಂಚಿದ ನಿರ್ಮಲಾ ಸೀತಾರಾಮನ್ : ಇಲ್ಲಿದೆ ಪೂರ್ಣ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ಕೊರೋನಾ ವೈರಸ್ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರು, ವಲಸೆ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಪರಿಹಾರ ಪ್ಯಾಕೇಜ್‌ ಅನ್ನು ಪ್ರಕಟಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ನ ಮತ್ತಷ್ಟು ವಿವರ ಪ್ರಕಟಿಸಿದ ನಿರ್ಮಲಾ ಸೀತಾರಾಮನ್ ಅವರು, ರಸ್ತೆ ಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು, ಸಣ್ಣ ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ಈ ಪ್ಯಾಕೇಜ್​ನಲ್ಲಿ ವಿಶೇಷ ಸವಲತ್ತುಗಳನ್ನು ಒದಗಿಸಲಾಗಿದೆ ಎಂದರು.

ಇಂದು 9 ಪ್ರಮುಖ ನಿರ್ಧಾರಗಳನ್ನು ಘೋಷಿಸಲಾಗುವುದು. ಅದರಲ್ಲಿ ಮೂರು ವಲಸೆ ಕಾರ್ಮಿಕರಿಗೆ, ಒಂದು ಮುದ್ರಾದೊಂದಿಗೆ ಶಿಶು ಸಾಲ, ಮತ್ತೊಂದು ರಸ್ತೆ ಬದಿಯ ವ್ಯಾಪಾರಿಗಳಿಗೆ, ಮತ್ತೊಂದು ಗೃಹ, 1 ಬುಡಕಟ್ಟು ಜನಾಂಗದ ಉದ್ಯೋಗ ಪೀಳಿಗೆಗೆ ಹಾಗೂ ಎರಡು ನಿರ್ಧಾರಗಳು ಸಣ್ಣ ರೈತರನ್ನು ಒಳಗೊಂಡಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಹಿತಿ ನೀಡಿದರು.

ಪಡಿತರ ಕಾರ್ಡ್​ ಇಲ್ಲದವರಿಗೆ ಪ್ರತಿ ವ್ಯಕ್ತಿ 5 ಕೆಜಿ ಅಕ್ಕಿ/ಗೋಧಿ, 1 ಕೆಜಿ ಬೇಳೆಕಾಳು ವಿತರಣೆ. ರಾಜ್ಯ ಸರ್ಕಾರಗಳು ವಲಸಿಗ ಕಾರ್ಮಿಕರಿಗೆ ಪಡಿತರ ನೀಡಲು ಆದ್ಯತೆ ನೀಡಬೇಕು. ರಾಜ್ಯ ಸರ್ಕಾರಗಳು ಮಾಡುವ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಇದರಿಂದ 8 ಕೋಟಿ ವಲಸಿಗ ಕಾರ್ಮಿಕರಿಗೆ ನೆರವಾಗಲಿದೆ.

ಪಡಿತರ ವಿತರಣೆಗೆ 3,500 ಕೋಟಿ ರೂಪಾಯಿ ಕೇಂದ್ರ ಸರ್ಕಾರ ನೀಡಲಿದೆ. ಪಡಿತರ ವಿತರಣೆಗೆ ತಂತ್ರಜ್ಞಾನ ಆಧರಿತ ವ್ಯವಸ್ಥೆ ನೆರವಾಗಲಿದೆ. ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿ ಬಳಸಬಹುದು. ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆ ಜಾರಿಯಾಗಲಿದೆ.  67 ಕೋಟಿ ಜನರಿಗೆ ಇದರಿಂದ ಅನುಕೂಲವಾಲಿದೆ. ಶೇ.85ರಷ್ಟು ಪಡಿತರ ಪಡೆಯುವವರಿಗೆ ಇದರಿಂದ ನೆರವಾಗಲಿದೆ. ಮಾರ್ಚ್​ 31, 2021ರೊಳಗೆ ಒಂದೇ ದೇಶ, ಒಂದು ಕಾರ್ಡ್ ಯೋಜನೆಯ ಡಿಜಟಲೀಕರಣವಾಗಲಿದೆ.

