ಕೊನೆಯ ‘ಮನ್-ಕಿ-ಬಾತ್’ ಹೇಳಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.24 (ಪಿಟಿಐ)- ಮುಂಬರುವ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್-ಕಿ-ಬಾತ್(ಮನದ ಮಾತು) ಪ್ರಸಾರವಾಗುವುದಿಲ್ಲ.

ಇಂದಿನ ಮನ್-ಕಿ-ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೇ ಈ ವಿಷಯ ತಿಳಿಸಿದ್ದಾರೆ. ಇದು ನನ್ನ ಕೊನೆ ಮನ್ ಕೀ ಬಾತ್. ಎರಡು ತಿಂಗಳು ಅಂದರೆ ಮಾರ್ಚ್ ಮತ್ತು ಏಪ್ರಿಲ್‍ನಲ್ಲಿ ಈ ಬಾನುಲಿ ಭಾಷಣ ಕಾರ್ಯಕ್ರಮ ಇರುವುದಿಲ್ಲ.

ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ಮೇ ತಿಂಗಳ ಕೊನೆ ಭಾನುವಾರ ನಾನು ಮತ್ತೆ ಹಿಂದಿರುಗಲಿದ್ದೇನೆ ಎಂದು ಹೇಳಿದ್ದಾರೆ. ಮೋದಿ ಅವರು 2014ರಲ್ಲಿ ಪ್ರಧಾನಿಯಾದ ನಂತರ ಈವರೆಗೆ 53 ಮನ್-ಕಿ-ಬಾತ್ ಕಾರ್ಯಕ್ರಮ ನಡೆಸಿದ್ದಾರೆ.

ಉಗ್ರರಿಗೆ ತಕ್ಕಶಾಸ್ತಿ ಮಾಡಲು ಶತಸಿದ್ಧ :  ಪುಲ್ವಾಮದಲ್ಲಿ ಯೋಧರ ಹತ್ಯಾಕಾಂಡಕ್ಕೆ ಕಾರಣರಾದ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಪುನರುಚ್ಚಿಸಿದ್ದಾರೆ. ಪುಲ್ವಾಮ ದಾಳಿಯನ್ನು ಉಗ್ರವಾಗಿ ಖಂಡಿಸಿದ ಅವರು, ಯೋಧರ ನರಮೇಧದಿಂದ ದೇಶದ ಜನರಲ್ಲಿ ಆಕ್ರೋಶ ಹೆಚ್ಚಾಗಿದೆ.

ಹುತಾತ್ಮ ಯೋಧರ ತ್ಯಾಗ ಯಾವುದೇ ಕಾರಣಕ್ಕೂ ವ್ಯರ್ಥವಾಗಲು ಬಿಡುವುದಿಲ್ಲ. ಇದಕ್ಕೆ ಕಾರಣರಾದ ಭಯೋತ್ಪಾದಕರಿಗೆ ತಕ್ಕ ಶಾಸ್ತಿ ಶತಸಿದ್ಧ ಎಂದು ಗುಡುಗಿದರು.  ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೊ ಪ್ರಸಾರ ಮಾನ್ ಕಿ ಬಾತ್ ಅವರ 53ನೇ ಸಂಚಿಕೆಯ ಭಾಷಣದ ಆರಂಭದಲ್ಲೇ ಪುಲ್ವಾಮ ಹುತಾತ್ಮ ಯೋಧರನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಪುಲ್ವಾಮಾ ಭಯೋತ್ಪಾದನಾ ದಾಳಿಯ ನಂತರ ಪ್ರಧಾನ ಮಂತ್ರಿಯ ಮೊದಲ ಮನ್ ಕಿ ಬಾತ್ ಆಗಿದೆ. 40 ಸಿಆರ್‍ಪಿಎಫ್ ಯೋಧರು ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರರಿಂದ ಕೊಲ್ಲಲ್ಪಟ್ಟರು.

ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿ ಭಾರತ ವೀರ ಯೋಧರು ಮತ್ತು ಹುತಾತ್ಮರ ಗೌರವಾರ್ಥ ನಾಳೆ ರಾಷ್ಟ್ರೀಯ ಸೈನಿಕ ಸ್ಮಾರಕ ಅನಾವರಣಗೊಳ್ಳಲಿದೆ ಎಂದು ಮೋದಿ ಇದೇ ಸಂದರ್ಭದಲ್ಲಿ ತಿಳಿಸಿದರು.

Facebook Comments