ಸೂರ್ಯ ಚಂದ್ರ ಇರುವವರಿಗೆ ಪಿಎಸ್‌ಎಸ್‌ಕೆ ಇರಬೇಕು : ಮುರುಗೇಶ್ ನಿರಾಣಿ

ಈ ಸುದ್ದಿಯನ್ನು ಶೇರ್ ಮಾಡಿ

ಪಾಂಡವಪುರ,ಜು‌.12ವಿದ್ಯುತ್ ಉತ್ಪಾದನೆ ,ಡಿಸ್ಟಿಲರಿ ಆರಂಭ ಸೇರಿದಂತೆ ಎಲ್ಲಾ ಉಪ ಉತ್ಪನ್ನಗಳ ತಯಾರಿಸಿ ಕಬ್ಬು ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ಹೆಚ್ಚಿನ ಹಣಪಾವತಿಸುವುದು ತಮ್ಮ ಸಂಕಲ್ಪ ಮಾಜಿ ಸಚಿವ ಮುರುಗೇಶ್ ನಿರಾಣಿ ಭರವಸೆ ನೀಡಿದರು.

ಪಿಎಸ್ ಎಸ್ ಕೆ ಯಲ್ಲಿ ಕಾರ್ಮಿಕರು ಹಾಗೂ ರೈತ ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಕಾರ್ಖಾನೆಯಲ್ಲಿ ಕಸ ಗುಡಿಸುವವರಿಂದ ಹಿಡಿದು ಮುಖ್ಯ ತಂತ್ರಜ್ಞರು ಸೇರಿದಂತೆ ಎಲ್ಲರೂ ಒಂದೇ ಕುಟುಂಬದವರಂತೆ ,ನಾಟಕದಲ್ಲಿ ಬರುವಂತೆ ಎಲ್ಲರದೂ ಒಂದೊಂದು ಪಾತ್ರ .ನಾನು ಹೆಚ್ಚು ನೀನು ಕಡಿಮೆ ಎಂಬ ಭೇದ ಭಾವವಿಲ್ಲ .ಎಲ್ಲರೂ ಬದ್ದತೆಯಿಂದ ಕೆಲಸ ಮಾಡಿ ಸೂರ್ಯ ಚಂದ್ರರು ಇರುವ ತನಕ ಕಾರ್ಖಾನೆ ನಡೆಸಬೇಕು ಎಂದರು.

ರಾಜ್ಯದಲ್ಲಿ ಬೇರೆ ಬೇರೆ ಸಕ್ಕರೆ ಕಾರ್ಖಾನೆಗಳು ಏಕೆ ಬಂದ್ ಆದವು ಎಂಬುದರ ಬಗ್ಗೆ ನಾನು ಕಾರಣಗಳನ್ನು ಹೇಳುವುದಿಲ್ಲ . ಇದನ್ನು ಅರಿತು ನೀವು ಬದ್ಧತೆಯಿಂದ ಶ್ರಮವಹಿಸಿ ಕೆಲಸ ಮಾಡಬೇಕು.

ವಿದ್ಯುತ್ ಉತ್ಪಾದನೆ ,ಡಿಸ್ಟಿಲರಿ ಆರಂಭ ಸೇರಿದಂತೆ ಕಬ್ಬಿನ ಎಲ್ಲಾ ಉಪ ಉತ್ಪನ್ನಗಳನ್ನು ತಯಾರಿಸಿ ರೈತರಿಗೆ ಹೆಚ್ಚು ಬಟವಾಡೆ ನೀಡಬೇಕು ಹಾಗೂ ಕಾರ್ಮಿಕರಿಗೆ ಹೆಚ್ಚು ಸಂಬಳ ನೀಡಬೇಕು ಎಂಬುದು ನನ್ನ ಧ್ಯೇಯ ಈ ಗುರಿಯೊಂದಿಗೆ ನಾವು ಮುನ್ನಡೆಯಬೇಕು ಎಂದು ನಿರಾಣಿ ಹೇಳಿದರು.

ಹೀಗಾಗಿ ಕಾರ್ಖಾನೆ ಸಾಮರ್ಥ್ಯವನ್ನು 3500 ರಿಂದ 5 ಸಾವಿರಕ್ಕೆ ಏರಿಸಲು ಎಂಟೇ ದಿನದಲ್ಲಿ ನಾನು ನಿರ್ಧಾರ ಕೈಗೊಂಡೆ . ನಾನು ಶಾಸಕನಾಗಿ ಸಕ್ಕರೆ ಕಾರ್ಖಾನೆ ಮಾಲೀಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

ಈ ನಿಟ್ಟಿನಲ್ಲಿ ನಾನು ಹೊಸದೊಂದು ಸಕ್ಕರೆ ಕಾರ್ಖಾನೆ ಆರಂಭಿಸಿದರೆ ಅದರಲ್ಲಿ ವಿಶೇಷವೇನೂ ಇಲ್ಲ ಎಂದು ಹಲವು ಮಂದಿ ಹೇಳುತ್ತಾರೆ. ನಾನು ಬಾಗಲಕೋಟೆ ಬಿಜಾಪುರ ಅಥವಾ ಉತ್ತರ ಕರ್ನಾಟಕ ದಲ್ಲಿ ಇನ್ನೊಂದು ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಿದ್ದರೆ, ಅಷ್ಟೇನೂ ವಿಶೇಷತೆ ಇರುತ್ತಿರಲಿಲ್ಲ ಹಾಗೂ ನನಗೆ ಹೆಸರು ಬರುತ್ತಿರಲಿಲ್ಲ ಎಂದು ಹೇಳಿದರು.

