ಒಂದೇ ಒಂದು ನೋ ಬಾಲ್ ನೋ ಬಾಲ್ ಎಡವಟ್ಟು ಮಾಡದ ಕಲಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಕ್ಯಾಚಸ್ ವಿನ್ ದಿ ಮ್ಯಾಚಸ್ ಎನ್ನುತ್ತಾರೆ ಆದರೆ ನೋಬಾಲ್ ಕೂಡ ಪಂದ್ಯವನ್ನು ಸೋಲಿನ ದವಡೆಗೆ ದೂಡಬಹುದು. ಇದಕ್ಕೆ ಸಾಕಷ್ಟು ನಿರ್ದಶನಗಳು ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ರಂಗದಲ್ಲಿ ಸಿಗುತ್ತವೆ. ನೋ ಬಾಲ್‍ಗಳಿಂದಲೇ ಟೀಂ ಇಂಡಿಯಾ ಕೂಡ ಹಲವು ಮಹತ್ತರ ಪಂದ್ಯಗಳನ್ನು ಕೈಚೆಲ್ಲಿದೆ. ಅದು ತಂಡದ ಸ್ಟಾರ್ ಬೌಲರ್‍ಗಳೆನಿಸಿಕೊಂಡಿರುವವರೇ ನೋ ಬಾಲ್ ಮಾಡಿರುವುದು ಸೋಜಿಗ.

2016 ರ ಚುಟುಕು ವಿಶ್ವಕಪ್‍ನ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮಾಡಿದ ನೋಬಾಲ್ ತಂಡವನ್ನು ಫೈನಲ್‍ಗೇರಿಸುವಲ್ಲಿ ಎಡವಿತ್ತು. ಆ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಬೌಲಿಂಗ್‍ನಲ್ಲಿ ವೆಸ್ಟ್‍ಇಂಡೀಸ್‍ನ ಸ್ಟಾರ್ ಆಟಗಾರ ಲಿಂಡ್ಲೆ ಸಿಮನ್ಸ್ ಔಟಾಗಿದ್ದರು ಆದರೆ ಅಶ್ವಿನ್ ಎಸೆದ ಚೆಂಡು ನೋಬಾಲ್ ಆಗಿತ್ತು.

ನಂತರ ಹಾರ್ದಿಕ್ ಪಾಂಡ್ಯ ಬೌಲಿಂಗ್‍ನಲ್ಲೂ ಸಿಮನ್ಸ್ ಔಟಾಗಿದ್ದರೂ ಆದರೆ ಆ ಚೆಂಡು ಕೂಡ ನೋಬಾಲ್ ಆಗಿದ್ದರಿಂದ ಆ ಪಂದ್ಯದಲ್ಲಿ ಸಿಮನ್ಸ್ 82 ರನ್ ಗಳಿಸಿ ವೆಸ್ಟ್‍ಇಂಡೀಸ್ ತಂಡವನ್ನು ಫೈನಲ್‍ಗೇರಿಸಿದರು.

2017ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಶ್ರೇಷ್ಠ ವೇಗಿ ಹಾರ್ದಿಕ್‍ಪಾಂಡ್ಯ ಎರಡು ನೋ ಬಾಲ್ ಮಾಡಿದ್ದರಿಂದ ಪಾಕ್‍ನ ಆರಂಭಿಕ ಆಟಗಾರ ಫಕ್ಕರ್‍ಜಮನ್ 114 ರನ್ ಗಳಿಸಿ ಭಾರತ ತಂಡಕ್ಕೆ ಸೋಲುವಂತೆ ಮಾಡಿದ್ದರು.

