ನವಾಜ್ ಷರೀಫ್ ಮತ್ತು ಪುತ್ರಿ ಬಂಧನಕ್ಕೂ ಮುನ್ನವೇ ಮೊಮ್ಮಕ್ಕಳಿಬ್ಬರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Nawaz-Shareef
ಲಂಡನ್, ಜು.13-ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಬಂಧಿಸಲು ಇಂದು ಸಂಜೆ ಅಬುಧಾಬಿ ಮತ್ತು ಲಾಹೋರ್‍ನಲ್ಲಿ ಸಿದ್ದತೆ ನಡೆದಿರುವಾಗಲೇ ಲಂಡನ್ ಪೊಲೀಸರು ನಿನ್ನೆ ಸಾಯಂಕಾಲವೇ ಅವರ ಇಬ್ಬರು ಮೊಮ್ಮಕ್ಕಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತಮ್ಮ ಅಪಾರ್ಟ್‍ಮೆಂಟ್ ಬಳಿ ತಮ್ಮನ್ನು ನಿಂದಿಸಿದ ಎಂಬ ಕಾರಣಕ್ಕಾಗಿ ಪ್ರತಿಭಟನಾಕಾರನ ಹಲ್ಲೆ ನಡೆಸಿದ ಆರೋಪದ ಮೇಲೆ ನವಾಜ್ ಮೊಮ್ಮಕ್ಕಳಾದ ಜುನೈದ್ ಸಫ್ಡರ್ ಮತ್ತು ಝಕಾರಿಯಾ ಷರೀಪ್‍ರನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ.

ನವಾಜ್ ಷರೀಫ್ ಅಕ್ರಮ ಆಸ್ತಿ ಮತ್ತು ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಲಂಡನ್‍ನ ಪಾರ್ಕ್‍ಲೇನ್ ಅವೆನ್‍ಫೀಲ್ಟ್‍ನ ಅಪಾರ್ಟ್‍ಮೆಂಟ್ ಬಳಿ ಮಾಜಿ ಪ್ರಧಾನಿ ವಿರೋಧಿಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಜುನೈದ್ ಮತ್ತು ಝಕಾರಿಯಾ ಪ್ರತಿಭಟನಾಕಾರನ ಮೇಲೆ ಹಲ್ಲೆ ನಡೆಸಿದರು.
ಸ್ಥಳದಲ್ಲೇ ಇದ್ದ ಪೊಲೀಸರು ಇಬ್ಬರ ಕೈಗೆ ಕೋಳ ಹಾಕಿ ಹತ್ತಿರದ ಪೊಲೀಸ್ ಠಾಣೆಗೆ ಕರೆದುಕೊಂಡು ಹೊಂದರು.

ನವಾಜ್ ಪುತ್ರ ಲಂಡನ್‍ನಲ್ಲಿ ಫ್ಲಾಟ್ ಹೊಂದಿದ್ದಾನೆ. ಅವೆನ್ ಫೀಲ್ಟ್ ಅಪಾರ್ಟ್‍ಮೆಂಟ್ ಸೇರಿದಂತೆ ಹಲವು ಐಷಾರಾಮಿ ಬಂಗಲೆಗಳು ಮತ್ತು ಫ್ಲಾಟ್‍ಗಳನ್ನು ಅಕ್ರಮವಾಗಿ ಖರೀದಿಸಿದ ಆರೋಪದ ಮೇಲೆ ನವಾಜ್ ಅವರಿಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಸಂಜೆ ನವಾಜ್, ಪುತ್ರಿ ಬಂಧನ ಸಾಧ್ಯತೆ :
ಪಾಕಿಸ್ತಾನದ ಉಚ್ಛಾಟಿತ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಪುತ್ರಿ ಮರಿಯಮ್ ನವಾಜ್ ಷರೀಫ್ ಅವರನ್ನು ಯುಎಇಯ ಅಬುಧಾಬಿ ವಿಮಾನನಿಲ್ದಾಣದಲ್ಲಿ ಇಂದು ಸಂಜೆ ಬಂಧಿಸುವ ಸಾಧ್ಯತೆ ಇದೆ. ಇವರಿಬ್ಬರನ್ನು ಬಂಧಿಸಿ ನಂತರ ಲಾಹೋರ್‍ಗೆ ಕರೆದೊಯ್ಯಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.

Facebook Comments

Sri Raghav

Admin