ಆಫ್ರಿದಿ ಶೀಘ್ರ ಗುಣಮುಖರಾಗಲಿ : ಗಂಭೀರ್ ಹಾರೈಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.14- ಪಾಕ್ ಕ್ರಿಕೆಟಿಗರನ್ನು ಕೊರೊನಾ ಮಾರಿ ಬೆಂಬಡಿದಂತೆ ಕಾಡುತ್ತಿದ್ದು, ಈಗ ಸ್ಟೈಲಿಶ್ ಆಟಗಾರ ನಾಗಿದ್ದ ಶಾಹಿದ್ ಆಫ್ರಿದಿಗೂ ಕೋವಿಡ್ 19 ಆವರಿಸಿದ್ದು ಬೇಗ ಗುಣಮುಖರಾಗಲೆಂದು ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್ ಹಾರೈಸಿದ್ದಾರೆ.

ಮೈದಾನದಲ್ಲಿ ಗೌತಮ್ ಹಾಗೂ ಶಾಹಿದ್ ಎಷ್ಟೋ ಭಾರಿ ಕಿತ್ತಾಡಿದ್ದಲ್ಲದೆ ಅಂತರ್ಜಾಲದಲ್ಲೂ ಆರೋಪ- ಪ್ರತ್ಯಾರೋಪ ಮಾಡುವ ಮೂಲಕ ಗಮನ ಸೆಳೆದಿದ್ದರು, ಆದರೆ ಆಫ್ರಿದಿಗೆ ಕೊರೊನಾ ಪಾಸಿಟಿವ್ ಬಂದಿರುವ ಬೆನ್ನಲ್ಲೇ ಗಂಭೀರ್ ಮಾನವೀಯತೆಯ ಮಾತುಗಳನ್ನಾಡುವ ಮೂಲಕ ಸುದ್ದಿಯಾಗಿದ್ದಾರೆ.

ಭಾರತೀಯರದು ಮತ್ತೊಬ್ಬರಿಗೆ ಸಹಾಯ ಮಾಡುವ ಗುಣ ಹೊಂದಿದ್ದಾರೆಯೇ ಹೊರತು ಬೇರೊಬ್ಬರ ಸಾವು, ನೋವಿನಲ್ಲಿ ಸಂತೋಷ ಕಾಣಲು ಹೋಗುವುದಿಲ್ಲ ಎಂದು ಗಂಭೀರ್ ತಮ್ಮ ಟ್ವಿಟ್ಟರ್‍ನಲ್ಲಿ ಬಿಂಬಿಸಿಕೊಂಡಿ ರುವುದು ಮೆಚ್ಚುಗೆಯ ಸಂಗತಿ ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದರು.

ಕೊರೊನಾ ಸೋಂಕಿನಿಂದ ಬಳಲುತ್ತಿರುವವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ, ವೈರಸ್ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ನನಗೂ ಹಾಗೂ ಆಫ್ರಿದಿಗೂ ರಾಜಕೀಯವಾಗಿ ಸಾಕಷ್ಟು ದ್ವೇಷಗಳಿವೆ ಆದರೂ ಅವರು ಶೀಘ್ರ ಗುಣಮುಖರಾಗಿಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕೂಡ ಗಂಭೀರ್ ಹೇಳಿದ್ದಾರೆ.

ಕೊರೊನಾ ವೈರಸ್‍ಗೆ ಈಗಾಗಲೇ ಪಾಕ್ ಕ್ರಿಕೆಟಿಗರಾದ ಜಪ್ಪರ್ ಸರ್ಫಾರಾಜ್ ಹಾಗೂ ರಿಯಾಜ್ ಶೇಕ್ ಅವರು ಮೃತಪಟ್ಟಿದ್ದರೆ, 1.30 ಲಕ್ಷಕ್ಕೂ ಹೆಚ್ಚು ಜನ ಕೋವಿಡ್ 19 ಮಹಾಮಾರಿಯಿಂದ ಬಳಲುತ್ತಿದ್ದು 2500 ಮಂದಿ ಸಾವನ್ನಪ್ಪಿದ್ದರೆ, 50 ಸಾವಿರಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿದ್ದಾರೆ.

Facebook Comments

Sri Raghav

Admin