ಕೊರೋನಾದಿಂದ ಪತ್ರಕರ್ತರು ಸಾವನ್ನಪ್ಪಿದರೆ 15 ಲಕ್ಷ ರೂ ಪರಿಹಾರ : ಒಡಿಶಾ ಸರ್ಕಾರ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಭುವನೇಶ್ವರ : ಮಾರಕ ಕೊರೋನಾ ವೈರಸ್, ಪತ್ರಕರ್ತರು ಮತ್ತು ವೈದ್ಯರನ್ನೂ ಕಾಡುತ್ತಿರುವ ಹಿನ್ನಲೆಯಲ್ಲಿ ಒಡಿಶಾ ಸರ್ಕಾರ ಕೋವಿಡ್-19 ವೈರಸ್ ಸೋಂಕಿನಿಂದ ಸಾವನ್ನಪ್ಪುವ ಪತ್ರಕರ್ತರಿಗೆ 15 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ.

ಜೀವ ವಿಮೆ ಸೌಲಭ್ಯವನ್ನು ಒರಿಸ್ಸಾ ಸಿಎಂ ನವೀನ್​​ ಪಟ್ನಾಯಕ್​​ ಘೋಷಣೆ ಮಾಡಿದ್ದಾರೆ. ಹರಿಯಾಣ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಬೆನ್ನಲ್ಲೀಗ ನವೀನ್​​ ಪಟ್ನಾಯಕ್​ ಇಂತಹ ಮಹತ್ವದ ಯೋಜನೆ ಪ್ರಕಟಿಸಿದ್ದಾರೆ.

ಈ ಹಿಂದೆಯಷ್ಟೇ ಹರಿಯಾಣ ಸಿಎಂ ಮನೋಹರ್​​ ಲಾಲ್​ ಖಟ್ಟರ್​​, ಲಾಕ್‌ಡೌನ್‌ ಅಂತಹ ಕಠಿಣ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ 10 ಲಕ್ಷ ಜೀವ ವಿಮೆ ಘೋಷಿಸಿದ್ದರು.

ಕೋವಿಡ್‌-19 ವಿರುದ್ಧದ ಹೋರಾಟದ ಸಂದರ್ಭದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು, ಕೊರೋನಾ ವೈರಸ್ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಪತ್ರಕರ್ತರು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ.

ಮಾರಕ ಕೊರೋನಾ ಜಾಗೃತಿ ಅಭಿಯಾನದಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾದದ್ದು. ಹೀಗಾಗಿ ತಮ್ಮ ಸರ್ಕಾರ ಕೋವಿಡ್-19 ವೈರಸ್ ಸೋಂಕಿನಿಂದ ಸಾವನ್ನಪ್ಪುವ ಪತ್ರಕರ್ತರಿಗೆ 15 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ ಎಂದು ಹೇಳಿದ್ದಾರೆ.

ಮಾರಣಾಂತಿಕ ಕೊರೊನಾ ವೈರಸ್‌ ಈ ಬಗ್ಗೆ ಮಾಹಿತಿ ನೀಡಿರುವ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು, ಕೊರೋನಾ ವೈರಸ್ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಪತ್ರಕರ್ತರು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ.

ಮಾರಕ ಕೊರೋನಾ ಜಾಗೃತಿ ಅಭಿಯಾನದಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾದದ್ದು. ಹೀಗಾಗಿ ತಮ್ಮ ಸರ್ಕಾರ ಕೋವಿಡ್-19 ವೈರಸ್ ಸೋಂಕಿನಿಂದ ಸಾವನ್ನಪ್ಪುವ ಪತ್ರಕರ್ತರಿಗೆ 15 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ ಎಂದು ಹೇಳಿದ್ದಾರೆ.

ಜನ ಜಾಗೃತಿ ಮೂಡಿಸುವಲ್ಲಿ ಪತ್ರಕರ್ತರು ಜೀವ ಭಯ ಬಿಟ್ಟು ದುಡಿಯುತ್ತಿದ್ದಾರೆ. ಒಂದು ವೇಳೆ ಕೊರೊನಾ ವೈರಸ್‌ನಿಂದ ಪತ್ರಕರ್ತರು ಜೀವ ಕಳೆದುಕೊಂಡರೆ, ಅಂತಹವರಿಗೆ ಸರ್ಕಾರದ ವತಿಯಿಂದ 15 ಲಕ್ಷ ರೂ ಪರಿಹಾರ ರೂಪದಲ್ಲಿ ನೀಡಲಾಗುವುದು,” ಎಂದು ಒಡಿಶಾ ಮುಖ್ಯಮಂತ್ರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಕೊರೊನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಇನ್ನಿತರೆ ಆಸ್ಪತ್ರೆ ಸದಸ್ಯರು ಕಾರ್ಯನಿರ್ವಹಿಸುವ ವೇಳೆ ಕೋವಿಡ್‌-19 ಸೋಂಕು ತಗುಲಿ ಮೃತಪಟ್ಟರೆ, ಅವರಿಗೆ 50 ಲಕ್ಷ ರೂ. ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದರು.

ಒಡಿಶಾದಲ್ಲಿ ಒಟ್ಟು 103 ಕೊರೊನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 67 ಕೇಸ್‌ಗಳು ಸಕ್ರಿಯವಾಗಿವೆ. 35 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದರೆ, ಮಾರಣಾಂತಿಕ ಸೋಂಕಿಗೆ ಒಬ್ಬರು ಮೃತಪಟ್ಟಿದ್ದಾರೆ.  ಇನ್ನು ಕೇಂದ್ರ ಸರ್ಕಾರ ಈಗಾಗಲೇ ಕೋವಿಡ್-19 ನಿಂದ ಸಾವನ್ನಪ್ಪುವ ವೈದ್ಯಕೀಯ ಸಿಬ್ಬಂದಿಗಳಿಗೆ ತಲಾ 50ಲಕ್ಷ ರೂ ನೀಡುವ ಕುರಿತು ಘೋಷಣೆ ಮಾಡಿದೆ.

ಭಾರತದಲ್ಲಿ ಕೊರೋನಾ ವೈರಸ್​ ದಾಳಿಗೆ ಜನರು ತತ್ತರಿಸಿದ್ದಾರೆ. ದೇಶದ ಇದುವರೆಗಿನ ಸೋಂಕಿತರ ಪ್ರಮಾಣ ಹೆಚ್ಚಾಗಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಇಂತಹ ಮಹಾರಾಷ್ಟ್ರದ ಮುಂಬೈವೊಂದರಲ್ಲೇ ವಿವಿಧ ಮಾಧ್ಯಮ ಸಂಸ್ಥೆಗಳ 53 ಪತ್ರಕರ್ತರಿಗೆ ಸೋಂಕು ಕಾಣಿಸಿಕೊಂಡಿತ್ತು.

ಇದಾದ ನಂತರ ಚೆನ್ನೈನಲ್ಲೂ 12 ಮಂದಿ ಪತ್ರಕರ್ತರಿಗೆ ಸೋಂಕು ಕಾಣಿಸಿಕೊಂಡಿತ್ತು. ಇವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊರೋನಾ ಚಿಕಿತ್ಸೆ ನೀಡಲಾಗುತ್ತಿದೆ. ಅದೇ ರೀತಿಯಲ್ಲಿ ಕರ್ನಾಕದಲ್ಲೂ ಓರ್ವ ಪತ್ರಕರ್ತರಿಗೆ ಕೊರೋನಾ ಬಂದಿದೆ.

Facebook Comments

Sri Raghav

Admin