ಆದರೆ ಕ್ರಿಕೆಟ್ ಅಂಗಳದಲ್ಲಿ ಒಂದೇ ಒಂದು ನೋ ಬಾಲ್ ಕೂಡ ಹಾಕದೆ ತಮ್ಮ ತಂಡದ ಗೆಲುವಿಗೆ ಕಾರಣೀಭೂತರಾಗಿರುವ ಐವರು ಬೌಲರ್‍ಗಳಿದ್ದಾರೆ, ಅದರಲ್ಲಿ 1983ರಲ್ಲಿ ಭಾರತ ಚೊಚ್ಚಲ ವಿಶ್ವಕಪ್ ಗೆಲುವಿನ ಯಶಸ್ವಿ ನಾಯಕ ಕಪಿಲ್‍ದೇವ್ ಕೂಡ ಸ್ಥಾನಪಡೆದಿದ್ದಾರೆ.

ಕ್ಲೈವ್‍ಲಾಯ್ಡ್‍ರಂತಹ ಶ್ರೇಷ್ಠ ಬೌಲರ್ ನಡುವೆಯೂ ಕೆರಿಬಿಯನ್ ತಂಡದಲ್ಲಿ ಸ್ಪಿನ್ ಜಾದೂ ಪ್ರದರ್ಶಿಸಿದ ಗಿಬ್ಸ್ 300 ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಎನಿಸಿಕೊಂಡವರು. 79 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳಲ್ಲಿ ಆಡಿರುವ ಗಿಬ್ಸ್ ಒಂದು ಬಾರಿಯೂ ನೋಬಾಲ್ ಹಾಕದಿರುವುದು ವಿಶೇಷ. ಇಂತಹ ಸಾಧನೆ ಮಾಡಿದ ಸ್ಪಿನ್ನರ್ ಖ್ಯಾತಿಯು ಈಗಲೂ ಗಿಬ್ಸ್ ಹೆಸರಿನಲ್ಲಿದೆ.

ಇಂಗ್ಲೆಂಡ್ ತಂಡದ ಶ್ರೇಷ್ಠ ಆಲೌಂಡರ್ ಆಗಿದ್ದ ಇಯಾನ್ ಬಾಥಮ್ ತಮ್ಮ 16 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಒಂದೇ ಒಂದು ನೋಬಾಲ್ ಹಾಕದೆ ತಂಡಕ್ಕೆ ಹಲವು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. 1979 ಹಾಗೂ 1992ರ ವಿಶ್ವಕಪ್‍ಗಳÀಲ್ಲಿ ಉತ್ತಮ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶಿಸಿದ ಬಾಥಾಮ್ ತಂಡವನ್ನು ಫೈನಲ್‍ಗೇರಿಸಿದ್ದರು.

102 ಟೆಸ್ಟ್ ಹಾಗೂ 116 ಏಕದಿನ ಪಂದ್ಯಗಳನ್ನಾಡಿರುವ ಬಾಥಾಮ್ 5200 ರನ್ ಹಾಗೂ 2113 ರನ್ ಗಳಿಸಿದ್ದರೆ,383 ಹಾಗೂ 145 ವಿಕೆಟ್‍ಗಳನ್ನು ಕೆಡವಿದ್ದಾರೆ.ವಿಶ್ವ ಕ್ರಿಕೆಟ್‍ನಲ್ಲಿ ಶ್ರೇಷ್ಠ ಬೌಲರ್‍ಗಳ ಸಾಲಿನಲ್ಲಿ ಗುರುತಿಸಿಕೊಳ್ಳುವ ಬೌಲರ್, ಪಾಕ್‍ನ ಈಗಿನ ಪ್ರಧಾನಿ ಇಮ್ರಾನ್‍ಖಾನ್ ಕೂಡ ತಮ್ಮ 21 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಒಂದೇ ಒಂದು ಬಾರಿಯೂ ನೋಬಾಲ್ ಗೆರೆಯನ್ನು ದಾಟಿಲ್ಲ.

