ಎಣ್ಣೆ ಹೊಡೆದು ಎಲೆಕ್ಷನ್ ಡ್ಯೂಟಿ ಗೆ ಬಂದ ಅಧಿಕಾರಿ ಸಸ್ಪೆಂಡ್

ಈ ಸುದ್ದಿಯನ್ನು ಶೇರ್ ಮಾಡಿ

ಗೋಕಾಕ್,ಡಿ.5- ಪಾನಮತ್ತನಾಗಿ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಮತಗಟ್ಟೆ ಅಧಿಕಾರಿ ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ. ಪ್ರಕಾಶ್ ವೀರಭದ್ರಪ್ಪ ನಾಶಿಪುಡಿ ಅಮಾನತ್ತಾದ ಸಿಬ್ಬಂದಿ. ಇವರು ಸವದತ್ತಿ ತಾಲೂಕು ತೆಂಗಿನಹಾಳ ಪ್ರಾಥಮಿಕ ಶಾಲಾ ಶಿಕ್ಷಕರು. ಡಿ.4ರಂದು ಮದ್ಯಪಾನ ಮಾಡಿ ಮಾಸ್ಟರಿಂಗ್ ಕೇಂದ್ರಕ್ಕೆ ಹಾಜರಾಗಿದ್ದರು.

ಸರ್ಕಾರಿ ವೈದ್ಯರಿಂದ ತಪಾಸಣೆ ನಡೆಸಿದ್ದು ಮದ್ಯಪಾನ ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಸ್.ಪಿ.ಬೊಮ್ಮನಹಳ್ಳಿಯವರು ಅಮಾನತು ಮಾಡಿದ್ದಾರೆ.
ಮತಗಟ್ಟೆ 231ಕ್ಕೆ ಪೊಲಿಂಗ್ ಆಫಿಸರ್ ಆಗಿ ನೇಮಕವಾಗಿದ್ದ ಪ್ರಕಾಶ್ ವೀರಭದ್ರಪ್ಪ ಅವರು, ಮಾಸ್ಟರಿಂಗ್ ಕೇಂದ್ರಕ್ಕೆ ಬಂದಾಗಲೇ ಬಹಳಷ್ಟು ಕುಡಿದಿದ್ದರು. ಹೀಗಾಗಿ ಅಮಾನತು ಮಾಡಲಾಗಿದೆ.

Facebook Comments