ಆರ್ಥಿಕ ಸಂಕಷ್ಟದ ನಡುವೆಯೂ 38 ಕೋಟಿ ಆದಾಯಗಳಿಸಿದ ವಾಯುವ್ಯ ಕರ್ನಾಟಕ ಸಾರಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಜೂ.26- ಲಾಕ್‍ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಲಾಕ್‍ಡೌನ್ ಸಡಿಲಿಕೆಯ ಬಳಿಕ ಪ್ರಾರಂಭಗೊಂಡು ಸಂಸ್ಥೆಯ 8 ವಿಭಾಗಗಳಿಂದ 38 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ. ಲಾಕ್‍ಡೌನ್ ಬಳಿಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಬಸ್ ಸೇವೆ ಆರಂಭಗೊಂಡು ಒಂದು ತಿಂಗಳು, ಆರು ದಿನವಾಗಿದೆ.

ಈ ಅವಧಿಯಲ್ಲಿ ಹಾವೇರಿ ವಿಭಾಗದಲ್ಲಿ ಅತಿ ಹೆಚ್ಚು 6.18 ಕೋಟಿ ಹಾಗೂ ಧಾರವಾಡದಲ್ಲಿ ಅತಿ ಕಡಿಮೆ 3.22 ಕೋಟಿ ಸಂಗ್ರಹವಾಗಿದೆ. ಕೊರೊನಾ ಆತಂಕದಿಂದಾಗಿ ಸ್ಥಗಿತಗೊಂಡಿದ್ದ ಬಸ್ ಸೇವೆಯನ್ನು ಲಾಕ್‍ಡೌನ್ ತೆರವು ಬಳಿಕ, ಮಾರ್ಚ್ 19ರಿಂದ ಪುನರಾರಂಭಿಸಲಾಯಿತು. ಪ್ರಯಾಣಿಕರ ಪ್ರಮಾಣ ಕಡಿಮೆ ಇರುವುದರಿಂದ ಸಂಸ್ಥೆಯ 4,684 ಬಸ್‍ಗಳ ಪೈಕಿ 2,300 ಬಸ್‍ಗಳು ಕಾರ್ಯಾಚರಣೆ ನಡೆಸುತ್ತಿವೆ.

ಸಂಸ್ಥೆಯ ತಿಂಗಳ ಆದಾಯಕ್ಕೆ ಹೋಲಿಸಿದರೆ, ವೆಚ್ಚದ ಪ್ರಮಾಣವೇ ಹೆಚ್ಚು. ಲಾಕ್‍ಡೌನ್‍ಗೂ ಮುಂಚೆ ಪ್ರತಿ ತಿಂಗಳು 180 ಕೋಟಿ ಆದಾಯ ಬರುತ್ತಿತ್ತು. ಸಿಬ್ಬಂದಿ ವೇತನ ಸೇರಿದಂತೆ ಇತರ ನಿರ್ವಹಣಾ ವೆಚ್ಚವೂ ಅಂದಾಜು 180 ಕೋಟಿ ಆಗುತ್ತಿತ್ತು. ಈಗ ಎಲ್ಲವೂ ಕಡಿಮೆಯಾಗಿದೆ.

Facebook Comments