132 ಗ್ರಾಮಗಳಲ್ಲಿ ಒಂದೇ ಒಂದು ಹೆಣ್ಣು ಶಿಶು ಜನಿಸಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಉತ್ತರಕಾಶಿ,ಜು.22- ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಸಂದರ್ಭದಲ್ಲೇ ಉತ್ತರಕಾಶಿಯಲ್ಲಿ ಜನನ ಪ್ರಮಾಣದ ಲಿಂಗಾನುಪಾತವನ್ನು ಗಮನಿಸಿದರೆ ಕಳೆದ ಮೂರು ತಿಂಗಳಿನಿಂದ ಹೆಣ್ಣು ಶಿಶುಗಳ ಜನನವೇ ಆಗಿಲ್ಲ ಎಂಬ ಆಘಾತಕಾರಿ ಅಂಶವೊಂದು ಹೊರಬಿದ್ದಿದೆ.

ಉತ್ತರಕಾಶಿಯ 132 ಗ್ರಾಮಗಳಲ್ಲಿ ಕಳೆದ ಮೂರು ತಿಂಗಳಿನಿಂದ 216 ಮಕ್ಕಳ ಜನನವಾಗಿದ್ದು, ಅವೆಲ್ಲವೂ ಗಂಡುಶಿಶುಗಳೇ ಆಗಿವೆ. ಹೆಣ್ಣು ಶಿಶುಗಳ ಜನನ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಜನರಲ್ಲಿನ ಮೌಢ್ಯ ನಿವಾರಿಸುವ ಜಾಗೃತಿ ಮೂಡಿಸುವಲ್ಲಿ ಜಿಲ್ಲಾಡಳಿತದ ವಿಫಲವಾಗಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ಅಶೀಸ್ ಚೌಹಾನ್ ಮಾತನಾಡಿ, ಯಾವ ಯಾವ ಪ್ರದೇಶಗಳಲ್ಲಿ ಹೆಣ್ಣು ಶಿಶುಗಳ ಜನನ ಶೂನ್ಯವಾಗಿದೆ ಮತ್ತು ಒಂದೇ ಒಂದು ಹೆಣ್ಣು ಶಿಶು ಜನಿಸಿರುವ ಪ್ರದೇಶಗಳನ್ನು ಪಟ್ಟಿಮಾಡಿ ಇದರಿಂದ ಅನುಪಾತದಲ್ಲಿ ಮೇಲಾಗುವ ಪರಿಣಾಮಗಳ ಕುರಿತು ಹಾಗೂ ಇದರ ಹಿಂದಿರುವ ಕಾರಣಗಳನ್ನು ಗುರುತಿಸಲು ಸಮೀಕ್ಷೆ ಮತ್ತು ಅಧ್ಯಯನ ನಡೆಸಲಾಗುತ್ತದೆ ಎಂದು ತಿಳಿಸಿದರು.

ಅಲ್ಲದೆ ಆಶಾ ಕಾರ್ಯಕರ್ತರೊಂದಿಗೆ ತುರ್ತು ಸಭೆ ನಡೆಸಿ ಈ ಪ್ರದೇಶಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣುಶಿಶುಗಳ ಜನನ ಸಂಖ್ಯೆಯಲ್ಲಿ ಇಳಿಕೆ ಬಗ್ಗೆ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಎಂದು ಹೇಳಿದರು.

ಹೆಣ್ಣುಶಿಶುಗಳ ಶೂನ್ಯ ಜನನವನ್ನು ಗಮನಿಸಿದರೆ ಹೆಣ್ಣುಭ್ರೂಣ ಹತ್ಯೆ ವ್ಯಾಪಕವಾಗಿರುವುದು ಕಂಡುಬರುತ್ತಿದೆ. ಕಳೆದ ಮೂರು ತಿಂಗಳಿನಿಂದ ಒಂದೇ ಒಂದು ಹೆಣ್ಣು ಶಿಶುವಿನ ಜನನವಾಗಿಲ್ಲ . ಇದು ಕಾಕತಾಳೀಯವಲ್ಲ. ಆಘಾತಕಾರಿ ಸಂಗತಿ.

ಸರ್ಕಾರ ಮತ್ತು ಆಡಳಿತ ಹೆಣ್ಣುಭ್ರೂಣ ಹತ್ಯೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿ ಎಂದು ಸಮಾಜಸೇವಕರಾದ ಕಲ್ಪನಾ ಠಾಕೂರ್ ಆರೋಪಿಸಿದರು.

Facebook Comments