ಯುಎಸ್ ಓಪನ್‍ನಿಂದ ಡೋಚೋ ವಿಕ್ ಔಟ್

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಸೆ.7- ಇಲ್ಲಿ ನಡೆಯುತ್ತಿರುವ ಪ್ರತಿಷ್ಟಿತ ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ಪ್ರತಿಭಾವಂತ ಆಟಗಾರ ಡೊಚೊವಿಕ್ ಆಕಸ್ಮಿಕವಾಗಿ ನಿರ್ಗಮಿಸಿದ್ದಾರೆ. ಪಂದ್ಯದ ವೇಳೆ ಅವರು ಬಾರಿಸಿದ ಟೆನಿಸ್ ಬಾಲ್ ಲೈನ್ ಜಡ್ಜ್ (ಗೆರೆ ತೀರ್ಪು ಮಹಿಳೆ) ಗಂಟಲಿಗೆ ಬಡಿದ ಕಾರಣ ಅವರನ್ನು ಪಂದ್ಯದಿಂದ ಹೊರಗೆ ಕಳುಹಿಸಲಾಗಿದೆ.

ಟೆನಿಸ್ ಪಂದ್ಯಾವಳಿಯ ನಿಯಮದ ಪ್ರಕಾರ ಯಾವುದೇ ಆಟಗಾರ ಪಂದ್ಯದ ವೇಳೆ ಲೈನ್ ಜಡ್ಜ್‍ನಲ್ಲಿ ನಿಂತಿರುವವರಿಗೆ ಚೆಂಡು ಬಡಿಯದಂತೆ ನೋಡಿಕೊಳ್ಳ ಬೇಕು. ಆದರೆ ಡೊಚೊವಿಕ್ ಅವರ ಬಾಲ್ ಲೈನ್ ವುಮೆನ್‍ಗೆ ಪರಿಣಾಮ ಬಡಿದ ಪರಿಣಾಮ ಟೂರ್ನಿಯಿಂದ ಕಿಕ್ ಔಟ್ ಮಾಡಲಾಗಿದೆ.

Facebook Comments