ಸಂಡೆ ಲಾಕ್‍ಡೌನ್ : ರಾಜ್ಯದಲ್ಲಿ 36 ಗಂಟೆ ಸಿಗಲ್ಲ ಮದ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.4- ಭಾನುವಾರ ಲಾಕ್‍ಡೌನ್ ಮಾಡಿರುವುದರಿಂದ ಮುಂದಿನ 36 ಗಂಟೆಗಳ ಕಾಲ ಮದ್ಯ ಸಿಗುವುದಿಲ್ಲ.  ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 9 ಗಂಟೆವರೆಗೆ ಯಾವುದೇ ಮದ್ಯದ ಅಂಗಡಿಗಳು ತೆರೆಯುವುದಿಲ್ಲ.

ಎಂಆರ್‍ಪಿ, ವೈನ್‍ಸ್ಟೋರ್, ಕ್ಲಬ್, ಬಾರ್‍ಗಳ ಮೇಲೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಹೀಗಾಗಿ 36 ಗಂಟೆಗಳ ಕಾಲ ಮದ್ಯ ದೊರೆಯುವುದಿಲ್ಲ. ಮದ್ಯಪ್ರಿಯರು ಇಂದೇ ಮದ್ಯವನ್ನು ಕೊಂಡಿಟ್ಟುಕೊಳ್ಳಬೇಕಾಗಿದೆ.

ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಭಾನುವಾರ ಸಂಪೂರ್ಣ ಲಾಕ್‍ಡೌನ್ ಮಾಡಿ ಸರ್ಕಾರ ಆದೇಶ ಮಾಡಿದೆ. ಎಲ್ಲ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಲು ಸೂಚಿಸಿದೆ.

ಬಸ್ ಸಂಚಾರ, ಆಟೋ, ಟ್ಯಾಕ್ಸಿ ಸೇರಿದಂತೆ ಎಲ್ಲವೂ ಸಂಪೂರ್ಣ ಸ್ತಬ್ಧವಾಗಲಿದೆ. ಮದ್ಯದಂಗಡಿಗಳು ಮುಚ್ಚಲಿವೆ. ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 9 ಗಂಟೆವರೆಗೆ ಎಲ್ಲ ಮದ್ಯದ ಅಂಗಡಿಗಳು ಬಂದ್ ಆಗಲಿವೆ.

Facebook Comments