ಬಿಷಪ್‍ಕಾಟನ್ ಬಾಕಿ ಉಳಿಸಿಕೊಂಡಿರುವ ಕೋಟ್ಯಂತರ ರೂ. ಆಸ್ತಿ ತೆರಿಗೆ ವಸೂಲಿಗೆ ಎನ್.ಆರ್. ರಮೇಶ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.29- ಕೋಟ್ಯಂತರ ರೂ. ಆಸ್ತಿ ತೆರಿಗೆ ವಂಚಿಸಿರುವ ನಗರದ ಪ್ರತಿಷ್ಠಿತ ಬಿಷಪ್‍ಕಾಟನ್ ಕಾಲೇಜಿನಿಂದ ಬಾಕಿ ಇರುವ ತೆರಿಗೆ ವಸೂಲಿ ಮಾಡಬೇಕು ಹಾಗೂ ತೆರಿಗೆ ವಸೂಲಿ ಮಾಡಲು ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಅವರು ಬಿಬಿಎಂಪಿ ಆಡಳಿತಾಧಿಕಾರಿ, ಆಯುಕ್ತರಿಗೆ ದೂರು ನೀಡಿದ್ದಾರೆ.

ಆಡಳಿತಾಧಿಕಾರಿ ಗೌರವ್ ಗುಪ್ತ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನು ಇಂದು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ಎನ್.ಆರ್.ರಮೇಶ್ ಅವರು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಿಬಿಎಂಪಿ ಕೇಂದ್ರ ಕಚೇರಿಗೆ ಹೊಂದಿ ಕೊಂಡಂತಿರುವ ಬಿಷಪ್ ಕಾಟನ್ ಪದವಿ ಮತ್ತು ಕಾನೂನು ಕಾಲೇಜಿನವರು ಕಳೆದ 12 ವರ್ಷ ಗಳಿಂದ ಬಿಬಿಎಂಪಿಗೆ ಪಾವತಿಸ ಬೇಕಾದ ಆಸ್ತಿ ತೆರಿಗೆಯನ್ನು ಪಾವತಿಸದೆ ವಂಚಿಸಿದ್ದಾರೆ.

ಪೆÇೀಷಕರಿಂದ ಲಕ್ಷಾಂತರ ರೂ. ದೇಣಿಗೆ ಸಂಗ್ರಹಿಸುವ ಬಿಷಪ್‍ಕಾಟನ್ ಶಿಕ್ಷಣ ಸಂಸ್ಥೆಯವರು 2008 ರಿಂದ 2017ರ ವರೆಗೆ ಕೇವಲ ಶೇ.25ರಷ್ಟು ಸೇವಾ ತೆರಿಗೆ ಪಾವತಿಸಿ ವಂಚಿಸಿದ್ದಾರೆ ಎಂದು ರಮೇಶ್ ಆರೋಪಿಸಿದರು. ಎ ಜೋನ್‍ನಲ್ಲಿರುವ ಬಿಷಪ್‍ಕಾಟನ್ ಸಂಸ್ಥೆಯವರು 96 ಸಾವಿರ ಚದರ ಅಡಿಗಳಷ್ಟು ವಿಸ್ತೀರ್ಣದ ವಾಣಿಜ್ಯ ಕಟ್ಟಡಕ್ಕೆ ಪ್ರತಿ ವರ್ಷ ಚದರ ಅಡಿಗೆ 12.50ರೂ.ಗಳಂತೆ 31,29,060ರೂ.ಗಳಷ್ಟು ಆಸ್ತಿ ತೆರಿಗೆ ಪಾವತಿಸಬೇಕಿದೆ. ಆದರೆ, ಇದುವರೆಗೂ ಸೇವಾ ತೆರಿಗೆಯನ್ನೇ ಪಾವತಿಸಿಕೊಂಡು ಬಂದಿರುವ ಆಡಳಿತ ಮಂಡಳಿಯವರು 2017-18ರಿಂದ ಇಲ್ಲಿಯವರೆಗೆ 1,25,16,240 ರೂ.ಗಳನ್ನು ಪಾವತಿಸಬೇಕಿದೆ.

ಸರ್ಕಾರಿ ಅನುದಾನಿತ ಶಾಲಾ- ಕಾಲೇಜುಗಳಿಗೆ ಆಸ್ತಿ ತೆರಿಗೆ ರಿಯಾಯಿತಿ ನೀಡದ ಬಿಬಿಎಂಪಿ ವಾರ್ಷಿಕ ಲಕ್ಷಾಂತರ ರೂ. ಶುಲ್ಕ ವಸೂಲಿ ಮಾಡುವ ಬಿಷಪ್ ಕಾಟನ್ ಶಿಕ್ಷಣ ಸಂಸ್ಥೆಗೆ ಆಸ್ತಿ ತೆರಿಗೆ ರಿಯಾಯಿತಿ ನೀಡುವುದು ಸರಿಯಲ್ಲ. ಹೀಗಾಗಿ ಬಿಷಪ್ ಕಾಟನ್ ಸಂಸ್ಥೆಯವರಿಂದ ಬಾಕಿ ಇರುವ ಕೋಟ್ಯಂತರ ರೂ. ಆಸ್ತಿ ತೆರಿಗೆ ಸಂಗ್ರಹಿಸಬೇಕು. ಇಲ್ಲದಿದ್ದರೆ ನಗರದಲ್ಲಿರುವ ಇನ್ನಿತರ ಖಾಸಗಿ ಶಿಕ್ಷಣ ಸಂಸ್ಥೆಗಳು ತೆರಿಗೆ ವಿನಾಯಿತಿ ನೀಡುವಂತೆ ನ್ಯಾಯಲಯದ ಮೊರೆ ಹೋಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಯಾವುದೇ ಮುಲಾಜಿ ಗೊಳಗಾಗದೆ ಕೋಟ್ಯಂತರ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬಿಷಪ್‍ಕಾಟನ್ ಸಂಸ್ಥೆ ವತಿಯಿಂದ ಎಲ್ಲ ಆಸ್ತಿ ತೆರಿಗೆ ವಸೂಲಿ ಮಾಡಬೇಕು ಎಂದು ಅವರು ಆಡಳಿತಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆಸ್ತಿ ತೆರಿಗೆ ವಸೂಲಿಗೆ ಡಿಮ್ಯಾಂಡ್ ನೋಟಿಸ್ ನೀಡದೆ ಕರ್ತವ್ಯಲೋಪ ಎಸಗಿರುವ ಕೆಂಪೇಗೌಡ ನಗರ ಉಪವಿಭಾಗದ ಕಂದಾಯ ಅಧಿಕಾರಿಗಳು, ಚಿಕ್ಕಪೇಟೆ ವಿಭಾಗದ ಕಂದಾಯ ಅಧಿಕಾರಿಗಳು ಮತ್ತು ಕಂದಾಯ ಪರಿವೀಕ್ಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.

Facebook Comments