ನಾನು ಮಂಡ್ಯ ಭಾಗದಲ್ಲಿ ಹೊಸ ಕಾರ್ಖಾನೆ ಪಡೆದಿರುವುದು ಸವಾಲಾಗಿದೆ‌. ನಾನು ನಮ್ಮ ಭಾಗದಲ್ಲಿ 10 ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಿ ದ್ದರೂ ಸಹ ಪಾಂಡವಪುರದಲ್ಲಿ ಸಕ್ಕರೆ ಕಾರ್ಖಾನೆ ಪಡೆದಿರುವಷ್ಟು ಹೆಸರು ಬರುತ್ತಿರಲಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಮಿತ್ರರು ಹಾಗೂ ಮುಖ್ಯಮಂತ್ರಿಗಳು ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಕಾಯ್ದೆ ಕಾನೂನು ಜೋರು. ಹೀಗಾಗಿ ಬಹಳ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಹಲವರು ನನಗೆ ಕಿವಿಮಾತು ಹೇಳಿದ್ದಾರೆ. ನಾನು ಇಲ್ಲಿಗೆ ನಾಲ್ಕೈದು ಬಾರಿ ಭೇಟಿ ನೀಡಿದ್ದೇನೆ. ಇಲ್ಲಿನ ಜನರ ಪ್ರೀತಿ ವಿಶ್ವಾಸವನ್ನು ಸ್ವೀಕರಿಸಿದ್ದೇನೆ. ನಾವು ಜನರ ಜೊತೆ ಹೇಗೆ ವರ್ತಿಸುತ್ತೇವೆ ಅವರು ಸಹ ನಮ್ಮ ಜೊತೆ ಅದೇ ರೀತಿ ವರ್ತಿಸುತ್ತಾರೆ .

ಪಾಂಡವಪುರ ಜನತೆ ನನ್ನನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೇಳಿದರೆ ಅವರು ಹುಬ್ಬು ಹಾರಿಸುತ್ತಾರೆ .ಅದಕ್ಕೆ ನಾನು ಇದು ನಿಮ್ಮ ಹುಟ್ಟೂರು ಸಾರ್ ಬೂಕನಕೆರೆಯಲ್ಲಿ ನೀವು ಜನ್ಮತಾಳಿದ್ದೀರಾ. ಇಲ್ಲಿನ ಜನ ನನಗೂ ಸಹ ವಿಶೇಷ ಪ್ರೀತಿ ತೋರಿಸುತ್ತಿದ್ದಾರೆ ಎಂದು ಹೇಳಿದೆ.

ಸಕ್ಕರೆ ಸಚಿವ ಅರೆಬೈಲು ಶಿವರಾಮ ಅವರೇ ಪಿಎಸ್ಎಸ್ಕೆ ಕಾರ್ಖಾನೆಯನ್ನು ನನಗೆ 40 ವರ್ಷಕ್ಕೆ ಗುತ್ತಿಗೆ ನೀಡಲು ಅಧಿಕಾರವಿತ್ತು .ಆದರೆ ಮುಖ್ಯಮಂತ್ರಿಗಳು ಈ ಭಾಗದ ಜನ ತುಂಬಾ ಕಾನೂನು ಕಾಯ್ದೆಗಳನ್ನು ಕೇಳುತ್ತಾರೆ.

ಹೀಗಾಗಿ ಸಚಿವ ಸಂಪುಟಕ್ಕೆ ತಂದು ಸಂಪುಟದಲ್ಲಿ ನಿರ್ಧಾರ ಮಾಡಿ ಭವಿಷ್ಯದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಪಿಎಸ್ಎಸ್ಕೆ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಿರುವುದಾಗಿ ಸಿಂಎ ನನಗೆ ತಿಳಿಸಿದರು ಎಂದು ಈ ಸಂದರ್ಭದಲ್ಲಿ ಮುರುಗೇಶ್ ನಿರಾಣಿ ಅವರು ಮೆಲುಕು ಹಾಕಿದರು ..

ಈ ಭಾಗದಲ್ಲಿ ಕಬ್ಬು ಕಟಾವಿಗೆ ಬರುತ್ತಿದ್ದು ತ್ವರಿತವಾಗಿ ಕಬ್ಬು ಅರಿಯಲು ಯಂತ್ರೋಪಕರಣಗಳನ್ನು ಸಿದ್ದಪಡಿಸುವಂತೆ ಮುರುಗೇಶ್ ನಿರಾಣಿ ಅವರು ಸೂಚಿಸಿದರು.

Facebook Comments

Sri Raghav

Admin