ಬಿಟ್‍ಕಾಯಿನ್ ಜಾಹಿರಾತು ನಿಷೇಧಕ್ಕೆ ನಿರ್ಧರಿಸಿಲ್ಲ : ನಿರ್ಮಲಾ ಸೀತಾರಾಮನ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.30-ಬಿಟ್‍ಕಾಯಿನ್ ಸೇರಿದಂತೆ ಕ್ರಿಪ್ಟೋ ಕರೆನ್ಸಿಗಳ ಜಾಹಿರಾತು ನಿಷೇಧಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ರಾಜ್ಯಸಭೆಯಲ್ಲಿಂದು ಪ್ರಶ್ನೋತ್ತರ ಅವಧಿಯಲ್ಲಿ ಉತ್ತರ ನೀಡಿರುವ ಸಚಿವರು, ಇದು ಅತ್ಯಂತ ಅಪಾಯಕಾರಿ ಕ್ಷೇತ್ರ, ಸಂಪೂರ್ಣ ಕ್ರಮಬದ್ದವಾದ ಚೌಕಟ್ಟು ರೂಪಿಸಲಾಗಿಲ್ಲ ಎಂದು ಹೇಳಿದರು.

ಜಾಹಿರಾತುಗಳನ್ನು ನಿಷೇಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬದಲಾಗಿ ಜನಜಾಗೃತಿ ಮೂಡಿಸಲು ಆರ್‍ಬಿಐ ಮತ್ತು ಸೆಬಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಕ್ರಿಪ್ಟೋ  ಕರೆನ್ಸಿಗೆ ಸಂಬಂಧಪಟ್ಟಂತೆ ಶೀಘ್ರವೇ ಕಾನೂನನ್ನು ಸಂಸತ್‍ನಲ್ಲಿ ಮಂಡಿಸುವುದಾಗಿ ಅವರು ತಿಳಿಸಿದ್ದಾರೆ.

Facebook Comments