ಈಗಿರುವ ಪಡಿತರ ವ್ಯವಸ್ಥೆಯ ಪ್ರಕಾರ ಕುಟುಂಬವೊಂದು, ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣ ಬೆಳೆಸಿದರೆ ಹೊಸ ಪಡಿತರ ಚೀಟಿ ಮಾಡಿಸಿಕೊಳ್ಳಬೇಕಾಗುತ್ತದೆ ಇದು ತ್ರಾಸದಾಯಕ ವ್ಯವಸ್ಥೆ, ಕೊರೊನಾವೈರಸ್ ಸೋಂಕು ಹರಡದಂತೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ ವಲಸೆ ಸಮಸ್ಯೆ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಒಂದು ದೇಶ, ಒಂದು ರೇಷನ್ ಕಾರ್ಡ್ ಮಹತ್ವ ಪಡೆದುಕೊಳ್ಳಲಿದೆ.

ಪಡಿತರ ಚೀಟಿಯಲ್ಲಿ ಹೆಸರಿದ್ದು, ಮೃತಪಟ್ಟವರು, ಮನೆ ಬಿಟ್ಟು ಹೋದವರು, ಮದುವೆಯಾಗಿ ಗಂಡನ ಮನೆಗೆ ಹೋದವರ ಹೆಸರಿನಲ್ಲಿಯೇ ಪಡಿತರ ಪೂರೈಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಕಾರ್ಡುದಾರರ ಬಯೋಮೆಟ್ರಿಕ್ ಪಡೆಯಲಾಗುತ್ತದೆ. ಆದರೆ, ಕೊರೊನಾ ಭೀತಿಯಿಂದ ಬಯೋಮೆಟ್ರಿಕ್ ಬಳಕೆ ಸ್ಥಗಿತಗೊಳಿಸಲಾಗಿದ್ದು, ಬಯೋಮೆಟ್ರಿಕ್ ಇಲ್ಲದೆಯೆ ಆಧಾರ್ ಕಾರ್ಡ್ ಜೋಡಣೆ ಮೂಲಕ ರೇಷನ್ ಕಾರ್ಡ್ ದೃಢಿಕರಿಸಿ ಪಡಿತರ ಪಡೆಯಬಹುದು.

ಎಲ್ಲ ಕಾರ್ಮಿಕರಿಗೆ ಕನಿಷ್ಟ ವೇತನ ಸಿಗಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಈಗ ಕೇವಲ ಶೇ. 30ರಷ್ಟು ಜನರಿಗೆ ಕನಿಷ್ಟ ವೇತನದ ಅವಕಾಶವಿದೆ. ಅಂತಾರಾಜ್ಯ ವಲಸಿಗ ಕಾರ್ಮಿಕರಿಗೆ ಕನಿಷ್ಟ ವೇತನ ಸಿಗುವ ಕಾನೂನು ತರಲಿದ್ದೇವೆ. ಕನಿಷ್ಟ 10 ಜನ ಕಾರ್ಮಿಕರು ಕೆಲಸ ಮಾಡುವವರಿಗೆ ಇಎಸ್​ಐಸಿ ಸೌಲಭ್ಯ ವಿಸ್ತರಣೆ. ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಸುರಕ್ಷಿತವಾಗಿ ಕೆಲಸ ಮಾಡುವ ಕಾನೂನು ರೂಪಿಸುತ್ತೇವೆ. 44 ವಿವಿಧ ಕಾನೂನುಗಳನ್ನು ಒಂದೇ ಕಾನೂನಿನಡಿ ತರಲು ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು.

