ಫ್ರೇಜರ್ ಟೌನ್‍ನಲ್ಲಿ 25 ಕೋಟಿ ಮೌಲ್ಯದ ಆಸ್ತಿ ಗುಳುಂಗೆ ಸಂಚು, ಬಿಎಂಟಿಎಫ್‍ಗೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.15- ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಫ್ರೇಜರ್‍ಟೌನ್ ವಾರ್ಡ್‍ನಲ್ಲಿ ಸುಮಾರು 25 ಕೋಟಿ ಮೌಲ್ಯವಿರುವ ಪಾಲಿಕೆಯ ಸ್ವತ್ತನ್ನು ಸದ್ದಿಲ್ಲದೆ ಕಬಳಿಸುವ ಸಂಚು ನಡೆದಿದ್ದು, ಈ ಸಂಬಂಧ ತನಿಖೆ ನಡೆಸಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಪಾಲಿಕೆ ಆಯುಕ್ತರಿಗೆ ಹಾಗೂ ಬಿಎಂಟಿಎಫ್ ಪೊಲೀಸರಿಗೆ ದಾಖಲೆಗಳ ಸಮೇತ ದೂರು ನೀಡಿದ್ದಾರೆ.

ವಾರ್ಡ್ ಸಂಖ್ಯೆ 78ರ ಫ್ರೇಜರ್‍ಟೌನ್ ರಸ್ತೆಯಲ್ಲಿರುವ 8್ಡ080 ಅಳತೆಯ ಸುಮಾರು 25 ಕೋಟಿ ಮೌಲ್ಯವಿರುವ ಪಾಲಿಕೆಯ ಸ್ವತ್ತನ್ನು ಮಾಜಿ ಶಾಸಕ ಹಮೀದ್ ಷಾ ಅವರ ಪತ್ನಿ ಫಮೀದಾ ಬೇಗಂ ಅವರಿಗೆ ಹಸುಗಳ ಸಾಗಾಣಿಕೆಗೆಂದು 50 ವರ್ಷಗಳ ಅವಯ ಗುತ್ತಿಗೆಗೆ ವರ್ಷಕ್ಕೆ 600ರೂ.ಗಳಂತೆ ನೀಡಲಾಗಿದ್ದು, ಪ್ರಸ್ತುತ ಈ ಆಸ್ತಿಯನ್ನು ಕಬಳಿಸುವ ಸಂಚು ನಡೆದಿದೆ ಎಂದು ಎನ್.ಆರ್.ರಮೇಶ್ ಪತ್ರಿಕಾಗೋಷ್ಠಿಯಲ್ಲಿಂದು ವಿವರ ನೀಡಿದರು.

1975ರಲ್ಲಿ ಶಾಸಕರಾಗಿದ್ದ ಹಮೀದ್ ಷಾ ಅವರ ಮನವಿ ಮೇರೆಗೆ ಹಸುಗಳ ಸಾಗಾಣಿಕೆಗೆಂದು ಅವರ ಪತ್ನಿ ಫಮೀದಾ ಬೇಗಂ ಅವರಿಗೆ ಗುತ್ತಿಗೆ ಪತ್ರ ಮಾಡಿಕೊಡಲಾಗಿತ್ತು. ಈ ಸ್ವತ್ತನ್ನು ಉದ್ದೇಶಿತ ಬಳಕೆಗೆ ಮಾತ್ರವೇ ಬಳಸಬೇಕು ಮತ್ತು ಯಾವುದೇ ಉದ್ದೇಶಗಳಿಗೆ ಬಳಸಬಾರದು ಎಂದು ಸ್ಪಷ್ಟವಾದ ಶರತ್ತು ವಿಸಲಾಗಿತ್ತು.

ಆದರೆ, ಈ ಜಾಗದಲ್ಲಿ ಬೇಗಂ ಅವರ ಹೆಸರಿನಲ್ಲಿ ಬಿಬಿಎಂಪಿ ಸ್ವತ್ತಿನಲ್ಲಿ ವಸತಿ ಕಟ್ಟಡಗಳು, ಐಸ್ ಫ್ಯಾಕ್ಟರಿ, ಗ್ಯಾರೇಜ್ ಮೊದಲಾದ ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ. ಶರತ್ತುಗಳನ್ನು ರಾಜಾರೋಷವಾಗಿ ಉಲ್ಲಂಘಿಸಿರುವ ಈ ಸ್ವತ್ತನ್ನು ಬಿಬಿಎಂಪಿ ತನ್ನ ವಶಕ್ಕೆ ಪಡೆದುಕೊಳ್ಳಬಹುದಾಗಿದೆ.

ಅಲ್ಲದೆ, ಕೇವಲ ನಾಲ್ಕು ವರ್ಷಗಳಲ್ಲಿ ಗುತ್ತಿಗೆ ಅವ ಮುಗಿದು ಹೋಗುತ್ತಿರುವ ಈ ಸ್ವತ್ತಿನ ಗುತ್ತಿಗೆ ಅವಯನ್ನು ಮುಂದಿನ 35 ವರ್ಷಗಳಿಗೆ ವಿಸ್ತರಿಸಬೇಕೆಂದು ಫಮೀದಾ ಬೇಗಂ ಅವರು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂತ ಕಡತವು 16 ತಿಂಗಳಿನಿಂದ ಆಸ್ತಿಗಳ ವಿಭಾಗದ ವಿಶೇಷ ಆಯುಕ್ತರ ಕಚೇರಿಯಲ್ಲಿ ಕೊಳೆಯುತ್ತಿದೆ. ಪ್ರಸ್ತುತ 20 ಕೋಟಿ ರೂ.ಗೂ ಹೆಚ್ಚು ಮೌಲ್ಯವಿರುವ ಈ ಆಸ್ತಿಯನ್ನು ಶಾಶ್ವತವಾಗಿ ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಫಮೀದಾ ಬೇಗಂ ಅವರು ಪ್ರಯತ್ನಿಸುತ್ತಿದ್ದಾರೆ.

ಎಲ್ಲ ಶರತ್ತುಗಳನ್ನು ಉಲ್ಲಂಘಿಸುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದರು. ಕಾನೂನು ಬಾಹಿರವಾಗಿ ನಿರ್ಮಾಣವಾಗಿರುವ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ಕಂದಾಯ ಮೊತ್ತವನ್ನು ನಿಗದಿಪಡಿಸಿರುವ ಪುಲಿಕೇಶಿನಗರ ಉಪವಿಭಾಗದ ಕಂದಾಯ ಅಕಾರಿಗಳ ವಿರುದ್ಧ ಹಾಗೂ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟ ಎಂಜಿನಿಯರ್‍ಗಳ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಮೇಶ್ ಮನವಿ ಮಾಡಿದ್ದಾರೆ.

Facebook Comments

Sri Raghav

Admin