18ನೇ ಗ್ರಾನ್‍ಸ್ಲಾಂ ಪ್ರಶಸ್ತಿ ಗೆದ್ದ ಜೊಕೊವಿಚ್

ಈ ಸುದ್ದಿಯನ್ನು ಶೇರ್ ಮಾಡಿ

ಮೆಲ್ಬರ್ನ್, ಫೆ.22- ಪುರುಷರ ಟೆನ್ನಿಸ್ ಲೋಕದ ನಂಬರ್ 1 ದಿಗ್ಗಜ ನೊವಾಕ್ ಜೊಕೊವಿಚ್ ಅವರು ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ನೂತನ ದಾಖಲೆಯನ್ನು ಬರೆದಿದ್ದಾರೆ. ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಸೆರೆಬಿಯಾದ ನೊವಾಕ್ ಜೊಕೊವಿಚ್ ಅವರು ರಷ್ಯಾದ ಡ್ಯಾನಿಲ್ ಮೆಡ್ವಡೇವ್ ಅವರ ವಿರುದ್ಧ 7-5, 6-2, 6-2 ನೇರ ಸೆಟ್‍ಗಳಿಂದ ಗೆಲ್ಲುವ ಮೂಲಕ 9ನೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿಯನ್ನು ಗೆದ್ದು ಬೀಗಿದರು.

ಕಳೆದ ಆರು ವರ್ಷಗಳಿಂದಲೂ ಆಸ್ಟ್ರೇಲಿಯಾ ಓಪನ್ ಗೆಲ್ಲುತ್ತ ಬಂದಿರುವ ಜೊಕೊವಿಕ್ ಈಗ ಡಬ್ಬಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದು ಇನ್ನೆರಡು ಗ್ರ್ಯಾಂಡ್ ಸ್ಲಾಮ್‍ಗಳನ್ನು ಗೆದ್ದರೆ ಟೆನ್ನಿಸ್‍ಲೋಕದ ದಿಗ್ಗಜರಾದ ಫೆಡರರ್ ಹಾಗೂ ನಡಾಲ್‍ರ ದಾಖಲೆಯನ್ನು ಮುರಿಯಲಿದ್ದಾರೆ. ಜೊಕೊವಿಕ್ ಅವರು ಕಳೆದ 309 ವಾರಗಳಿಂದಲೂ ವಿಶ್ವದ ನಂಬರ್ 1 ಟೆನ್ನಿಸ್ ಆಟಗಾರನಾಗಿಯೇ ಮುಂದುವರೆದಿದ್ದು ಇನ್ನೆರಡು ವಾರಗಳ ಮಟ್ಟಿಗೆ ಅವರೇ ಟೆನ್ನಿಸ್ ಲೋಕದ ನಂಬರ್ 1 ಆಟಗಾರನಾಗಿ ಉಳಿಯಲಿದ್ದಾರೆ.

2003ರಲ್ಲಿ ಟೆನ್ನಿಸ್ ಅಂಗಳಕ್ಕೆ ಲಗ್ಗೆ ಇಟ್ಟ ಜೊಕೊವಿಚ್ ಅವರು ಅಂದಿನಿಂದಲೂ ತಮ್ಮ ಆಕ್ರಮಣಕಾರಿ ಆಟದಿಂದಾಗಿ ಹಲವು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.

ಜೊಕೊವಿಚ್ ಅವರು ಇದುವರೆಗೂ 18 ಗ್ರಾನ್‍ಸ್ಲಮ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದರಲ್ಲಿ 5 ಬಾರಿ ವಿಂಬಲ್ಡನ್ (2011, 2014,2015, 2018, 2019), 9 ಬಾರಿ ಆಸ್ಟ್ರೇಲಿಯನ್ ಓಪನ್ (2008, 2011, 2012,2013, 2015, 2016, 2019, 2020, 2021), ಮೂರು ಬಾರಿ ಯುಎಸ್ ಓಪನ್ ( 2011, 2015, 2018), ಒಂದು ಬಾರಿ ಫ್ರೆಂಚ್ ಓಪನ್ (2016) ಪ್ರಶಸ್ತಿಯನ್ನು ಗೆದ್ದು ಬೀಗಿದ್ದಾರೆ.

Facebook Comments