ಸತ್ತವರ ಮೋಕ್ಷಕ್ಕೂ ಅಡ್ಡಿಯಾದ ಎನ್‌ಆರ್‌ಸಿ..!

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹಟಿ,ಅ.17- ಎರಡು ವರ್ಷಗಳ ಹಿಂದೆ ವಿದೇಶಿ ಎಂದು ಘೋಷಿಸಲ್ಪಟ್ಟ ಮಾನಸಿಕ ಅಸ್ವಸ್ಥರೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಭಾರತೀಯ ಎಂದು ಘೋಷಿಸದೆ ಮೃತದೇಹವನ್ನು ಪಡೆಯುವುದಿಲ್ಲ ಎಂದು ಅವರ ಕುಟುಂಬ ಪಟ್ಟು ಹಿಡಿದಿರುವ ಪ್ರಸಂಗ ನಡೆದಿದೆ.

ದುಲಾಲ್ ಪೌಲ್(65) ಅವರು ಅನಾರೋಗ್ಯದಿಂದಾಗಿ ಗುವಾಹಟಿಯ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಆರೋಗ್ಯದ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಸೆ.28ರಂದು ಗುವಾಹಟಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ದುಲಾಲ್ ಪೌಲ್ ಮೃಪಪಟ್ಟಿದ್ದು, ಕಳೆಬರವನ್ನು ಸ್ವೀಕರಿಸಲು ಕುಟುಂಬ ನಿರಾಕರಿಸಿದೆ.

ಬಾಂಗ್ಲಾದೇಶಿ ದೇಹವನ್ನು ಹೇಗೆ ಸ್ವೀಕರಿಸುವುದು ಎಂದು ಆ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.  ನಾವು ದೇಹವನ್ನು ಬಾಂಗ್ಲಾದೇಶದ ವ್ಯಕ್ತಿಯಾಗಿ ಸ್ವೀಕರಿಸುವುದಿಲ್ಲ. ವಿದೇಶಿಯರು ಎಂಬ ಹಣೆಪಟ್ಟಿಯನ್ನು ತೆಗೆದುಹಾಕಿ ಭಾರತೀಯ ಪ್ರಜೆಯಾಗಿ ಘೋಷಿಸಲು ಕ್ರಮ ಕೈಗೊಳ್ಳಬೇಕೆಂದು ಮೃತನ ಮಗ ಅಶೋಕ್ ಪಾಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

1965ರಿಂದ ತಮ್ಮ ಬಳಿ ಭೂ ದಾಖಲೆಗಳಿವೆ. ಇದರ ಹೊರತಾಗಿಯೂ, ಅಕ್ರಮ ವಿದೇಶಿ ಎಂದು ಘೋಷಿಸಿ ನಮ್ಮ ತಂದೆಯವರನ್ನು ಬಂಧನದಲ್ಲಿಡಲಾಯಿತು. ಈಗ ವಿದೇಶಿ ದೇಹವನ್ನು ನಾವು ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.  ಸಾವಿನ ಪರಿಸ್ಥಿತಿಗಳು ಯಾವುವು ಎಂದು ಪರಿಶೀಲಿಸಲು ನಾವು ವಿಚಾರಣೆ ನಡೆಸುತ್ತೇವೆ.

ಅವರನ್ನು ಬಂಧನ ಶಿಬಿರದಲ್ಲಿ ದಾಖಲಿಸಿದರೆ ಪರಿಸ್ಥಿತಿ ಏನು.? ಅವರು ಹೊಂದಿರುವ 1965ರ ದಾಖಲೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಸಂಬಂಧ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲಾಗುವುದು ಎಂದು ಸೋನಿತ್‍ಪುರ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಕುಲೆನ್ ಶರ್ಮಾ ಭರವಸೆ ನೀಡಿದ್ದಾರೆ.

ಆಗಸ್ಟ್ 31 ರಂದು ಪ್ರಕಟವಾದ ಅಸ್ಸಾಂ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್‌ಆರ್‌ಸಿ)ಯ ಅಂತಿಮ ಪಟ್ಟಿಯಲ್ಲಿ, ಕುಟುಂಬದ ಇತರ ಎಲ್ಲ ಸದಸ್ಯರು ತಮ್ಮ ಹೆಸರುಗಳನ್ನು ಸೇರಿಸಿದ್ದಾರೆ. ಅಂತಿಮ ಪಟ್ಟಿಯಿಂದ 19 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಹೊರಗಿಡಲಾಗಿದೆ. ಅವರಲ್ಲಿ ದುಲಾಲ್ ಪಾಲ್ ಕೂಡ ಇದ್ದರು.

ಅಸ್ಸಾಂನ ವಿದೇಶಿಯರ ನ್ಯಾಯಮಂಡಳಿಗಳು ಅಕ್ರಮ ವಿದೇಶಿಯರು ಎಂದು ಘೋಷಿಸಲ್ಪಟ್ಟ ಮತ್ತು ಬಂಧೀ ಕೇಂದ್ರಗಳಲ್ಲಿ ದಾಖಲಾದ ಇಪ್ಪತ್ತೇಳು ಜನರು ಕಳೆದ ಮೂರು ವರ್ಷಗಳಲ್ಲಿ ಸಾವನ್ನಪ್ಪಿದ್ದಾರೆ. ಅಸ್ಸಾಂನಲ್ಲಿ ಈಗ ಆರು ಬಂಧನ ಕೇಂದ್ರಗಳಿವೆ ಮತ್ತು ಗೋಲ್ಪಾರ ಜಿಲ್ಲೆಯ ಮಾಟಿಯಾದಲ್ಲಿ ಏಳನೇ ಬಂಧೀ ಕೇಂದ್ರ ನಿರ್ಮಾಣ ಹಂತದಲ್ಲಿದೆ.

Facebook Comments