ಮಣಿಪುರದಲ್ಲಿ ಬಿಜೆಪಿಗೆ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಇಂಫಾಲ, ಮೇ 19- ಈಶಾನ್ಯ ರಾಜ್ಯ ಮಣಿಪುರದಲ್ಲಿ ಬಿಜೆಪಗೆ ಭಾರಿ ಹಿನ್ನಡೆಯಾಗಿದೆ. ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಿಂದ ಹೊರ ಬರಲು ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್) ನಿರ್ಧರಿಸಿದೆ.

ಈ ಸಂಬಂಧ ನಡೆದ ಪಕ್ಷದ ಶಾಸಕರ ಹಾಗೂ ನಾಯಕರ ಸಭೆಯಲ್ಲಿ ಬಿಜೆಪಿಗೆ ನೀಡಿದ ಬೆಂಬಲವನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಂಡಿದೆ ಎಂದು ಎಸ್‍ಪಿಎಫ್ ನಾಯಕ ಟಿಆರ್ ಝೆಲಿಯಾಂಗ್ ಅವರು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ತನ್ನ ಆಲೋಚನೆ, ಸಲಹೆ, ಸೂಚನೆಗಳಿಗೆ ಕವಡೆ ಕಿಮ್ಮತ್ತು ಕೊಡುತ್ತಿಲ್ಲ ಎಂದು ಎನ್‍ಪಿಎಫ್ ಆರೋಪಿಸಿದೆ. ಆದರೆ ಎನ್‍ಪಿಎಫ್‍ನ ಈ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಮೈತ್ರಿ ಸರಕಾರ ಸಾಂಗವಾಗಿ ನಡೆಯಲು ತಾನು ಮಿತ್ರ ಪಕ್ಷ ಎನ್‍ಪಿಎಫ್‍ಗೆ ಎಲ್ಲ ರೀತಿಯ ಸಹಕಾರ, ಸೌಕರ್ಯಗಳನ್ನು ನೀಡಿದ್ದೇನೆ ಎಂದು ಹೇಳಿದೆ.

60 ಸದಸ್ಯ ಬಲದ ಮಣಿಪುರ ವಿಧಾಸಭೈಯಲ್ಲಿ ಎನ್‍ಪಿಎಫ್‍ನಾಲ್ವರು ಶಾಸಕರನ್ನು ಹೊಂದಿದೆ. ಈ ಬೆಂಬಲ ಹಿಂಪಡೆದರೂ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಮುಂದಿನ ಬೆಳವಣಿಗೆಗಳನ್ನು ಕಾದು ನೋಡುವ ತಂತ್ರ ಅನುಸರಿಸಿವೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin