ಶಸ್ತ್ರ ತ್ಯಜಿಸಲು NLFB ಉಗ್ರರ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹಟಿ,ಜು.22- ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ಬೋಡೊಲ್ಯಾಂಡ್ (ಎನ್‍ಎಲ್‍ಎಫ್‍ಬಿ) ಸಂಘಟನೆಯ ಎಲ್ಲಾ ಉಗ್ರರು ಇಂದು ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬರಲು ಸಮ್ಮತಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಬೋಡೋಲ್ಯಾಂಡ್ ಪ್ರತ್ಯೇಕ ರಾಜ್ಯದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಸಂಘಟನೆಯ ಎಲ್ಲಾ ಸದಸ್ಯರು ಇಂದು ಸರ್ಕಾರದ ಮುಂದೆ ಶರಣಾಗಲಿದ್ದಾರೆ ಎಂದು ಅವರು ತಿಳಿಸಿದರು. ನಮ್ಮ ಸರ್ಕಾರ ಜÁರಿಗೆ ತಂದಿರುವ ನೀತಿಗಳಿಗೆ ಮಾರು ಹೋಗಿ ಉಗ್ರರು ಶರಣಾಗಲು ತೀರ್ಮಾನಿಸಿದ್ದಾರೆ ಎಂದು ಶರ್ಮಾ ಟ್ವಿಟ್ ಮಾಡಿದ್ದಾರೆ.

Facebook Comments