ಚಳಿಗೆ ತತ್ತರಿಸಿದ ಉತ್ತರ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.30- ರಾಜಸ್ತಾನದ ಚುರು ಪ್ರದೇಶದಲ್ಲಿ ಮೈನಸ್ 1.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಉತ್ತರ ಭಾರತದ ಬಹುತೇಕ ರಾಜ್ಯಗಳು ಚಳಿಯಿಂದ ನಡುಗುವಂತಹ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ತಾಪಮಾನದ ಮಾಹಿತಿಯ ಪ್ರಕಾರ ದಿನೇ ದಿನೇ ದೆಹಲಿ, ಹರಿಯಾಣ, ಪಂಜಾಬ್, ರಾಜಸ್ತಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಉಷ್ಣಾಂಶ ಕುಸಿಯುತ್ತಿದೆ.

ಪಂಜಾಬ್‍ನ ಅಮೃತ್‍ಸರದಲ್ಲಿ 1.8 ಡಿಗ್ರಿ ಉಷ್ಣಾಂಶ ದಾಖಲಾದರೆ, ಪಟಿಯಾಲದಲ್ಲಿ 6ಡಿಗ್ರಿ, ಹರಿಯಾಣದ ನರ್ಲೂಲ್‍ನಲ್ಲಿ 2.4, ಇಸ್ಸಾರ್‍ನಲ್ಲಿ 3.7, ದೆಹಲಿಯ ಸಬ್ದರ್‍ಜಂಗ್‍ನಲ್ಲಿ 3.5 ಡಿಗ್ರಿ ಸೆಲ್ಸಿಯಷ್ಟು, ರಾಜಸ್ತಾನದ ಬಿಲ್ವಾರದಲ್ಲಿ 1.8 ಡಿಗ್ರಿ ಉಷ್ಣಾಂಶ ದಾಖಲಾಗಿದೆ.

ಬಿಹಾರದ ಗಯಾದಲ್ಲಿ 7.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು, ಈ ಎಲ್ಲಾ ರಾಜ್ಯಗಳಲ್ಲಿ ಗರಿಷ್ಠ ತಾಪಮಾನ 9.5 ಡಿಗ್ರಿ ಎಲ್ಸಿಯಸ್ ದಾಖಲಾಗಿಲ್ಲ. ದಿನೇ ದಿನೇ ಉಷ್ಣಾಂಶ ಕುಸಿಯುತ್ತಿದ್ದು, ಚಳಿಗೆ ಉತ್ತರ ಭಾರತ ತತ್ತರಿಸಿಹೋಗುತ್ತಿದೆ.

Facebook Comments