ಒಎಫ್‍ಸಿ ಕೇಬಲ್ ತೆರವುಗೊಳಿಸಿದ ಬಿಬಿಎಂಪಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.29- ಮಹದೇವಪುರ ವಲಯದಲ್ಲಿ ಬೆಳ್ಳಂಬೆಳಗ್ಗೆ ಬಿಬಿಎಂಪಿ ಕೇಬಲ್‍ನವರಿಗೆ ಶಾಕ್ ನೀಡಿದೆ. ಬಿಬಿಎಂಪಿ ಅಧಿಕಾರಿಗಳು ಮಹದೇವಪುರ ವಲಯದಲ್ಲಿ ಸಂಚರಿಸಿ ರಸ್ತೆ ಬದಿ ವಿದ್ಯುತ್ ಕಂಬ ಹಾಗೂ ಮರಗಳಲ್ಲಿ ನೇತಾಡುತ್ತಿದ್ದ ಒಎಫ್‍ಸಿ ಕೇಬಲ್ ತೆರವು ಕಾರ್ಯ ಕೈಗೊಂಡರು.

ಮಹದೇವಪುರದಿಂದ ಇಬ್ಬಲೂರು – ಲೌರಿ ಜಂಕ್ಷನ್‍ವರೆಗೂ ಕೇಬಲ್ ತೆರವು ಕಾರ್ಯ ಕೈಗೊಂಡಿದ್ದು, ಬಿಬಿಎಂಪಿ ಮುಖ್ಯ ಅಭಿಯಂತರ ಪರಮೇಶ್ವರಯ್ಯ ನೇತೃತ್ವದಲ್ಲಿ ತೆರವು ಕಾರ್ಯ ನಡೆಯುತ್ತಿದೆ.

ಮಹದೇವಪುರ ವಲಯದ ಔಟರ್ ರಿಂಗ್ ರೋಡ್‍ನಲ್ಲಿ ಕೇಬಲ್ ತೆರವು ಕಾರ್ಯ ಮುಂದುವರೆದಿದೆ. ಒಎಫ್‍ಸಿ ಕೇಬಲ್‍ಗಳು ರಸ್ತೆಗಳಲ್ಲೇ ಬಿದ್ದಿರುತ್ತವೆ. ಕೆಲವು ಕಡೆ ಮರಗಳಲ್ಲಿ ಜೋತಾಡುವುದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ.

ಮರಗಳಲ್ಲೂ ಕೇಬಲ್ ವೈರ್‍ಗಳು ಜೋತಾಡುವುದರಿಂದ ನಗರದ ಸೌಂದರ್ಯಕ್ಕೂ ಧಕ್ಕೆಯಾಗಿದ್ದು, ಪದೇ ಪದೇ ಬಿಬಿಎಂಪಿ ಕೇಬಲ್ ವೈರ್‍ಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದರೂ ಕೇಬಲ್‍ನವರು ಕ್ಯಾರೆ ಎಂದಿರಲಿಲ್ಲ. ಹಾಗಾಗಿ ಇಂದು ಬೆಳ್ಳಂಬೆಳಗ್ಗೆ ಬಿಬಿಎಂಪಿ ಅಡ್ಡಾದಿಡ್ಡಿ ಅಳವಡಿಸಿರುವ ಒಎಫ್‍ಸಿ ಕೇಬಲ್‍ಗಳನ್ನುನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುತ್ತಿದೆ.

Facebook Comments