ತೆರೆ ಮೇಲೆ ಮತ್ತೆ ‘ನಿಶ್ಕರ್ಷ’

ಈ ಸುದ್ದಿಯನ್ನು ಶೇರ್ ಮಾಡಿ

ನಿಶ್ಕರ್ಷ ಸುನೀಲ್‍ಕುಮಾರ್ ದೇಸಾಯಿ ಅವರ ಸೂಪರ್ ಹಿಟ್ ಚಿತ್ರಗಳಲ್ಲೊಂದು. ವಿಷ್ಣುವರ್ಧನ್, ಅನಂತನಾಗ್, ಬಿ.ಸಿ.ಪಾಟೀಲ್, ಸುಮನ್ ನಗರ್‍ಕರ್, ರಮೇಶ್‍ಭಟ್ ಅಭಿನಯಿಸಿದ್ದ ಈ ಚಿತ್ರವನ್ನು ಬಿ.ಸಿ.ಪಾಟೀಲ್ ಅವರೆ ಸೃಷ್ಠಿ ಫಿûಲಂಸ್ ಮೂಲಕ ನಿರ್ಮಾಣ ಮಾಡಿದ್ದರು. 1993ರಲ್ಲಿ ತೆರೆಕಂಡಿದ್ದ ಈ ಚಿತ್ರ ಶತದಿನೋತ್ಸವ ಆಚರಿಸಿತ್ತು.

ನಿಷ್ಕರ್ಷ ಇದೇ 20ರಂದು ಡಿಜಿಟಲ್ ರೂಪದಲ್ಲಿ ಮರು ಬಿಡುಗಡೆಯಾಗುತ್ತಿದೆ. ಸೆಪ್ಟೆಂಬರ್ 18 ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನವಾಗಿದ್ದು, ಅದೇ ಸಂದರ್ಭದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿದೆ.

ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವುದು ಥ್ರಿಲ್ಲರ್ ಸಿನಿಮಾಗಳು. 93ರಲ್ಲೇ ಅಂಥಾದ್ದೊಂದು ಅದ್ಭುತ ಥ್ರಿಲ್ಲರ್ ಸಿನಿಮಾ ಕೊಟ್ಟಿದ್ದರು ಸುನೀಲ್ ಕುಮಾರ್ ದೇಸಾಯಿ. ಈ ಚಿತ್ರ ಹಲವು ರಾಜ್ಯ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಚಿತ್ರವನ್ನು ಜಯಣ್ಣ ವಿತರಣೆ ಮಾಡುತ್ತಿದ್ದು, ಸಿನಿಮಾ ಭರ್ಜರಿಯಾಗಿಯೇ ರೀರಿಲೀಸ್ ಆಗುತ್ತಿದೆ.

Facebook Comments