ಉತ್ತಮ ಆರೋಗ್ಯವೇ ಸಾಧನೆಗೆ ರಹದಾರಿ : ನಿರ್ಮಲಾನಂದನಾಥ ಸ್ವಾಮೀಜಿ

ಈ ಸುದ್ದಿಯನ್ನು ಶೇರ್ ಮಾಡಿ

ಯಶವಂತಪುರ,ನ.30- ಉತ್ತಮ ಆರೋಗ್ಯ ಹಾಗೂ ನಿರಂತರ ಪರಿಶ್ರಮದಿಂದ ಯಶಸ್ಸು ಲಭಿಸಿ ಸಾಧನೆ ಸಿದ್ದಿಸು ವುದು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಕೆಂಗೇರಿಯ ಬಿಜಿಎಸ್ ಜಿಮ್ಸ್‍ನಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ವೈಭವ ರಾಜ್ಯೋತ್ಸವ ಹಾಗೂ ಆಮ್ಲಜನಕ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯವೇ ಭಾಗ್ಯ ಎಂಬುದು ಸಾರ್ವಕಾಲಿಕ ಸತ್ಯ ಹಾಗಾಗಿ ಯುವಜನತೆ ಆರೊÉೈಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ತಮ್ಮಿಷ್ಟದ ಕ್ರೀಡೆಯನ್ನು ದೈನಂದಿನ ಚಟುವಟಿಕೆಯಾಗಿಸಿಕೊಂಡರೆ ಈ ಸಾಧನೆಗೆ ದಾರಿಯಾಗುತ್ತದೆ ಎಂದು ಸಲಹೆ ನೀಡಿದರು ಭಾಷೆ ಬರೀ ಅಕ್ಷರಗಳ ಸಮೂಹವಲ್ಲ.

ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ. ಬದುಕನ್ನು ಕಟ್ಟಿಕೊಡುವ ಜೀವಸೆಲೆ ಎಂದು ತಿಳಿಸಿದರು. ಕನ್ನಡದ ಹಿರಿಮೆ ಗರಿಮೆ ಅಪಾರ. ವಿಶ್ವದೆಲ್ಲಾಡೆ ಕನ್ನಡದ ಕಂಪು ಪಸರಿಸಿದೆ. ಸುಸ್ಪಷ್ಟ ಹಾಗೂ ಸುಲಲಿತವಾಗಿ ಉಚ್ಚರಿಸುವ ಜಗತ್ತಿನ ಏಕೈಕ ಭಾಷೆ ಕನ್ನಡ ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಕಲಿಕೆಯ ಪ್ರಗತಿಗಾಗಿ ಅನ್ಯಭಾಷೆ ಯನ್ನು ಕಲಿಯಿರಿ. ಕನ್ನಡದೆಡೆಗಿನ ಅಭಿಮಾನವನ್ನು ಸದಾ ಕಾಪಾಡಿ ಕೊಳ್ಳಿ ಎಂದು ಹೇಳಿದರು.

ವೈದ್ಯಕೀಯ ಸಚಿವ ಡಾ. ಸುಧಾಕರ್ ಮಾತನಾಡಿ, ಓಮಿಕ್ರಾನ್ ಬಗ್ಗೆ ಅನಗತ್ಯ ಆತಂಕ ಬೇಡ ಕೊರೊನಾಗೆ ಸಂಬಂಸಿದ ಸರ್ಕಾರಿ ಮಾರ್ಗಸೂಚಿಯನ್ನು ತಪ್ಪದೆ ಪಾಲಿಸಿ. ಮೆಡಿಕಲ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಸ್ವಾಗತಾರ್ಹ. ಮಾತೃ ಭಾಷೆ ಯನ್ನು ಮರೆಯಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜಿಎಸ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶ್ರೀ ಪ್ರಕಾಶನಾಥ ಸ್ವಾಮೀಜಿ, ಶಿಕ್ಷಕ ಹಾಗೂ ವಿದ್ಯಾರ್ಥಿ ವೃಂದ ಹಾಜರಿದ್ದರು.

Facebook Comments