ಕೊಹ್ಲಿ ಶತಕದಬ್ಬರಕ್ಕೆ ವಿಂಡೀಸ್ ವೈಟ್‍ವಾಷ್

ಈ ಸುದ್ದಿಯನ್ನು ಶೇರ್ ಮಾಡಿ

ಯುಎಇ, ಆ. 15- ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಆಕರ್ಷಕ ಶತಕ(ಏಕದಿನದಲ್ಲಿ 43ನೆ ಶತಕ) ದ ನೆರವಿನಿಂದ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ 2-0 ಯಿಂದ ಗೆದ್ದುಕೊಂಡಿದೆ. ವರುಣನ ಕಾಟದಿಂದ ಭಾರತಕ್ಕೆ ಗೆಲಲ್ಲಲು 255 ರನ್‍ಗಳ ಗುರಿ ನೀಡಲಾಯಿತು.

ಆರಂಭಿಕ ಆಟಗಾರ ರೋಹಿತ್ ಶರ್ಮಾ 10 ರನ್‍ಗಳಿಗೆ ಔಟಾದರೂ ಧವನ್ ಹಾಗೂ ವಿರಾಟ್ ಕೊಹ್ಲಿ ವಿಂಡೀಸ್ ಬೌಲರ್‍ಗಳನ್ನು ದಿಟ್ಟವಾಗಿ ಎದುರಿಸಿದರು. ಈ ಜೋಡಿಯು 3ನೆ ವಿಕೆಟ್ 66 ರನ್‍ಗಳ ಜೊತೆಯಾಟ ನೀಡುವ ಮೂಲಕ ರನ್‍ರೇಟ್ ಅನ್ನು ಏರಿಸಿಕೊಂಡು ಹೊರಟರು.36 ರನ್ ಗಳಿಸಿದ್ದ ಶಿಖರ್ ಧವನ್ ಆಲನ್ ಬೌಲಿಂಗ್‍ನಲ್ಲಿ ಪೌಲ್‍ಗೆ ವಿಕೆಟ್ ನೀಡಿ ಹೊರ ನಡೆದ ನಂತರ ಬಂದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಶೂನ್ಯ ಸುತ್ತುವ ಮೂಲಕ ಆತಂಕ ಮೂಡಿಸಿದರು.

ಎರಡನೇ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಗಳಿಸಿ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಯುª ಆಟಗಾರ ಶ್ರೇಯಾಸ್ ಅಯ್ಯರ್ ಇಲ್ಲೂ ಕೂಡ ಸ್ಪೋಟಕ ಆಟ ಪ್ರದರ್ಶಿಸಿ 41 ಎಸೆತಗಳಲ್ಲೇ 5 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ 65 ಗಳಿಸಿ ರೋಚ್‍ಗೆ ವಿಕೆಟ್ ಒಪ್ಪಿಸುವ ಮುನ್ನ ತಂಡವನ್ನು ಗೆಲುವಿನ ದಡದಲ್ಲಿ ತಂದು ನಿಲ್ಲಿಸಿದ್ದರು.

ಕೊನೆಯ ಹಂತವರೆಗೂ ತಂಡಕ್ಕೆ ಆಸರೆಯಾಗಿ ನಿಂತಿದ್ದ ನಾಯಕ ವಿರಾಟ್ ಕೊಹ್ಲಿ 14 ಬೌಂಡರಿಗಳ ನೆರವಿನಿಂದ ಅಜೇಯ 114 ರನ್ ಹಾಗೂ ಕೇದಾರ್ ಜಾದವ್‍ರ ಆಕರ್ಷಕ ಬ್ಯಾಟಿಂಗ್ (19 ರನ್, 1 ಬೌಂಡರಿ, 1 ಸಿಕ್ಸರ್) ನೆರವಿನಿಂದ ಇನ್ನೂ 15 ಎಸೆತಗಳು ಬಾಕಿ ಇರುವಂತೆ ಗೆಲುವಿನ ಕೇಕೆ ಹಾಕಿದರು. ವಿಂಡೀಸ್ ಪರ ಅಲನ್ 2 ವಿಕೆಟ್ ಕಬಳಿಸಿದರೆ, ಕಿಮರ್ ರೋಚ್ 1 ವಿಕೆಟ್ ಕೆಡವಿದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್‍ಇಂಡೀಸ್ ಕ್ರಿಸ್‍ಗೇಲ್ 72(8 ಬೌಂಡರಿ, 5 ಸಿಕ್ಸರ್) ಹಾಗೂ ಲಿವೀಸ್ 43( 5 ಬೌಂಡರಿ, 3 ಸಿಕ್ಸರ್) ಹಾಗೂ ಪೂರನ್ (30 ರನ್, 1 ಬೌಂಡರಿ, 3 ಸಿಕ್ಸರ್) ಆಕ್ರಮಣಕಾರಿ ಆಟದಿಂದ 35 ಓವರ್‍ಗಳಲ್ಲಿ 240 ರನ್‍ಗಳ ಸವಾಲಿನ ಮೊತ್ತವನ್ನು ಪೇರಿಸಿದರು.
ಭಾರತ ಪರ ಖಲೀಲ್ ಅಹಮದ್-3, ಮೊಹಮ್ಮದ್ ಶಮಿ-2, ಕೇದಾರ್‍ಜಾಧವ್ ಹಾಗೂ ರವೀಂದ್ರಾಜಾಡೇಜಾ ತಲಾ 1 ವಿಕೆಟ್ ಕೆಡವಿದರು. ಸರಣಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ವಿರಾಟ್ ಪಂದ್ಯ ಹಾಗೂ ಸರಣಿ ಶ್ರೇಷ್ಠರಾದರು.

Facebook Comments