1992ರ ವಿಶ್ವಕಪ್‍ನಲ್ಲಿ ತಂಡದ ನಾಯಕತ್ವ ವಹಿಸಿಕೊಂಡು ಪಾಕ್ ಅನ್ನು ವಿಶ್ವಚಾಂಪಿಯನ್ ಮಾಡಿದ್ದ ಇಮ್ರಾನ್‍ಖಾನ್ 1975 ರಿಂದ 1992ರ ವಿಶ್ವಕಪ್ ವರೆಗೂ 28 ಪಂದ್ಯಗಳನ್ನಾಡಿದ್ದು ಬಹುತೇಕ ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿದ್ದಾರೆ.

88 ಟೆಸ್ಟ್ ಹಾಗೂ 175 ಏಕದಿನ ಪಂದ್ಯಗಳಿಂದ ಕ್ರಮವಾಗಿ 362 ಹಾಗೂ 182 ವಿಕೆಟ್‍ಗಳನ್ನು ಕಬಳಿಸಿರುವುದಲ್ಲದೆ ಬ್ಯಾಟಿಂಗ್‍ನಲ್ಲೂ ಮಿಂಚಿ 3807ರನ್(ಟೆಸ್ಟ್) ಹಾಗೂ 3709ರನ್(ಏಕದಿನ)ಗಳಿಸಿದ್ದಾರೆ.

ಭಾರತ ತಂಡಕ್ಕೆ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದುಕೊಟ್ಟ ನಾಯಕನ ಕೀರ್ತಿಗೆ ಭಾಜನರಾಗುವ ಕಪಿಲ್‍ದೇವ್ ಕರಾರುವಕ್ಕಾದ ಬೌಲಿಂಗ್‍ಗೆ ಹೆಸರಾದವರು ಅದಕ್ಕೆ ಅವರು ತಮ್ಮ ಕ್ರಿಕೆಟ್ ಜೀವನದಲ್ಲಿ ಒಂದೇ ಒಂದು ನೋಬಾಲ್ ಹಾಕದಿರುವುದು ಸಾಕ್ಷಿಯಾಗಿದೆ.

1 ಅಕ್ಟೋಬರ್ 1978ರಂದು ಕ್ರಿಕೆಟ್ ಜೀವನಕ್ಕೆ ಪಾದಾರ್ಪಣೆ ಮಾಡಿದ ಕಪಿಲ್ ತಮ್ಮ ನೈಜ ಆಟದಿಂದಲೇ 1983ರ ವಿಶ್ವಕಪ್‍ನ ನಾಯಕತ್ವ ವಹಿಸಿಕೊಂಡರು. ಬೌಲಿಂಗ್‍ನಷ್ಟೇ ಬ್ಯಾಟಿಂಗ್‍ನಲ್ಲೂ ಮಿಂಚುತ್ತಿದ್ದ ಕಪಿಲ್ ಸೆಮಿಫೈನಲ್‍ನಲ್ಲಿ ಜಿಂಬಾಬ್ವೆ ವಿರುದ್ಧ ಅಜೇಯ 175 ರನ್ ಗಳಿಸಿ ತಂಡವನ್ನು ಫೈನಲ್‍ಗೇರಿಸಿದ್ದಲ್ಲದೆ ಅಂತಿಮ ಪಂದ್ಯದಲ್ಲಿ ತಮ್ಮ ಬೌಲಿಂಗ್ ಜಾದುವಿನಿಂದ ಎರಡು ಬಾರಿ ವಿಶ್ವಚಾಂಪಿಯನ್ಸ್ ಆಗಿದ್ದ ವೆಸ್ಟ್‍ಇಂಡೀಸ್ ತಂಡವನ್ನು ಸೋಲಿಸಿ ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟರು.

ತಮ್ಮ 16 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ 131 ಟೆಸ್ಟ್ ಹಾಗೂ 225 ಏಕದಿನ ಪಂದ್ಯಗಳಿಂದ 434 ಹಾಗೂ 253 ವಿಕೆಟ್‍ಗಳನ್ನು ಗಳಿಸಿರುವ ಕಪಿಲ್‍ದೇವ್ ಬ್ಯಾಟಿಂಗ್‍ನಲ್ಲೂ ಮಿಂಚಿ 5248 ಹಾಗೂ 3783 ರನ್‍ಗಳನ್ನು ಕಲೆಹಾಕಿದ್ದಾರೆ.

