ಮತ್ತೆ ವಿನಾಶಕಾರಿ ಹೊಸ ಅಸ್ತ್ರ ಪರೀಕ್ಷೆ ನಡೆಸಿದ ಜಗಮೊಂಡ ಕಿಮ್..!

ಈ ಸುದ್ದಿಯನ್ನು ಶೇರ್ ಮಾಡಿ

ಸಿಯೋಲ್, ಆ.17-ವಿಶ್ವಸಂಸ್ಥೆ ಮತ್ತು ಅಮೆರಿಕದ ಬೆದರಿಕೆಗೆ ಜಗ್ಗದ ಉತ್ತರ ಕೊರಿಯಾದ ಹಠಮಾರಿ ಸರ್ವಾಧಿಕಾರಿ ಕಿಮ್ ಜಾಂಗ್ -ಉನ್ ನೇತೃತ್ವದಲ್ಲಿ ದೇಶವು ಮತ್ತೆ ವಿನಾಶಕಾರಿ ಹೊಸ ಶಸ್ತ್ರಾಸ್ತ್ರವನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿದೆ.

ಕೇವಲ ಎರಡು ವಾರಗಳಲ್ಲಿ ಉತ್ತರ ಕೊರಿಯಾ ನಡೆಸಿದ ಆರನೇ ಕ್ಷಿಪಣಿ ಇದಾಗಿದೆ. ಜಗಮೊಂಡ ಕಿಮ್ ನಾಯಕತ್ವದ ರಾಷ್ಟ್ರವನ್ನು ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕೆ ಒಳಪಡಿಸಬೇಕೆಂಬ ಅಮೆರಿಕದ ಪ್ರಯತ್ನಕ್ಕೆ ಇದರಿಂದ ಮತ್ತೆ ಅಡ್ಡಿಯಾಗಿದೆ.

ಅಮೆರಿಕ ಮತ್ತು ತನ್ನ ಬದ್ಧ ವೈರಿ ದಕ್ಷಿಣ ಕೊರಿಯಾ ನಡೆಸಲು ಉದ್ದೇಶಿಸಿರುವ ಜಂಟಿ ಸಮರಾಭ್ಯಾಸಕ್ಕೆ ಎಚ್ಚರಿಕೆ ನೀಡಲು ಕೆಲವು ದಿನಗಳಿಂದಲೂ ಉತ್ತರ ಕೊರಿಯ ಕ್ಷಿಪಣಿಗಳು ಮತ್ತು ಹೊಸ ಅಸ್ತ್ರಗಳನ್ನು ಪ್ರಯೋಗಿಸುತ್ತಲೇ ಇದೆ.

ಗುರುವಾರವಷ್ಟೇ ಪಯೊಂಗ್‍ಯಾನ್ ಎರಡು ಲಘು ಶ್ರೇಣಿಯ ಮಿಸೈಲ್‍ಗಳನ್ನು ಪರೀಕ್ಷಾರ್ಥವಾಗಿ ಸಮುದ್ರಕ್ಕೆ ಹಾರಿ ಆತಂಕ ಸೃಷ್ಟಿಸಿತ್ತು.

ಮಾರಕ ಕ್ಷಿಪಣಿ ಪರೀಕ್ಷೆಗಳನ್ನು ನಡೆಸದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಾಟಿ ಎಚ್ಚರಿಕೆ ನೀಡಿದ್ದರೂ ಅದನ್ನು ಲೆಕ್ಕಿಸದೇ ಕಿಮ್ ಉಸ್ತುವಾರಿಯಲ್ಲಿ ಉತ್ತರ ಕೊರಿಯಾ ಮತ್ತೆ ಅಪಾಯಕಾರಿ ಹೊಸ ಅಸ್ತ್ರವನ್ನು ಪರೀಕ್ಷೆಗೆ ಒಳಪಡಿಸಿರುವುದು ಏಷ್ಯಾ ಖಂಡದಲ್ಲೂ ಆತಂತಕಕ್ಕೆ ಕಾರಣವಾಗಿದೆ.

Facebook Comments

Sri Raghav

Admin