ಶಾಕಿಂಗ್ : ಸೋಂಕಿನ ಲಕ್ಷಣವಿಲ್ಲದವರನ್ನೂ ಬಲಿ ಪಡಯುತ್ತಿದೆ ಕೊರೊನಾ ಹೆಮ್ಮಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.7- ರೋಗ ಲಕ್ಷಣ ಕಾಣಿಸಿಕೊಳ್ಳದಿರುವ ವ್ಯಕ್ತಿಗಳು ಮಹಾಮಾರಿ ಕೊರೊನಾಕ್ಕೆ ಬಲಿಯಾಗುತ್ತಿರುವುದು ಸಿಲಿಕಾನ್ ಸಿಟಿಯ ಜನರನ್ನು ಬೆಚ್ಚಿ ಬೀಳಿಸಿದೆ. ಉಸಿರಾಟ ಹಾಗೂ ಅನಾರೋಗ್ಯದ ಸಮಸ್ಯೆ ಇಲ್ಲದಂತಹ ಎ ಸಿಂಪ್ಟಮ್ಯಾಟಿಕ್ ವ್ಯಕ್ತಿಗಳು ಮಹಾಮಾರಿಗೆ ಬಲಿಯಾಗುತ್ತಿರುವ ಅಂಶ ಬಯಲಾಗಿದೆ.

ಬೆಂಗಳೂರು ಮತ್ತು ಹಾಸನದಲ್ಲಿ ಎ ಸಿಂಪ್ಟಮ್ಸ್ ಇರುವ ಪೇಷೆಂಟ್‍ಗಳು ಸಾವನ್ನಪ್ಪಿರುವುದು ಹೊಸ ಸಮಸ್ಯೆಗೆ ನಾಂದಿಯಾಗಿದೆ. ಇದುವರೆಗೂ ಉಸಿರಾಟದ ತೊಂದರೆ ಕಾಣಿಸಿಕೊಂಡು ಕೊರೊನಾ ಪಾಸಿಟಿವ್ ಆದಂತಹ ವ್ಯಕ್ತಿಗಳು ಮಾತ್ರ ಚಿಕಿತ್ಸೆ ದೊರೆಯದೆ ಸಾವನ್ನಪ್ಪುತ್ತಿದ್ದಾರೆ ಎಂದು ಭಾವಿಸಲಾಗಿತ್ತು.

ಹೀಗಾಗಿ ಎ ಸಿಂಪ್ಟಮ್ಯಾಟಿಕ್ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳದೆ ಪ್ರತ್ಯೇಕ ಕ್ವಾರಂಟೈನ್‍ನಲ್ಲಿ ಇರಿಸಿ ಚಿಕಿತ್ಸೆ ನೀಡಿದ ನಂತರ ಮನೆಗೆ ಕಳುಹಿಸಲಾಗುತ್ತಿತ್ತು. ಆದರೆ, ಇದೀಗ ಎ ಸಿಂಪ್ಟಮ್ಯಾಟಿಕ್ ಇರುವ ವ್ಯಕ್ತಿಗಳೇ ಕೊರೊನಾ ಮಹಾಮಾರಿಗೆ ಬಲಿಯಾಗುತ್ತಿರುವುದರಿಂದ ನಗರದಲ್ಲಿ ವಾಸಿಸುತ್ತಿರುವವರು ಎಚ್ಚರ ವಹಿಸುವ ಅಗತ್ಯವಿದೆ.

ನಮಗೆ ಯಾವುದೇ ರೋಗ ಲಕ್ಷಣವಿಲ್ಲ, ನಾವು ಸೇಫ್. ಕೊರೊನಾ ನಮ್ಮನ್ನು ಏನೂ ಮಾಡುವುದಿಲ್ಲ ಎಂದು ಭಾವಿಸಿಕೊಂಡು ನಿರ್ಲಕ್ಷ್ಯ ವಹಿಸಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ.ಹೀಗಾಗಿ ನಗರದಲ್ಲಿರುವ ಪ್ರತಿಯೊಬ್ಬರೂ ರೋಗ ಲಕ್ಷಣ ಕಾಣಿಸಿಕೊಳ್ಳದಿದ್ದರೂ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.

Facebook Comments