ಕೊರೊನಾ ಮುಕ್ತ ಉತ್ತರ ಕೊರಿಯಾ..!!

ಈ ಸುದ್ದಿಯನ್ನು ಶೇರ್ ಮಾಡಿ

ಸಿಯೋಲ್,ಏ.7-ಇಡೀ ವಿಶ್ವವೇ ಕೊರೊನಾ ಸೋಂಕಿನಿಂತ ತತ್ತರಿಸಿ ಹೋಗಿದ್ದರು. ಉತ್ತರ ಕೋರಿಯಾ ಮಾತ್ರ ನಮ್ಮ ದೇಶ ಸೋಂಕು ರಹಿತವಾಗಿದೆ ಎಂದು ಘೋಷಿಸಿಕೊಂಡಿದೆ. ಕೊರೊನಾ ಕಾಣಿಸಿಕೊಂಡ ನಂತರ ನಾವು ನಮ್ಮ ದೇಶದಿಂದ ಸೋಂಕು ಹೋಗಲಾಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಉತ್ತರ ಕೋರಿಯಾ ಹೇಳಿತ್ತು.

ಇದೀಗ ಮತ್ತೆ ತನ್ನ ಹೇಳಿಕೆಯನ್ನು ಪುನರುಚ್ಚರಿಸಿರುವ ಕೋರಿಯಾ ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿರುವ ದಾಖಲೆಯಲ್ಲಿ ನಾವು ಸೋಂಕಿನಿಂದ ಮುಕ್ತರಾಗಿದ್ದೇವೆ ಎಂದು ಹೇಳಿಕೆ ನೀಡಿದೆ. ನಮ್ಮ ರಾಷ್ಟ್ರದ ಗಡಿಭಾಗಗಳನ್ನು ಬಂದ್ ಮಾಡಿದ್ದೇವೆ. ಪ್ರವಾಸಿಗರು ಹಾಗೂ ರಾಜತಾಂತ್ರಿಕರಿಗೂ ಪ್ರವೇಶ ನಿರಾಕರಿಸಲಾಗಿದೆ.

ರೋಗ ಲಕ್ಷಣ ಕಾಣಿಸಿಕೊಂಡ ವ್ಯಕ್ತಿಗಳನ್ನು ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿರಿಸುವ ಮೂಲಕ ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೋರಿಯಾ ಹೇಳಿಕೊಂಡಿದೆ. ಕೊರೊನಾ ಕಾಣಿಸಿಕೊಂಡ ಸಂದರ್ಭದಲ್ಲಿ ಕೋರಿಯಾದಲ್ಲಿ 23,121 ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು.

ನಂತರ ಎಲ್ಲರ ವರದಿಯೂ ನೆಗಿಟಿವ್ ಆಯಿತು. ಆ ನಂತರ ಯಾರೊಬ್ಬರಿಗೂ ಸೋಂಕು ತಗುಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಉತ್ತರ ಕೋರಿಯಾ ಪ್ರತಿನಿಧಿಯಾಗಿರುವ ಎಡ್ವೀನ್ ಸಲ್ವಡಾರ್ ತಿಳಿಸಿದ್ದಾರೆ.

Facebook Comments