“ಮುಂದಿನ 5 ವರ್ಷಗಳಲ್ಲಿ ವಾರ್ಷಿಕ ಟೋಲ್ ಆದಾಯ 1.40 ಲಕ್ಷ ಕೋಟಿ ರೂ. ತಲುಪಲಿದೆ”

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.19- ಮುಂಬರುವ 2023ರಲ್ಲಿ ಬಹುನಿರೀಕ್ಷಿತ ದೆಹಲಿ-ಮುಂಬೈ ಎಕ್ಸ್‍ಪ್ರೆಸ್‍ವೇ ಕಾರ್ಯಾರಂಭವಾದ ನಂತರ ಕೇಂದ್ರಕ್ಕೆ ಪ್ರತಿ ತಿಂಗಳು 1000 ರಿಂದ 1500 ಕೋಟಿ ಮೌಲ್ಯದ ಟೋಲ್ ಆದಾಯ ಬರಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಮುಂದಿನ ಐದು ವರ್ಷಗಳಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಾರ್ಷಿಕ ಟೋಲ್ ಆದಾಯವನ್ನು 1.40 ಲಕ್ಷ ಕೋಟಿ ರೂ.ಗೆ ಮುಟ್ಟುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೆಹಲಿ-ಮುಂಬೈ ಎಕ್ಸ್‍ಪ್ರೆಸ್‍ವೇ ಪೂರ್ಣಗೊಂಡ ನಂತರ ಮತ್ತು ಸಾರ್ವಜನಿಕರಿಗಾಗಿ ತೆರೆದರೆ, ಪ್ರತಿ ತಿಂಗಳು ಕನಿಷ್ಠ 1000-1500 ಕೋಟಿ ಟೋಲ್ ಆದಾಯ ಪಡೆಯುತ್ತೇವೆ ಎಂದು ಅವರು ಹೇಳಿದರು. ದೆಹಲಿ-ಮುಂಬೈ ಎಕ್ಸ್‍ಪ್ರೆಸ್‍ವೇ ಮಾರ್ಚ್ 2023 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದರು.

Facebook Comments

Sri Raghav

Admin