ಕಪಿಲ್‍ದೇವ್ 32 ವಿಶ್ವಕಪ್ ಪಂದ್ಯಗಳಿಂದ 34 ವಿಕೆಟ್‍ಗಳನ್ನು ಕಬಳಿಸಿದ್ದಾರೆ. ವಿಶ್ವದ ಸಾರ್ವಕಾಲಿಕ ಕ್ರಿಕೆಟರುಗಳಲ್ಲಿ ಗುರುತಿಸಿಕೊಂಡಿರುವ ಆಸೀಸ್ ವೇಗಿ ಡೆನ್ನಿಸ್ ಲಿಲ್ಲಿ ತಮ್ಮ 12 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ಬಾರಿ ಲೈನ್ ದಾಟಿರಲಿಲ್ಲ. ಆಸ್ಟ್ರೇಲಿಯಾ ಪರ 70 ಟೆ¸್ಟï ಮತ್ತು 63 ಏಕದಿನಗಳಲ್ಲಿ ಕಣಕ್ಕಿಳಿದಿರುವ ಲಿಲ್ಲಿ ನೋ ಬಾಲ್ ಎಂಬ ತಪ್ಪನ್ನು ಮಾಡಿರಲಿಲ್ಲ. ಲಿಲ್ಲಿ 70 ಟೆಸ್ಟ್ ಹಾಗೂ 63 ಏಕದಿನ ಪಂದ್ಯಗಳಲ್ಲಿ 355 ಹಾಗೂ 103 ವಿಕೆಟ್‍ಗಳನ್ನು ಕೆಡವಿದ್ದಾರೆ.

# ಅತಿ ಹೆಚ್ಚು ನೋಬಾಲ್ ಪಂದ್ಯಗಳು
ವೆಸ್ಟ್‍ಇಂಡೀಸ್- ಆಸ್ಟ್ರೇಲಿಯಾ:22-2-1978-ಸೆಂಟ್ ಜೋನ್ಸ್-28 (ನೋಬಾಲ್)
ಭಾರತ-ಜಿಂಬಾಬ್ವೆ:19-5-1999- ಲಿಚೆಸ್ಟರ್-26 (ನೋಬಾಲ್)
ಭಾರತ-ನ್ಯೂಜಿಲ್ಯಾಂಡ್: 8-11-1999-ಹೈದರಾಬಾದ್-23(ನೋಬಾಲ್)
ಪಾಕಿಸ್ತಾನ- ಸ್ಕಾಟ್‍ಲೆಂಟ್:20-5-1999- ಚೆಸ್ಟರ್-ಲೇ- ಸ್ಟ್ರೀಟ್-23(ನೋಬಾಲ್)
ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್:23-11-1980- ಅಡಿಲೇಡ್-23(ನೋಬಾಲ್)

# ಅತಿ ಹೆಚ್ಚು ನೋಬಾಲ್ ಮಾಡಿದ ಬೌಲರ್‍ಗಳು
ಶ್ರೀಶಾಂತ್ (ಭಾರತ)- 44 ಪಂದ್ಯ-23(ನೋಬಾಲ್)
ಜಸ್‍ಪ್ರೀತ್‍ಬೂಮ್ರಾ(ಭಾರತ)-77 ಪಂದ್ಯ-21(ನೋಬಾಲ್)
ಇಶಾಂತ್‍ಶರ್ಮಾ(ಭಾರತ)- 89 ಪಂದ್ಯ-21 (ನೋಬಾಲ್)
ಅಮಿತ್‍ಮಿಶ್ರಾ(ಭಾರತ)-147 ಪಂದ್ಯ- 20 (ನೋಬಾಲ್)
ಲಸಿತ್ ಮಾಲಿಂಗ(ಶ್ರೀಲಂಕಾ)-122 ಪಂದ್ಯ-18 (ನೋಬಾಲ್)

Facebook Comments