ನಾನು ನಿಂತಿರುವುದು ನನಗಾಗಿ ಅಲ್ಲ, ಅಮೆರಿಕ ಪರವಾಗಿ : ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜ.14- ಹಿಂಸಾಚಾರ, ಕಾನೂನು ಉಲ್ಲಂಘನೆ ಮತ್ತು ವಿಧ್ವಂಸಕ ಕೃತ್ಯಗಳನ್ನು ನಡೆಸಬಾರದು ಎಂದು ನಾನು ಅಮೆರಿಕ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಪದಚ್ಯುತಿ, ಬೆಳವಣಿಗೆಗಳ ನಡುವೆ ಶ್ವೇತಭವನದಿಂದ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾನು ನಿಂತಿರುವುದು ನನಗಾಗಿ ಅಲ್ಲ, ಅಮೆರಿಕ ಪರವಾಗಿ. ಏನೇ ಆದರೂ ಶಾಂತಿ ಕಾಪಾಡಿ. ತಾಳ್ಮೆ ಕಳೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ.

ಈಗಾಗಲೇ ಟ್ರಂಪ್ ಅವರನ್ನು ಪದಚ್ಯುತಿಗೊಳಿಸಲು ನಡೆಯುತ್ತಿರುವ ಕಾರ್ಯಚಟುವಟಿಕೆಗಳ ನಡುವೆಯೇ ಅಮೆರಿಕದಲ್ಲಿ ಹೊಸ ರಾಜಕೀಯ ಸಂಚಲನ ಸೃಷ್ಟಿಯಾಗಿದ್ದು, ಇತಿಹಾಸದಲ್ಲಿ ಇದೊಂದು ದೊಡ್ಡ ಚಟುವಟಿಕೆಯಾಗಿದೆ. ಎರಡು ಬಾರಿ ದೋಷಾರೋಪಣೆಗೆ ಒಳಗಾದ ಅಧ್ಯಕ್ಷ ಎಂಬ ಕಳಂಕ ಕೂಡ ಟ್ರಂಪ್ ಮೇಲಿದೆ. ಇತ್ತೀಚೆಗೆ ಬೆಂಬಲಿಗರ ರ್ಯಾಲಿ ವೇಳೆ ಶ್ವೇತಭವನದೊಳಗೆ ನುಗ್ಗಲು ನಡೆಸಿದ ಘರ್ಷಣೆ ಹಾಗೂ ದಾಳಿಯನ್ನು ಕಟುವಾಗಿ ಟೀಕಿಸಲಾಗಿದೆ.

ಇನ್ನು ಕೆಲವೇ ದಿನಗಳಲ್ಲಿ ಜೋ ಬಿಡೆನ್ ಅವರು ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಂದರ್ಭದಲ್ಲೇ ಟ್ರಂಪ್ ಅವರ ಎಡವಟ್ಟು ಅಮೆರಿಕನ್ನರಲ್ಲೇ ಸಾಕಷ್ಟು ಟೀಕೆಗೆ ಒಳಗಾಗಿದೆ. ವಿಶ್ವ ಸಮುದಾಯದ ಮುಂದೆಯೂ ಕೂಡ ಅವರನ್ನು ಅವಮಾನಗೊಳಿಸಲಾಗುತ್ತಿದೆ.

Facebook Comments