ಬಿಗ್ ನ್ಯೂಸ್ : ತೆರಿಗೆ ಸುಸ್ತಿದಾರರಿಗೆ ಮುಂದೈತೆ ಮಾರಿಹಬ್ಬ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜೂ.17-ಆದಾಯ ತೆರಿಗೆ ಇಲಾಖೆಗೆ ಕೋಟ್ಯಂತರ ರೂ. ವಂಚಿಸಿ ಸುಸ್ತಿದಾರರಾಗಿರುವ ವಂಚಕರು ಇನ್ನು ಮುಂದೆ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗದಂತಹ ಕಾನೂನುನನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಜಾರಿಗೊಳಿಸಲು ಸಜ್ಜಾಗಿದೆ.

ವಿವಿಧ ವರ್ಗಗಳ ತೆರಿಗೆ ವಂಚಕರು ಈ ಹಿಂದೆ ವಿಚಾರಣೆ ಮತ್ತು ಇಂತಹ ಕೃತ್ಯಗಳಿಂದ ಪಾರಾಗಲು ಇಂತಿಷ್ಟು ಹಣವನ್ನು ಜುಲ್ಮಾನೆ ರೂಪದಲ್ಲಿ ಪಾವತಿಸಿ ನಿರಾಳರಾಗಬಹುದಿತ್ತು.

ಆದರೆ ಹೊಸ ಕಾನೂನಿನ ಪ್ರಕಾರ ತೆರಿಗೆ ವಂಚಕರು ದಂಡ ಶುಲ್ಕವನ್ನು ಪಾವತಿಸಿ ಸುಮ್ಮನಾಗುವಂತಿಲ್ಲ. ಅವರ ಇಡೀ ಅಕ್ರಮ ಹಣದ ವಹಿವಾಟಿಗೆ ಅನುಗುಣವಾಗಿ ಅವರನ್ನು ಶಿಕ್ಷೆಗೆ ಗುರಿಪಡಿಸುವ ಕಾನೂನನ್ನು ಸಿಬಿಡಿಟಿ ಜಾರಿಗೊಳಿಸುತ್ತಿದೆ.

ಈ ಹೊಸ ಕಾನೂನು ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದ್ದು, ವಿದೇಶಗಳಲ್ಲಿ ಅಕ್ರಮವಾಗಿ ಸಂಪತ್ತು ಗಳಿಸಿರುವ, ಕಾಳಧನವನ್ನು ವಿದೇಶಿ ಬ್ಯಾಂಕ್‍ಗಳಲ್ಲಿ ಭದ್ರವಾಗಿ ಇಟ್ಟಿರುವ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ತೆರಿಗೆ ಇಲಾಖೆಗಳ ದಿಕ್ಕು ತಪ್ಪಿಸಿ ಕೋಟ್ಯಂತರ ರೂ. ಸುಂಕ ವಂಚಿಸಿ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟು ಮಾಡಿರುವ ವಂಚಕರ ವಿರುದ್ಧ ಕುಣಿಕೆಯನ್ನು ಬಿಗಿಗೊಳಿಸಲು ಹೊಸ ಕಾನೂನು ನೆರವಾಗಲಿದೆ.

ಸಿಬಿಡಿಟಿ ಉನ್ನತಾಧಿಕಾರಿಗಳು ಈ ಸಂಬಂಧ ಈಗಾಗಲೇ ಇರುವ ಕಾನೂನು ಮತ್ತು ನಿಯಮಾವಳಿಗಳಿಗೆ ತಿದ್ದುಪಡಿ ಮಾಡುವ ಜೊತೆಗೆ ಹೊಸ ವಿಧೇಯಕವೊಂದನ್ನು ರೂಪಿಸಿ ಕೇಂದ್ರ ಸರ್ಕಾರದ ಅನುಮೋದನೆಗೆ ಸಲ್ಲಿಸಲಿದ್ದಾರೆ.

ಮಸೂದಿಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿ ಸಂಸತ್‍ನಲ್ಲಿ ಅನುಮೋದನೆಯಾಗುತ್ತಿದ್ದಂತೆ ಮಹಾ ತೆರಿಗೆ ವಂಚಕರ ವಿರುದ್ಧ ಕಾನೂನು ಛಾಟಿ ಬೀಸಲು ಮಂಡಳಿ ಸಿದ್ದತೆ ಮಾಡಿಕೊಂಡಿದೆ.
ಸಿಬಿ

Facebook Comments

Sri Raghav

Admin