ಮತ್ತೆ ಅಣ್ವಸ್ತ್ರ ಪರೀಕ್ಷೆ ನಡೆಸಿದ ‘ಕಿರಿಕ್’ ಕೊರಿಯಾ

ಈ ಸುದ್ದಿಯನ್ನು ಶೇರ್ ಮಾಡಿ

ಸಿಯೋಲ್(ಪಿಟಿಐ), ಡಿ.8- ಅಮೆರಿಕಾದ ದಿಗ್ಬಂಧನ ಬೆದರಿಕೆಗೂ ಜಗ್ಗದ ಉತ್ತರ ಕೊರಿಯಾ ಮತ್ತೆ ಅಣ್ವಸ್ತ್ರ ಪರೀಕ್ಷೆಯನ್ನು ಯಶಸ್ವಿಯಾಗಿಸಿ ಡೊನಾಲ್ಡ್ ಟ್ರಂಪ್‍ಗೆ ತಿರುಗೇಟು ನೀಡಿದೆ.

ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಮತ್ತೊಂದು ಸುತ್ತಿನ ಮಾತುಕತೆಗೆ ಕಾಲ ನಿಗದಿಯಾಗುತ್ತಿರುವ ಸಂದರ್ಭದಲ್ಲೇ ನಡೆದ ಈ ಅಣ್ವಸ್ತ್ರ ಪರೀಕ್ಷೆ ವಾಷಿಂಗ್ಟನ್ ಅನ್ನು ಕೆರಳಿಸಿದೆ.

ಉಪಗ್ರಹ ಉಡಾವಣೆ ಕೇಂದ್ರದ ಸಮೀಪ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾನ್ ಉನ್ ಅವರ ಆದೇಶದಂತೆ ಅಣ್ವಸ್ತ್ರ ಕ್ಷಿಪಣಿ ಪ್ರಯೋಗ ನಡೆಸಲಾಗಿದೆ ಎಂದು ದಕ್ಷಿಣ ಕೊರಿಯಾ ಮಾಹಿತಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಉತ್ತರ ಕೊರಿಯಾ ನಡೆಸಿದ ಐದನೆ ಅಣ್ವಸ್ತ್ರ ಉಡಾವಣೆ ಪರೀಕ್ಷೆಯಾಗಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಮತ್ತು ಅಮೆರಿಕಾ ಯಾವುದೇ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸದಂತೆ ಪದೇ ಪದೇ ಎಚ್ಚರಿಕೆ ನೀಡಿದ್ದರೂ ಹಠಮಾರಿ ಕಿಮ್ ಮತ್ತೊಮ್ಮೆ ತಮ್ಮ ಮೊಂಡುತನವನ್ನು ಪ್ರದರ್ಶಿಸಿದ್ದಾರೆ.

Facebook Comments

Sri Raghav

Admin