ತೋಳು-ಕಾಲುಗಳಿಲ್ಲದ ಶಿಶು ಜನನ..!

ಈ ಸುದ್ದಿಯನ್ನು ಶೇರ್ ಮಾಡಿ

ಭೂಪಾಲ್,ಜೂ.28- ವಿದಿಷಾ ಜಿಲ್ಲೆಯ ಸಕ್ಲೋನ್ ಗ್ರಾಮದಲ್ಲಿ ಮಹಿಳೆಯೊಬ್ಬರು ಕೈ ಮತ್ತು ಕಾಲುಗಳಿಲ್ಲದ ಶಿಶುವಿಗೆ ಜನ್ಮ ನೀಡಿದ್ದಾರೆ.  28 ವರ್ಷದ ಮಹಿಳೆಯೊಬ್ಬರು ತೋಳು, ಕಾಲುಗಳಿಲ್ಲದ ಮಗುವಿಗೆ ನಿನ್ನೆ ಜನ್ಮ ನೀಡಿದ್ದು, ಮಗು ಮನೆಯಲ್ಲಿಯೇ ಹುಟ್ಟಿದೆ ಎಂದು ಬಿಎಂಒ( ಬ್ಲಾಕ್ ಮೆಡಿಕಲ್ ಆಫೀಸರ್ ) ಡಾ.ಪ್ರಮೋದ್ ದಿವಾನ್ ತಿಳಿಸಿದ್ದಾರೆ.

ಮಗುವಿನ ಶುಶ್ರೂಷೆಗಾಗಿ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯೊಬ್ಬರನ್ನು ಆಕೆಯ ಮನೆಗೆ ಕಳುಹಿಸಿದ್ದೇನೆ. ಆದರೆ ಪೋಷಕರು ಈಗಿಷ್ಟೇ ಹುಟ್ಟಿರುವ ಮಗುವನ್ನು ಆಸ್ಪತ್ರೆಗೆ ಕರೆತರಲು ಒಪ್ಪುತ್ತಿಲ್ಲ ಎಂದು ಹೇಳಿದ್ದಾರೆ.

ಮಗು ಕೈಕಾಲುಗಳಿಲ್ಲದೆ ಹುಟ್ಟಿದೆ. ಆದರೆ ಆರೋಗ್ಯವಾಗಿದೆ. ನಾವೇ ನಿರ್ವಹಿಸುತ್ತೇವೆ ಎಂದು ಮಗುವಿನ ತಂದೆ ತಿಳಿಸಿದ್ದಾರೆ.

Facebook Comments