ಕಾಂಗ್ರೆಸ್ ವಿರುದ್ಧ ಎನ್.ಆರ್.ರಮೇಶ್ ಟೀಕಾಪ್ರಹಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.21- ರೈತರ ಪರವಾದ ಹಲವಾರು ಕ್ರಾಂತಿಕಾರಿ ಅಂಶಗಳನ್ನೊಳಗೊಂಡಿದ್ದ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಾಪಸ್ ಪಡೆದಿರುವುದಕ್ಕೆ ನಕಲಿ ರೈತ ಹೋರಾಟಗಾರರು ಮತ್ತು ದೇಶದ ಒಳಿತನ್ನು ಎಂದೂ ಬಯಸದ ಕಾಂಗ್ರೆಸ್ಸಿಗರು ವಿಜಯ ದಿವಸವನ್ನಾಗಿ ಆಚರಿಸುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ತಮಗಿಷ್ಟ ಬಂದ ಹಾಗೆ ಅಥವಾ ಹೆಚ್ಚು ಬೆಲೆ ಯಾರು ನೀಡುತ್ತಾರೋ ಅವರಿಗೆ ಮಾರಾಟ ಮಾಡುವ ನೇರ ಮಾರಾಟಕ್ಕೆ ಒತ್ತು ಕೊಟ್ಟಿದ್ದ ಕೃಷಿ ಕಾಯ್ದೆ ವಿರೋಧಿಸಿ, ಕೇವಲ ಎರಡು ರಾಜ್ಯಗಳ ರೈತರ ಪರ ಹೋರಾಟಗಾರರೆಂದು ಬಿಂಬಿಸಿಕೊಳ್ಳುತ್ತಿರುವ ನಾಯಕರು ಕೇವಲ ಎರಡು ರಾಜ್ಯಗಳಿಗಷ್ಟೇ ಸೀಮಿತಗೊಳಿಸಿ, ಹೋರಾಟ ನಡೆಸಿದ್ದಾರೆ ಎಂದರು.

ದೇಶದ ಎರಡು ರಾಜ್ಯಗಳನ್ನು ಹೊರತುಪಡಿಸಿ, ಇನ್ನಾವುದೇ ಭಾಗಗಳಲ್ಲಿ ನೂತನ ಕೃಷಿ ಕಾಯ್ದೆ ವಿರುದ್ಧ ಹೋರಾಟಗಳು ನಡೆಯದಿದ್ದರೂ ಕಾಂಗ್ರೆಸ್ ಕೃಪಾಪೆÇೀಷಿತ ನಕಲಿ ರೈತ ಹೋರಾಟಗಾರರು ಮತ್ತು ದಲ್ಲಾಳಿಗಳು ನಡೆಸುತ್ತಿದ್ದ ಅರ್ಥವಿಲ್ಲದ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಕಾಂಗ್ರೆಸ್ಸಿ ಗರು ಭಾವಿಸಿರುವುದು ಅವರ ತಿಳಿಗೇಡಿತನಕ್ಕೆ ಹಿಡಿದ ಕೈಗನ್ನಡಿ ಯಾಗಿದೆ.

1980ರಲ್ಲಿ ಅಂದಿನ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ರೈತ ವಿರೋ ಕಾಯ್ದೆಯಾಗಿದ್ದ ಆಛಿಠಿಠಿಛ್ಟಿಞಛ್ಞಿಠಿ ಔಛಿqqs ಅ್ಚಠಿ, 1980ನ್ನು ಜಾರಿಗೆ ತಂದು, ಪ್ರತಿಯೊಬ್ಬ ರೈತರು ಪ್ರತಿಯೊಂದು ಎಕರೆಗೆ 1500 ರೂ.ಗಳಷ್ಟು ಹಣವನ್ನು ಔಛಿqqs ಶುಲ್ಕವನ್ನಾಗಿ ಸರ್ಕಾರಕ್ಕೆ ಕಡ್ಡಾಯವಾಗಿ ಪಾವತಿಸಬೇಕೆಂಬ ನಿಯಮ ಜಾರಿಗೆ ತಂದ ಸಂದರ್ಭದಲ್ಲಿ ಅದರ ವಿರುದ್ಧ ರಾಜ್ಯಾದ್ಯಂತ ನಡೆದ ನಿಜವಾದ ರೈತರ ಹೋರಾಟದಿಂದ ಕಂಗೆಟ್ಟಿದ್ದ ಅಂದಿನ ಕಾಂಗ್ರೆಸ್ ಸರ್ಕಾರ ನರಗುಂದ ಮತ್ತು ನವಲಗುಂದ ತಾಲ್ಲೂಕುಗಳಲ್ಲಿ ನಡೆಸಿದ ರೈತ ವಿರೋ ಗೋಲಿಬಾರ್‍ನಿಂದಾಗಿ ಹಲವು ರೈತರು ಮೃತಪಟ್ಟಿದ್ದನ್ನು ಕಾಂಗ್ರೆಸ್ ಪಕ್ಷ ಮರೆತಂತಿದೆ.