ಕೈಗಾರಿಕೆಗಳು ತಮ್ಮ ಸ್ವಂತ ಜಾಗದಲ್ಲಿ ಬಾಡಿಗೆ ಮನೆಗಳನ್ನು ನಿರ್ಮಿಸಲು ಸರ್ಕಾರದ ಸಹಾಯ. ನಗರ ಕೇಂದ್ರಿತ ವಲಸಿಗರು, ಬಡವರು ನಿರ್ದಿಷ್ಟ ಬಾಡಿಗೆಯಲ್ಲಿ ಮನೆ ಬಾಡಿಗೆಗೆ ಪಡೆಯಬಹುದು.

₹29,500 ಕೋಟಿ ಸಾಲ ನಬಾರ್ಡ್​ ಮೂಲಕ ವಿತರಣೆ. ಇದು ಮಾರ್ಚ್​ ಒಂದೇ ತಿಂಗಳಲ್ಲೇ ವಿತರಿಸಲಾಗಿದೆ. ₹4,200 ಕೋಟಿ ಗ್ರಾಮೀಣ ಮೂಲಸೌಕರ್ಯಕ್ಕೆ ನೀಡಿದ್ದೇವೆ. ₹6,700 ಕೋಟಿ ಕೆಲಸದ ಬಂಡವಾಳವನ್ನು ನೀಡಲಾಗಿದೆ. ರಾಜ್ಯದ ಏಜೆನ್ಸಿಗಳಿಗೆ ಕೆಲಸದ ಬಂಡವಾಳ ನೀಡಲಾಗಿದೆ.

ಗ್ರಾಮೀಣ ಬಡವರಿಗೆ ಕಳೆದ 2 ತಿಂಗಳಲ್ಲಿ ವಿತರಣೆ. ರಾಜ್ಯ ಸರ್ಕಾರಗಳಿಗೆ Sಆಖಈ ಅನುದಾನ ಬಳಕೆಗೆ ಅನುಮತಿ. ವಲಸಿಗರಿಗೆ ₹11 ಸಾವಿರ ಕೋಟಿ ಬಳಸಲು ಅನುಮತಿ. ವಲಸೆ ಕಾರ್ಮಿಕರ ಊಟ, ವಸತಿಗೆ ಬಳಸಲು ಅನುಮತಿ. ವಲಸೆ ಕಾರ್ಮಿಕರಿಗೆ 2 ತಿಂಗಳಲ್ಲಿ ದಿನಕ್ಕೆ 3 ಹೊತ್ತು ಊಟ. ನಗರ ಪ್ರದೇಶಗಳಲ್ಲಿ ಮನೆಗಳಿಲ್ಲದವರಿಗೂ ಊಟದ ವ್ಯವಸ್ಥೆ. 12 ಸಾವಿರ ಸ್ವಸಹಾಯ ಸಂಘಗಳಿಂದ 3 ಕೋಟಿ ಮಾಸ್ಕ್ ತಯಾರಿಕೆ .

ಮುದ್ರಾ ಶಿಶು ಸಾಲ ಯೋಜನೆಯಲ್ಲಿ 50 ಸಾವಿರದವರೆಗೆ ಸಾಲ ಪಡೆದವರಿಗೆ ಸೌಲಭ್ಯ. ಶಿಶು ಸಾಲ ಯೋಜನೆಯಲ್ಲಿ ಸಾಲ ಪಡೆದವರ ಶೇ. 2ರಷ್ಟು ಬಡ್ಡಿ ಕೇಂದ್ರ ಸರ್ಕಾರ ಭರಿಸುತ್ತೆ. ಸುಮಾರು 3 ಕೋಟಿ ಅಧಿಕ ಜನ ಮುದ್ರಾ ಶಿಶು ಸಾಲವನ್ನು ಪಡೆದಿದ್ದಾರೆ. ಮುದ್ರಾ ಯೋಜನೆ ಅತಿ ಸಣ್ಣ ವ್ಯಾಪಾರಿಗಳಿಗೆ ನೆರವಾಗಲು ಕೇಂದ್ರ ಸರ್ಕಾರದ ಆದ್ಯತೆ ಕೊಡಲಾಗಿದೆ.

ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಆರಂಭಿಸಲು 10 ಸಾವಿರ ರೂ. ಫಿಕ್ಸ್. 50 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ವಿಶೇಷ ಸಾಲ ಸೌಲಭ್ಯಕ್ಕೆ 5 ಸಾವಿರ ಕೋಟಿ ರೂ. ಬೀದಿಬದಿ ವ್ಯಾಪಾರಿಗಳಿಗೆ ಸುಲಭ ವಿಧಾನದಲ್ಲಿ ಸಾಲ ಸೌಲಭ್ಯಕ್ಕೆ ಒತ್ತು ನೀಡಲಾಗಿದೆ.
6-18ಲಕ್ಷ ಆದಾಯದ ಮಧ್ಯಮ ಆದಾಯ ವರ್ಗದವರಿಗೆ ಗೃಹಸಾಲ ಸಬ್ಸಿಡಿ. ಕ್ರೆಡಿಟ್ ಲಿಂಕ್ಡ್​ ಸಬ್ಸಿಡಿ ಸ್ಕೀಂ 2021ರ ಮಾ.31ರವರೆಗೆ ವಿಸ್ತರಣೆ. 2.5 ಲಕ್ಷ ಕುಟುಂಬಗಳಿಗೆ ಹೆಚ್ಚುವರಿಯಾಗಿ ಇದರ ಲಾಭ. ಗೃಹ ಸಾಲ ಸೌಲಭ್ಯಕ್ಕಾಗಿ 70,000 ಕೋಟಿ ರೂ. ಮೀಸಲು.

ಬುಡಕಟ್ಟು, ಆದಿವಾಸಿಗಳ ಉದ್ಯೋಗಕ್ಕೆ ₹6 ಸಾವಿರ ಕೋಟಿ. ರಾಜ್ಯಗಳಿಂದ ಪ್ರಸ್ತಾವನೆ ಬಂದರೆ ಹೆಚ್ಚಿನ ಹಣ ನೀಡಲು ಸಿದ್ಧ.2 ಲಕ್ಷ ಕೋಟಿ ರೂಪಾಯಿ ಕಿಸಾನ್ ಕ್ರೆಡಿಟ್​ ಕಾರ್ಡ್​ದಾರರಿಗೆ ಸಾಲ ನೀಡಲಾಗುತ್ತೆ. 2.5 ಕೋಟಿ ರೈತರಿಗೆ ಇದರಿಂದ ಅನುಕೂಲವಾಗಲಿದೆ. ಪಿಎಂ ಕಿಸಾನ್​ ಸಮ್ಮಾನ್​ ಯೋಜನೆಯ 2.5 ಕೋಟಿ ಜನರಿಗೆ ಕಿಸಾನ್ ಕ್ರೆಡಿಟ್​ ಕಾರ್ಡ್ ಇಲ್ಲ. ಹೈನುಗಾರರಿಗೆ, ಮೀನುಗಾರರಿಗೆ ಕಿಸಾನ್ ಕ್ರೆಡಿಟ್​ ವಿತರಣೆ ಮಾಡಲಾಗುವುದು.

ರೈತರಿಗೆ 30,000 ಕೋಟಿ ರೂಪಾಯಿ ತುರ್ತು ಸಾಲ. 90 ಸಾವಿರ ಕೋಟಿ ರೂಪಾಯಿ ವಾರ್ಷಿಕವಾಗಿ ಸಾಲ ನೀಡಲಾಗುತ್ತಿತ್ತು. ಈಗ ಹೆಚ್ಚುವರಿಯಾಗಿ 30 ಸಾವಿರ ಕೋಟಿ ರೂಪಾಯಿ ಸಾಲ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಇದರ ಅನುಕೂಲ ಸಿಗಲಿದೆ.

Facebook Comments

Sri Raghav

Admin