ಹಾಗೆಯೇ 2001ರಲ್ಲಿ ನಡೆಯುತ್ತಿದ್ದ ನೀರಾ ಚಳುವಳಿಯನ್ನು ಹತ್ತಿಕ್ಕುವ ಸಲುವಾಗಿ ಅಂದಿನ ಕಾಂಗ್ರೆಸ್ ಸರ್ಕಾರ ಚನ್ನಪಟ್ಟಣ ಸಮೀಪದ ವಿಠಲೇನಹಳ್ಳಿಯಲ್ಲಿ ನಡೆಸಿದ ಗೋಲಿಬಾರ್‍ನಿಂದಾಗಿ ಅಮಾಯಕ ರೈತರು ಮೃತಪಟ್ಟಿದ್ದನ್ನೂ ಸಹ ಕಾಂಗ್ರೆಸ್ ಪಕ್ಷವು ಮರೆತಂತಿದೆ.
ರಾಜ್ಯದಲ್ಲಿ ನಡೆದಿ ರುವ ಈ ಎರಡೂ ಪ್ರಕರಣಗಳು ಕಾಂಗ್ರೆಸ್ ಪಕ್ಷದ ರೈತ ವಿರೋ ನಿಲುವುಗಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂಬುದಂತೂ ಅಕ್ಷರಶಃ ಸತ್ಯ.

ಆದರೆ, ಹಲವು ರೈತ ಪರವಾದ ಅತ್ಯುತ್ತಮ ಅಂಶಗಳನ್ನೊಳಗೊಂಡಿದ್ದ ಕೃಷಿ ಕಾಯ್ದೆ ವಿರುದ್ಧ ಕೇವಲ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ರಾಕೇಶ್ ಸಿಂಗ್ ಟಿಕಾಯತ್‍ರಂತಹವರನ್ನು ಪ್ರಚೋದನೆಗೊಳಿಸಿ, ಎಲ್ಲ ರೀತಿಯ ಸಂಪನ್ಮೂಲಗಳನ್ನು ಕಾಂಗ್ರೆಸ್ ಪಕ್ಷವು ಆ ಹೋರಾಟಕ್ಕೆ ಒದಗಿಸಿರುವುದು ಈಗಾಗಲೇ ದಾಖಲೆಗಳಿಂದ ಬಹಿರಂಗವಾಗಿರುತ್ತದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೂತನ ಕೃಷಿ ಕಾಯ್ದೆ-2020 ಅನ್ನು ವಾಪಸ್ ಪಡೆದಿರುವುದು ದೇಶದ ಒಳಿತಿಗಾಗಿಯೇ ಹೊರತು, ಈ ನಕಲಿ ಹೋರಾಟಗಾರರ ಗೊಡ್ಡು ಬೆದರಿಕೆಗಲ್ಲ ಎಂಬ ವಿಷಯವೂ ಸಹ ಅಕ್ಷರಶಃ ಸತ್ಯವಾಗಿರುತ್ತದೆ.

ದೇಶದ ರಕ್ಷಣೆಗೆ ಸದಾ ಒಂದಿಲ್ಲಾ¯್ಲÉೂಂದು ಆತಂಕ ತಂದೊಡ್ಡುತ್ತಿರುವ ಪಾಕಿಸ್ತಾನ, ಚೀನಾ, ಬಾಂಗ್ಲಾ ದೇಶಗಳು ಮತ್ತು ಹೊಸದಾಗಿ ಆಡಳಿತಕ್ಕೆ ಬಂದಿರುವ ತಾಲೀಬಾನಿಗಳು ನಡೆಸುತ್ತಿರುವ ಆತಂಕಕಾರಿ, ವಿಚ್ಛಿದ್ರಕಾರಿ ಕಾರ್ಯಗಳಿಂದ ದೇಶವನ್ನು ರಕ್ಷಿಸಲು ಹೆಚ್ಚು ಗಮನ ಕೊಡಬೇಕಾಗಿರುವ ಹಿನ್ನೆಲೆಯಲ್ಲಿ ಮತ್ತು ಕಳೆದೊಂದು ವರ್ಷದಿಂದ ನವ ದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕೃಪಾಪೆÇೀಷಿತ ಹೋರಾಟದಲ್ಲಿ ಭಾಗವಹಿಸಿರುವ ಜನರಿಗೆ ರಕ್ಷಣೆ ಒದಗಿಸುವ ಭದ್ರತಾ ಸಿಬ್ಬಂದಿಗಳಿಗೆ ಕಾರ್ಯದ ಒತ್ತಡ ಕಡಿಮೆ ಮಾಡುವ ಸಲುವಾಗಿ ನೂತನ ಕೃಷಿ ಕಾಯ್ದೆ ವಾಪಸ್ ಪಡೆದಿದ್ದಾರೆಯೇ ವಿನಃ ನಕಲಿ ರೈತ ಹೋರಾಟಗಾರರ ಬೆದರಿಕೆಗಳಿಗೆ ಮಣಿದಾಗಲಿ ಅಥವಾ ರೈತ ವಿರೋ ಕಾಂಗ್ರೆಸಿಗರ ಹೋರಾಟಗಳಿಗಾಗಲಿ ಅಲ್ಲ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ರೈತರಿಗೆ ನೂತನ ಕೃಷಿ ಕಾಯ್ದೆ-2020ರಲ್ಲಿದ್ದ ತಮ್ಮ ಪರವಾದ ಅಂಶಗಳ ಬಗ್ಗೆ ಮತ್ತು ಅದರ ಜಾರಿಯಿಂದ ತಮಗೆ ದೊರಕುತ್ತಿದ್ದ ಲಾಭಾಂಶಗಳ ಬಗ್ಗೆ ಸ್ಪಷ್ಟವಾದ ಅರಿವು ರೈತರಿಗೆ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Facebook Comments